ನವದೆಹಲಿ:ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಾಖಂಡದ ನೂತನ ಸಿಎಂ ತೀರತ್​ ಸಿಂಗ್​ ರಾವತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು, ಹರಿದ ಜೀನ್ಸ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ #RippedJeans ಎಂಬ ಹ್ಯಾಶ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಉತ್ತರಾಖಂಡ ರಾಜ್ಯ ಆಯೋಗ ಡೆಹ್ರಾಡೂನ್​ನಲ್ಲಿ ಮಂಗಳವಾರ ಆಯೋಜಿಸಿದ್ದ ವರ್ಕ್​ಶಾಪ್​ನಲ್ಲಿ ತೀರತ್​ ಸಿಂಗ್ ನೀಡಿದ ಹೇಳಿಕೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ನಾನು ವಿಮಾನದಲ್ಲಿರುವಾಗ ಹರಿದ ಜೀನ್ಸ್​ ಧರಿಸಿದ್ದ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದರು. ಆಕೆ ಎನ್​ಜಿಒ ನಡೆಸುತ್ತಿರುವುದಾಗಿ ನನ್ನೊಂದಿಗೆ ಹೇಳಿದರು. ಆದರೆ, ಆ ಮಹಿಳೆ ಸಮಾಜಕ್ಕೆ ಯಾವ ಸಂದೇಶವನ್ನು ತಿಳಿಸುತ್ತಿದ್ದಾರೆ ಎನ್ನುವ ಮೂಲಕ ತೀರತ್​ ಅವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿರಿ:ಫೇಸ್​ಬುಕ್​ನಲ್ಲಿ ಈಕೆಯ ಬಲೆಗೆ ಬಿದ್ದವರ ಗತಿ ಅಧೋಗತಿ: ಚಾಲಾಕಿ ಯುವತಿಯ ಖತರ್ನಾಕ್​ ಕೆಲಸವಿದು!
ಇಂತಹ ಮಹಿಳೆಯರು ಸಮಾಜದಲ್ಲಿ ಜನರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಹೊರಟರೆ, ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶವನ್ನು ಸಮಾಜದಲ್ಲಿ ನೀಡುತ್ತಾರೆಂದು ಅಸಮಾಧಾನವನ್ನು ಹೊರಹಾಕಿದರು.
ಇದೇ ವೇಳೆ ಹರಿದ ಜೀನ್ಸ್​ ಅನ್ನು ಸಂಸ್ಕೃತಿಯ ಕತ್ತರಿ ಎಂದು ಕರೆದ ತೀರತ್​, ಬರಿ ಮೊಣಕಾಲನ್ನು ತೋರಿಸುವುದು, ಹರಿದ ಜೀನ್​ ಧರಿಸುವುದು ಮತ್ತು ಶ್ರೀಮಂತರಂತೆ ಕಾಣಲು ಈ ರೀತಿ ಮಾಡುವುದು ಇಂದು ನೀಡುತ್ತಿರುವ ಮೌಲ್ಯಗಳು. ಇವೆಲ್ಲವು ಎಲ್ಲಿಂದ ಬಂದಿತು ಎಂದು ಪ್ರಶ್ನಿಸಿದರು.
ತೀರತ್​ ಅವರ ಈ ಹೇಳಿಕೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದ ಜೀನ್ಸ್​ಗಳ ಫೋಟೋ ಹಾಕಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೀಗಾಗಿ ಟ್ವಿಟರ್​ನಲ್ಲಿ ಹರಿದ ಜೀನ್ಸ್​ ಟ್ರೆಂಡ್​ ಆಗಿದೆ.
ದೇಶದ ‘ಸಂಸ್ಕೃತಿ’ ಮತ್ತು ‘ಸಂಸ್ಕಾರ’ ಮಹಿಳೆಯರನ್ನು ಮತ್ತು ಅವರ ಆಯ್ಕೆಗಳನ್ನು ಕುಳಿತು ನಿರ್ಣಯಿಸುವ ಪುರುಷರಿಂದ ಪ್ರಭಾವಿತವಾಗಿರುತ್ತದೆ ಎಂದು ಸಂಸದೆ ಮತ್ತು ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಟ್ವೀಟ್​ ಮೂಲಕ ಟೀಕಿಸಿದ್ದಾರೆ.
ಇದನ್ನೂ ಓದಿರಿ:ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ
ಇನ್ನೊಬ್ಬರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೇವಲ ಬಟ್ಟೆಯಿಂದ ಅಳೆಯಲಾಗುವುದಿಲ್ಲ. ನೋಡುವ ನೋಟದಲ್ಲೇ ಎಲ್ಲವು ನಿರ್ಧಾರವಾಗುತ್ತದೆ ಎಂದು ಅನೇಕರು ಜಾಲತಾಣದಲ್ಲಿ ತೀರತ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಹರಿದ ಜೀನ್ಸ್​ ಫೋಟೋಗಳನ್ನು ಈ ಕೆಳಗೆ ಕಾಣಬಹುದಾಗಿದೆ.(ಏಜೆನ್ಸೀಸ್​)
ಬೈಕ್​ ಸವಾರನಿಗೆ ಮಧ್ಯದ ಬೆರಳು ತೋರಿದ ಯುವತಿ: ವೈರಲ್​ ವಿಡಿಯೋ ಹಿಂದಿನ ಅಸಲಿ ಕತೆ ಇಲ್ಲಿದೆ!

ಎರಡು ದಿನದ ಹಿಂದೆ ಸಿಡಿ ಯುವತಿ ಮೊಬೈಲ್​ ದೆಹಲಿಯಲ್ಲಿ ಆನ್​! ಈಗೆಲ್ಲಿದ್ದಾಳೆ?

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
