ಗುಜರಾತ್:ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭ ಗುಜರಾತ್​​​​​​​​​ನ ಜಾಮ್ ನಗರದಲ್ಲಿ ನಡೆಯುತ್ತಿದೆ. ಮಾರ್ಚ್ 1ರಿಂದ ಆರಂಭವಾದ ಈ ಸಮಾರಂಭ ಮಾರ್ಚ್ 3ರವರೆಗೆ ನಡೆಯಲಿದೆ. ಈ ಗ್ರ್ಯಾಂಡ್ ಪಾರ್ಟಿಯನ್ನು ಇನ್ನಷ್ಟು ಅದ್ಭುತವಾಗಿಸಲು, ಬಾರ್ಬಡಿಯನ್ ಗಾಯಕಿ ರಿಹಾನ್ನಾ ಅವರನ್ನು ಸಹ ಆಹ್ವಾನಿಸಲಾಯಿತು. ಇದೀಗ ವಿವಾಹ ಪೂರ್ವ ಸಮಾರಂಭದಲ್ಲಿ ರಿಹಾನ್ನಾ ಹಾಡುತ್ತಾ ನೃತ್ಯ ಮಾಡಿರುವ ವಿಡಿಯೋಗಳು ಹೊರಬಿದ್ದಿದ್ದು, ಇದು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
ರಿಹಾನ್ನಾ ನೃತ್ಯಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ರಿಹಾನ್ನಾ ನೃತ್ಯದ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ರಿಹಾನ್ನಾ ತಿಳಿ ಹಸಿರು ಬಣ್ಣದ ಉಡುಪನ್ನು ಧರಿಸಿದ್ದು, ಅದ್ಭುತವಾಗಿ ಕಾಣುತ್ತಿದ್ದಾರೆ. ತಮ್ಮ ಧ್ವನಿಯ ಮೂಲಕ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಸಾಮಾಜಿಕ ಮಾಧ್ಯಮ ಬಳಕೆದಾರರು ರಿಹಾನ್ನಾ ಅವರ ವಿಡಿಯೋಗೆ ಹೆಚ್ಚು ಕಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರು ವಾಹ್, ನೀವು ಎಷ್ಟು ಅದ್ಭುತವಾದ ಹಾಡನ್ನು ಹಾಡಿದ್ದೀರಿ, ಪವರ್​​​ಫುಲ್ ಧ್ವನಿ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
A post shared by Viral Bhayani (@viralbhayani)

ಭಾರತದಲ್ಲಿ ಇದು ಮೊದಲ ಪ್ರದರ್ಶನಭಾರತದಲ್ಲಿ ರಿಹಾನ್ನಾ ಅವರ ಮೊದಲ ಪ್ರದರ್ಶನ ಇದಾಗಿದೆ. ಅವರಿಲ್ಲಿ ಪವರ್​​​​​ಫುಲ್ ಪ್ರದರ್ಶನ ನೀಡಿದ್ದು, ಜನರ ಹೃದಯವನ್ನು ಗೆದ್ದಿದ್ದಾರೆ. ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಿದ ನಂತರ, ರಿಹಾನ್ನಾ ಈಗ ಹಿಂತಿರುಗುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಅವರು ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಪ್ರೀತಿ ಮತ್ತು ದಯೆಯ ಸಂದೇಶವನ್ನು ನೀಡಿದ ರಿಹಾನ್ನಾ ಇಬ್ಬರು ಮಹಿಳಾ ಪೊಲೀಸರನ್ನು ಅಪ್ಪಿಕೊಂಡರು.

A post shared by Bollywood Bubble (@bollywoodbubble)
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕೆ ರಿಹಾನ್ನಾ ತಂದ ಪರಿಕರಗಳನ್ನು ನೋಡಿ ಜನತೆ ಹೌಹಾರಿದ್ದರು. ಕೇವಲ ಒಂದು ಅಥವಾ ಎರಡು ಬ್ಯಾಗ್‌ಗಳಲ್ಲ, ರಿಹಾನ್ನಾ ಹಲವಾರು ಪೆಟ್ಟಿಗೆಗಳ ಲಗೇಜ್‌ಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆಗ ನೆಟ್ಟಿಗರು ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು. ಇದೀಗ ಮತ್ತೊಮ್ಮೆ ನೆಟ್ಟಿಗರು ಅವರು ಇಷ್ಟು ಬೇಗ ಹೋಗಬೇಕಾದರೆ ಇಷ್ಟು ಲಗೇಜ್ ಏಕೆ?, ಎರಡು ದಿನಕ್ಕೆ ಇಷ್ಟೊಂದು ವಸ್ತುಗಳ ಅಗತ್ಯವಿತ್ತೇ ಎಂದು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಜನಮನ ಗೆದ್ದ ರಾಧಿಕಾ; ‘ಅಂಬಾನಿ ಕುಟುಂಬದ ಕಿರಿಯ ಸೊಸೆ ಸುಸಂಸ್ಕೃತೆ, ಸ್ವಲ್ಪವೂ ದುರಹಂಕಾರವಿಲ್ಲ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + two =
Remember me
