ಬ್ರಿಡ್ಜ್‌ಟೌನ್:ರಿಹಾನ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿದೇಶಿ ಪಾಪ್​ ಸಿಂಗರ್​ ಆಗಿದ್ದುಕೊಂಡು ಇತ್ತೀಚೆಗೆ ಭಾರತದ ರೈತರ ಹೋರಾಟದ ಬಗ್ಗೆ ಬಾಯಿಬಿಟ್ಟು, ಅನೇಕರ ಕೆಂಗಣ್ಣಿಗೆ ಗುರಿಯಾಗಿದವರು ಅವರು. ಇದೀಗ ಅದೇ ರಿಹಾನ ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಿಹಾನ ಇತ್ತೀಚೆಗೆ ಒಂದು ಫೋಟೋ ಶೂಟ್​ ಮಾಡಿಸಿದ್ದಾರೆ. ಟಾಪ್​, ಒಳಉಡುಪು ಹಾಕದೆಯೇ ಫೋಟೋಶೂಟ್​ ಮಾಡಲಾಗಿದೆ. ಬಟ್ಟೆ ಇಲ್ಲದ ಫೋಟೋದಲ್ಲಿ ರಿಹಾನ ಎರಡು ಮೂರು ಉದ್ದದ ಸರಗಳನ್ನು ತೊಟ್ಟಿದ್ದಾರೆ. ಅದರಲ್ಲಿ ಒಂದು ಸರದಲ್ಲಿ ಹಿಂದೂಗಳ ದೇವರಾದ ಗಣೇಶನ ಪದಕವಿದೆ. ಈ ರೀತಿಯ ಫೋಟೋಕ್ಕೆ, “ಪಾಪ್​ಕಾನ್​ ಮ್ಯೂಸಿಕ್​ ಅವರು ನನಗೆ ಒಳಉಡುಪು ತೊಡದೆಯೇ ಬರಲು ಹೇಳಿದ್ದರು” ಎನ್ನುವ ಕ್ಯಾಪ್ಶನ್​ ಅನ್ನೂ ಕೊಟ್ಟಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಫೋಟೋವನ್ನು ಹಾಕಿರುವ ಬಗ್ಗೆ ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸನಾತನ ಧರ್ಮ ಭಾರತದಲ್ಲಿ ತುಂಬಾ ಸಹಿಷ್ಣು. ತುಂಬಾ ತಾಳ್ಮೆಯಿಂದಿರುತ್ತದೆ. ಇದರಿಂದಾಗಿ ಚಲನಚಿತ್ರ ತಯಾರಕರು, ಜಾಹೀರಾತುದಾರರು ಸೇರಿ ಅನೇಕರು ನಮ್ಮ ದೇವರು ಮತ್ತು ದೇವತೆಗಳ ಬಗ್ಗೆ ವ್ಯಂಗ್ಯವಾಡುತ್ತಾರೆ. ಅದೇ ಕೆಲವು ಧರ್ಮಗಳ ಬಗ್ಗೆ ಇನ್ನೊಂದು ಧರ್ಮದವರು ರೇಖಾಚಿತ್ರ ತಯಾರಿಸಿದರೂ ಅದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಇದು ನಮ್ಮ ತಾಳ್ಮೆಯ ಪರೀಕ್ಷೆ. ಇನ್ನು ತಾಳ್ಮೆ ಕಾಪಾಡಿಕೊಳ್ಳಲು ಆಗದು, ಅದನ್ನೆಲ್ಲ ಮೀರಿ ಈ ಸಮಸ್ಯೆ ಬೆಳೆದುಬಿಟ್ಟಿದೆ” ಎಂದು ದೂರಿದ್ದಾರೆ. (ಏಜೆನ್ಸೀಸ್​)
when@PopcaanMusicsaid “me nuh wan ya wear no lingerie tonight fa me girl”@SavageXFentypic.twitter.com/bnrtCZT7FB
— Rihanna (@rihanna)February 15, 2021

ಬಾಲಿವುಡ್​ನಲ್ಲಿ ಪ್ರಣೀತಾ ಹಂಗಾಮ

ಫೆ.22ರಿಂದ ಶಾಲೆಗಳಲ್ಲಿ ಫುಲ್​ಟೈಂ ತರಗತಿ ಶುರು! ಆದರೆ ಈ ಭಾಗದಲ್ಲಿ ಮಾತ್ರ 6-7ನೇ ತರಗತಿ ಆರಂಭವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
