ಅಹಮದಾಬಾದ್​:ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತಿನ ಜಾಮ್​ನಗರದಲ್ಲಿ ತಲೆಎತ್ತಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ನಿರ್ಮಾಣ ಮಾಡಲಿದೆ ಎಂಬ ವಿಚಾರವನ್ನು ಗುಜರಾತ್​ನ ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಕೆ.ದಾಸ್​ ಅಸೋಚಾಮ್​ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಜಗತ್ತಿನ ಅತಿದೊಡ್ಡ ಪ್ರತಿಮೆ ಏಕತಾ ಪ್ರತಿಮೆ ಗುಜರಾತಿನಲ್ಲಿರುವಂತೆ, ಜಗತ್ತಿನ ಅತಿದೊಡ್ಡ ಮೃಗಾಲಯವೂ ಗುಜರಾತಿನಲ್ಲೇ ನಿರ್ಮಾಣವಾಗಲಿದೆ. ಒಂದೇ ಜಾಗದಲ್ಲಿ ಅತಿಹೆಚ್ಚು ಬಗೆಯ ಪ್ರಾಣಿ ಸಂಕುಲವಿರುವ ಮೃಗಾಲಯ ಇದಾಗಿರಲಿದ್ದು, ಜಾಮ್​ನಗರದಲ್ಲಿ ನಿರ್ಮಾಣವಾಗಲಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ ಅಂಬಾನಿಯ ಕನಸಿನ ಪ್ರಾಜೆಕ್ಟ್​ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಾಣ ನೆರವೇರಿಸಲಿದೆ.
ಇದನ್ನೂ ಓದಿ:ಮಗಳ ಬಾಯ್​ಫ್ರೆಂಡ್​ ನಮ್ಮ ಮನೆಯಲ್ಲೇ ಇದ್ದ- ಮಗಳ ಡೇಟಿಂಗ್​ ವಿಷ್ಯ ಬಿಚ್ಚಿಟ್ಟ ಒಬಾಮಾ:
ಇದಕ್ಕೆ ಈಗಾಗಲೇ ಸೆಂಟ್ರಲ್ ಝೂ ಅಥಾರಿಟಿ ಅನುಮತಿ ನೀಡಿದೆ. ಈ ಮೃಗಾಲಯಕ್ಕೆ ಗ್ರೀನ್ಸ್ ಝೂವಾಲಾಜಿಕಲ್​ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್​ ಕಿಂಗ್ಡಂ ಎಂಬ ಹೆಸರು ಇರಲಿದೆ. 250.1 ಎಕರೆ ಪ್ರದೇಶದಲ್ಲಿ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರಿಯ ಮೋಟಿ ಖಾವ್ಡಿ ರಿಫೈನರಿ ಪ್ರಾಜೆಕ್ಟ್​ ಸಮೀಪದಲ್ಲೇ ಈ ಮೃಗಾಲಯ ಇರಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಸೆಂಟ್ರಲ್ ಝೂ ಅಥಾರಿಟಿಯ ವೆಬ್​ಸೈಟ್​ನಲ್ಲಿದೆ ಎಂದು ದಾಸ್ ಹೇಳಿದ್ದಾರೆ. (ಏಜೆನ್ಸೀಸ್ )
ನೇಪಾಳ ಸಚಿವ ಸಂಪುಟ ವಿಸರ್ಜಿಸಿದ ಪ್ರಧಾನಿ ಕೆ.ಪಿ.ಶರ್ಮಾ ಒಲಿ; ಏಪ್ರಿಲ್​ನಲ್ಲಿ ಚುನಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + ten =
Remember me
