ನವದೆಹಲಿ: ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ ಭಾರತದ ದಿಗ್ಗಜ ಕಂಪನಿ ಎನಿಸಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯ ಶೇ.6.2 ಹೆಚ್ಚಾಗುತ್ತಿದ್ದಂತೆ, ಹೊಸ ದಾಖಲೆಯನ್ನೇ ಬರೆದಿದೆ.
ತೈಲದಿಂದ ಟೆಲಿಕಾಮ್​ವರೆಗೆ ಹರಡಿಕೊಂಡಿರುವ ರಿಲಯನ್ಸ್​ ಕಂಪನಿ ಮಾರುಕಟ್ಟೆ ಬಂಡವಾಳ ಮೌಲ್ಯವು 200 ಬಿಲಿಯನ್​ ಡಾಲರ್​ಗೂ ಹೆಚ್ಚಾಗಿದೆ. ಈ ಶ್ರೇಯ ಪಡೆದ ಭಾರತದ ಮೊದಲ ಕಂಪನಿ ಇದಾಗಿದೆ. ಜತೆಗೆ, ಎರಡನೇ ಸ್ಥಾನದಲ್ಲಿರುವ ಕಂಪನಿಗಿಂತ ಇದರ ಗಾತ್ರ ದುಪ್ಪಟ್ಟಾಗಿದೆ.
ಇದನ್ನೂ ಓದಿ;ಇಳಿಕೆಯಾಯ್ತಾ ಪಿಎಫ್​ ಬಡ್ಡಿದರ? ಈ ಬಾರಿ ಸಿಗೋದು ಎಷ್ಟು? ಸಭೆಯ ನಿರ್ಧಾರವೇನು?
ರಿಲಯನ್ಸ್​ ಕಂಪನಿಗೆ ಬಂಡವಾಳದ ಮಹಾಪೂರವೇ ಹರಿದು ಬರುತ್ತಿದೆ. ಹೀಗಾಗಿ ಕಂಪನಿಯ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿ ಷೇರಿನ ಬೆಲೆ 2,343.90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಇದರ ಮಾರುಕಟ್ಟೆ ಬಂಡವಾಳ 14.68 ಲಕ್ಷ ಕೋಟಿ ರೂ. ( 200.68 ಬಿಲಯನ್​ ಡಾಲರ್​) ಆಗಿದೆ.ಎರಡನೇ ಸ್ಥಾನದಲ್ಲಿರುವ ಟಿಸಿಎಸ್​ ಕಂಪನಿಯ ಮಾರುಕಟ್ಟೆ ಬಂಡವಾಳ ಪ್ರಮಾಣ 119 ಬಿಲಿಯನ್​ ಡಾಲರ್​ಗೆ ಹೋಲಿಸಿದಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ ಎಂದೇ ಹೇಳಬಹುದು.
ಫೇಸ್​ಬುಕ್​-ಗೂಗಲ್​ನಿಂದ 20 ಬಿಲಿಯನ್​ ಬಂಡವಾಳ ಪಡೆದ ಬೆನ್ನಲ್ಲೇ, ಇತ್ತೀಚೆಗೆ ಸಿಲ್ವರ್​ ಲೇಕ್​ ಕಂಪನಿ 1 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದೆ. ಜತೆಗೆ ಅಮೆರಿಕದ ಕೆಕೆಆರ್​, ಅಬುದಾಬಿ, ದುಬೈನ ಹಲವು ಕಂಪನಿಗಳು ಹೂಡಿಕೆಗೆ ಮುಂದಾಗಿವೆ.
ಇದನ್ನೂ ಓದಿ;ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!
ಇನ್ನೊಂದೆಡೆ, ರಿಲಯನ್ಸ್​ನಲ್ಲಿ 1.46 ಲಕ್ಷ ಕೋಟಿ ರೂ. (20 ಬಿಲಿಯನ್​ ಡಾಲರ್​) ಹೂಡಿಕೆ ಮಾಡಲು ಅಮೆಜಾನ್​ ಮಾತುಕತೆ ನಡೆಸುತ್ತಿದೆ. ಹೀಗಾದಲ್ಲಿ ಕಂಪನಿಯ ಷೇರು ಮೌಲ್ಯ 2,464ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಅಮೆಜಾನ್​ಗೆ ಪೈಪೋಟಿಯಲ್ಲ, ಪಾಲು ಕೊಡ್ತಿದಾರೆ ಅಂಬಾನಿ; 1.46 ಲಕ್ಷ ಕೋಟಿ ಹೂಡಿಕೆಗೆ ಮಾತುಕತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
