| ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ, ಡಿಪಿಐಐಟಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
21ನೇ ಶತಮಾನದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಯು, ನಾವು ವಾಸಿಸುವ, ಕೆಲಸ ಮಾಡುವ ಮತ್ತು ಸಂವಹನ ನಡೆಸುವ ವಿಧಾನವನ್ನು ಕ್ರಾಂತಿಕಾರಿಗೊಳಿಸಿದ ತ್ವರಿತ ತಾಂತ್ರಿಕ ಪ್ರಗತಿಯಿಂದ ಪ್ರೇರಿತವಾಗಿದೆ. ಡಿಜಿಟಲೀಕರಣ ಮತ್ತು ತಂತ್ರಜ್ಞಾನದ ಅಳವಡಿಕೆಯತ್ತ ಸರ್ಕಾರ ನೀಡಿರುವ ಒತ್ತಿನಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಡಿಜಿಟಲ್ ಮೂಲಸೌಕರ್ಯವು ಗಮನಾರ್ಹವಾಗಿ ರೂಪಾಂತರಗೊಂಡಿದೆ. 1.4 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರ ರಾಷ್ಟ್ರವಾಗಿದೆ. ಭಾರತವು 800 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿದೆ ಮತ್ತು ಪ್ರತಿ ಚಂದಾದಾರರ ಸರಾಸರಿ ಮಾಸಿಕ ಡೇಟಾ ಬಳಕೆ 16 ಜಿಬಿಗಿಂತಲೂ ಹೆಚ್ಚು, ಇದು 2014 ರಿಂದ 266 ಪಟ್ಟು ವೃದ್ಧಿಯನ್ನು ತೋರಿಸುತ್ತದೆ.
ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ (ಎನ್ಒಎಫ್ಎನ್) ಯೋಜನೆಯಂತಹ ಉಪಕ್ರಮಗಳೊಂದಿಗೆ ಇಂಟರ್ನೆಟ್ ಸಂಪರ್ಕ ಮತ್ತು ದೂರಸಂಪರ್ಕ ಮೂಲಸೌಕರ್ಯವನ್ನು ಸುಧಾರಿಸುವ ಭಾರತ ಸರ್ಕಾರದ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿವೆ. ಈ ಕಾರ್ಯಕ್ರಮಗಳ ಜೊತೆಗೆ, ಭಾರತದಲ್ಲಿ ಡೇಟಾ ಕೇಂದ್ರಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಮತ್ತು ದೃಢವಾದ ದೂರಸಂಪರ್ಕ ಮೂಲಸೌಕರ್ಯದ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರವು ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ಅಭಿಯಾನ ಮತ್ತು ರಾಷ್ಟ್ರೀಯ ಡೇಟಾ ಸೆಂಟರ್ ನೀತಿಯನ್ನು ಸಹ ಪ್ರಾರಂಭಿಸಿದೆ. ಇದರ ಫಲವಾಗಿ, ವ್ಯಾಪಾರ ಮತ್ತು ವ್ಯಕ್ತಿಗಳು ತ್ವರಿತ ಇಂಟರ್ನೆಟ್ ವೇಗ, ಉತ್ತಮ ನೆಟ್​ವರ್ಕ್​ ವ್ಯಾಪ್ತಿ ಮತ್ತು ಡಿಜಿಟಲ್ ಸೇವೆಗಳಿಗೆ ಸುಧಾರಿತ ಪ್ರವೇಶದಿಂದ ಪ್ರಯೋಜನ ಪಡೆಯಬಹುದಾಗಿದೆ.
ಇದನ್ನೂ ಓದಿ:RRR​ ಚಿತ್ರದ ಖಳನಟ ರೇ ಸ್ಟೀವನ್ಸನ್ ಇನ್ನಿಲ್ಲ: ಮೇ 25ರಂದು 59ನೇ ಹುಟ್ಟುಹಬ್ಬಕ್ಕೂ ಮುನ್ನವೇ ಕಣ್ಮರೆ
ತನ್ನ ದೀರ್ಘಕಾಲೀನ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸಲು, ಭಾರತವು ವಿಶ್ವದರ್ಜೆಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿದೆ. ಇಂಡಿಯಾ ಸ್ಟ್ಯಾಕ್ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಸಂಗ್ರಹವನ್ನು ಸೂಚಿಸುತ್ತದೆ. ಇದು ಮೂರು ವಿಭಿನ್ನ ಪದರಗಳಿಂದ ಕೂಡಿದೆ: ವಿಶಿಷ್ಟ ಗುರುತು (ಆಧಾರ್), ಪೂರಕ ಪಾವತಿ ವ್ಯವಸ್ಥೆಗಳು (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ -ಯುಪಿಐ), ಆಧಾರ್ ಪಾವತಿ ಸೇತುವೆ, ಆಧಾರ್ ಶಕ್ತ ಪಾವತಿ ಸೇವೆ ಮತ್ತು ಡೇಟಾ ವಿನಿಮಯ (ಡಿಜಿಲಾಕರ್ ಮತ್ತು ಅಕೌಂಟ್ ಅಗ್ರಿಗೇಟರ್)ದಿಂದ ರೂಪಿತವಾಗಿದೆ. ವ್ಯಾಪಕ ಶ್ರೇಣಿಯ ಸಾರ್ವಜನಿಕ ಮತ್ತು ಖಾಸಗಿ ಸೇವೆಗಳಿಗೆ ಆನ್​ಲೈನ್​, ಕಾಗದರಹಿತ, ನಗದುರಹಿತ ಮತ್ತು ಗೋಪ್ಯತೆ-ಸಂರಕ್ಷಿತ ಡಿಜಿಟಲ್ ಪ್ರವೇಶವನ್ನು ಒದಗಿಸಲು ಇವು ಒಟ್ಟಾಗಿ ಕೆಲಸ ಮಾಡುತ್ತವೆ.
ಜಾಮ್ ತ್ರಿಮೂರ್ತಿ – ಜನ್ ಧನ್, ಆಧಾರ್ ಮತ್ತು ಮೊಬೈಲ್ – ಭಾರತದ ಪರಿವರ್ತಿತ ಡಿಜಿಟಲ್ ಪಾವತಿಯ ಹೃದಯಭಾಗದಲ್ಲಿ ಪ್ರಮುಖ ಶಕ್ತ ಸಾಧನಗಳಾಗಿವೆ. ಪ್ರಧಾನಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ) ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿದೆ, ಇದನ್ನು ಆಗಸ್ಟ್ 2014 ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಪ್ರತಿ ಬ್ಯಾಂಕಿಂಗ್ ರಹಿತ ಕುಟುಂಬಕ್ಕೆ ಸಾರ್ವತ್ರಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಪ್ರಾರಂಭವಾಗಿದೆ. ಜನ್ ಧನ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಸಂಪರ್ಕಗಳು ಡಿಜಿಟಲ್ ಇಂಡಿಯಾ ಸ್ಥಾಪನೆಗೆ ಕೊಡುಗೆ ನೀಡಿವೆ. ಇದಲ್ಲದೆ, ಆನ್​ಲೈನ್​ ಶಿಕ್ಷಣ, ಇ-ಮೆಡಿಸಿನ್, ಫಿನ್ಟೆಕ್, ಸುಧಾರಿತ ಕೃಷಿ ಪದ್ಧತಿಗಳಂತಹ ನಿರ್ಣಾಯಕ ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ವೇದಿಕೆಗಳನ್ನು ಬಳಸಿಕೊಳ್ಳಲಾಗಿದೆ. ಕೋವಿನ್ ಮತ್ತು ಡಿಜಿಟಲ್ ಪ್ರಮಾಣಪತ್ರಗಳಂತಹ ಆನ್​ಲೈನ್ ವ್ಯವಸ್ಥೆಗಳನ್ನು ಇಂದು ಪ್ರಪಂಚದಾದ್ಯಂತ ಯಶಸ್ಸಿನ ಗಾಥೆಗಳಾಗಿ ಉಲ್ಲೇಖಿಸಲಾಗುತ್ತಿದೆ.
ಸಾಗಣೆ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಗಮಗೊಳಿಸುವ ಮತ್ತು ದೇಶದಲ್ಲಿ ಸರಾಸರಿ ಸಾಗಣೆ ವೆಚ್ಚವನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಏಕೀಕೃತ ಸಾಗಣೆ ಮುಖಾಮುಖಿ ವೇದಿಕೆ (ಯುಲಿಪ್)ಯ ಡಿಜಿಟಲ್ ಸಾಮರ್ಥ್ಯದಿಂದ ಉದ್ಯಮದ ಪ್ರಮುಖರು ಅಪಾರ ಪ್ರಯೋಜನ ಪಡೆದಿದ್ದಾರೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಪ್ರವೇಶದ ಅಡೆತಡೆಗಳನ್ನು ನಿವಾರಿಸಲು ಮತ್ತು ವ್ಯಾಪಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸಲು ಕಾರಣವಾಗುತ್ತಿದೆ. ಇದು ಇ-ಕಾಮರ್ಸ್ ವಲಯದಲ್ಲಿ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್.ಡಿಸಿ) ಆಗಿ ಗೋಚರಿಸುತ್ತದೆ, ಇದು ಎಂಎಸ್ಎಂಇಗಳಿಗೆ ದೊರೆಯಬಹುದಾದ ಅವಕಾಶಗಳ ಲಾಭವನ್ನು ಪಡೆಯಲು ಎಡೆ ಮಾಡಿಕೊಡುತ್ತಿದೆ.
ತ್ವರಿತ ಮತ್ತು ಪರಿಣಾಮಕಾರಿ ಸರಕುಗಳ ಚಲನೆಯನ್ನು ಸಕ್ರಿಯಗೊಳಿಸಲು, ದೇಶದ ಸಾಗಣೆ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ಭಾರಿ ಹೂಡಿಕೆ ಮಾಡಿದೆ. ಜಿಪಿಎಸ್ ಟ್ರ್ಯಾಕಿಂಗ್, ರೇಡಿಯೋ ತರಂಗಾಂತರ ಗುರುತಿಸುವಿಕೆ (ಆರ್.ಎಫ್.ಐ.ಡಿ) ಮತ್ತು ಸಕಾಲಿಕ ಮೇಲ್ವಿಚಾರಣೆ ಸಾಗಣೆ ಕಾರ್ಯಾಚರಣೆಗಳನ್ನು ಹೆಚ್ಚು ಪಾರದರ್ಶಕಗೊಳಿಸಿದೆ. ಪಿಎಂ ಗತಿ ಶಕ್ತಿ ಮಹಾನ್ ಯೋಜನೆ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ನಕ್ಷೆಯಲ್ಲಿ ದೇಶದ ಎಲ್ಲ ಮೂಲಸೌಕರ್ಯ ಮತ್ತು ಸಾಗಣೆ ಸೌಲಭ್ಯಗಳ ವಿವರಗಳನ್ನು ಡಿಜಿಟಲ್ ವೇದಿಕೆ ಮ್ಯಾಪಿಂಗ್ ಮಾಡುತ್ತದೆ. ಇದಲ್ಲದೆ, ಸರ್ಕಾರಿ ಸೇವೆಗಳು ಮತ್ತು ಪ್ರಕ್ರಿಯೆಗಳ ಡಿಜಿಟಲೀಕರಣವು ವ್ಯವಹಾರಗಳಿಗೆ ನಿಯಮಗಳನ್ನು ಅನುಸರಿಸಲು ಅಗತ್ಯವಿರುವ ಸಮಯ ಮತ್ತು ಶ್ರಮವನ್ನು ತಗ್ಗಿಸುತ್ತದೆ, ಇದರಿಂದಾಗಿ ಹೂಡಿಕೆದಾರರಿಗೆ ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸುಲಭವಾಗುತ್ತದೆ.
ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (ಎನ್ಎಸ್.ಡಬ್ಲ್ಯೂಎಸ್) ಭಾರತ ಸರ್ಕಾರದ ಉಪಕ್ರಮವಾಗಿದ್ದು, ವ್ಯಾಪಾರಿಗಳಿಗೆ ಅಗತ್ಯವಿರುವ ಎಲ್ಲ ದಾಖಲೆಗಳು ಮತ್ತು ಮಾಹಿತಿಯನ್ನು ಒಂದೇ ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ ಸಲ್ಲಿಸಲು ಅನುವು ಮಾಡಿಕೊಡುವ ಮೂಲಕ ವ್ಯವಹಾರಗಳಿಗೆ ಸರ್ಕಾರದ ಅನುಮೋದನೆಯನ್ನು ಸುಗಮಗೊಳಿಸಲು ಡಿಜಿಟಲ್ ಮೂಲಸೌಕರ್ಯವನ್ನು ಬಳಸುತ್ತದೆ, ಜತೆಗೆ ಅನೇಕ ಸಂಸ್ಥೆಗಳಿಗೆ ಭೇಟಿ ನೀಡುವ ಸಮಸ್ಯೆಗೆ ಕಡಿವಾಣ ಹಾಕುತ್ತದೆ ಹಾಗು ಅನುಮತಿಗಳು ಮತ್ತು ಅನುಮೋದನೆಗಳನ್ನು ಪಡೆಯುವುದಕ್ಕೆ ತಗಲುವ ಸಮಯ ಮತ್ತು ವೆಚ್ಚವನ್ನು ತಗ್ಗಿಸುತ್ತದೆ. ಖರೀದಿ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರದರ್ಶಿಸುವ ಮತ್ತೊಂದು ಉದಾಹರಣೆಯೆಂದರೆ ಸರ್ಕಾರಿ ಇ ಮಾರುಕಟ್ಟೆ ತಾಣ (ಜಿಇಎಂ), ಇದು ಖರೀದಿದಾರರು ಮತ್ತು ಮಾರಾಟಗಾರರಿಗೆ ನ್ಯಾಯಯುತ ಮತ್ತು ಸ್ಪರ್ಧಾತ್ಮಕ ರೀತಿಯಲ್ಲಿ ಖರೀದಿ ಚಟುವಟಿಕೆಗಳನ್ನು ಕೈಗೊಳ್ಳಲು ಸಮಗ್ರ, ದಕ್ಷ ಮತ್ತು ಪಾರದರ್ಶಕ ವೇದಿಕೆಯನ್ನು ರಚಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಆನ್ಲೈನ್ ಖರೀದಿ ವೇದಿಕೆಯಾಗಿದೆ.
ಇದನ್ನೂ ಓದಿ:ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​; ಆಟೋದಲ್ಲಿ ಪ್ರಯಾಣಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ
ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮವು ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದ್ದು, ಇದು ದೇಶದಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಪೋಷಿಸಲು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಮಾನ್ಯ ಪ್ರಧಾನ ಮಂತ್ರಿಗಳು 2016 ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾವನ್ನು ಪ್ರಾರಂಭಿಸಿದ್ದರು. ಭಾರತದ ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯು ದೇಶದ ಡಿಜಿಟಲ್ ಮೂಲಸೌಕರ್ಯಕ್ಕೆ ಸಾಕ್ಷಿಯಾಗಿದೆ, ಇದು ಉದ್ಯಮಿಗಳಿಗೆ ಸಾಂಪ್ರದಾಯಿಕ ವ್ಯವಹಾರ ಮಾದರಿಗಳನ್ನು ಆವಿಷ್ಕರಿಸಲು ಮತ್ತು ಅಡ್ಡಿಪಡಿಸಲು ಅಗತ್ಯವಾದ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿದೆ. ಕಳೆದ ಐದು ವರ್ಷಗಳಲ್ಲಿ, ಭಾರತದ ನವೋದ್ಯಮ ವಲಯವು 92,683 ಡಿಪಿಐಐಟಿ ಮಾನ್ಯತೆ ಪಡೆದ ನವೋದ್ಯಮಗಳೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ವ್ಯವಸ್ಥೆಯಾಗಿ ಬೆಳೆದಿದೆ. ಡಿಪಿಐಐಟಿ ಬೌದ್ಧಿಕ ಆಸ್ತಿ ಹಕ್ಕುಗಳಿಗಾಗಿ (ಐಪಿಆರ್) ಸಮರ್ಪಿತವಾದ ಪೋರ್ಟಲ್ ಅನ್ನು ಸ್ಥಾಪಿಸಿದ್ದು ಪೇಟೆಂಟ್ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ರಮಗಳನ್ನು ಪರಿಚಯಿಸಿದೆ.
ಗ್ರಾಹಕರು ಮತ್ತು ಪರಿಸರದ ಬದಲಾಗುತ್ತಿರುವ ಅಗತ್ಯಗಳೊಂದಿಗೆ ಆರ್ಥಿಕ ಪ್ರಕ್ರಿಯೆಗಳು ನಿರಂತರವಾಗಿ ವಿಕಾಸಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ, ಹೊರಹೊಮ್ಮುವ ಭವಿಷ್ಯದ ತಂತ್ರಜ್ಞಾನಗಳು ಬಹುತೇಕ ಎಲ್ಲ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಅನಿವಾರ್ಯ ಅಂಶವಾಗಲಿವೆ. ಈ ಪ್ರಕ್ರಿಯೆಗಳನ್ನು ಹೆಚ್ಚು ಸಮಗ್ರ ಮತ್ತು ಮಾನವೀಯವಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ, ಇದರಿಂದ ಪ್ರಯೋಜನಗಳು ಸಾಧಾರಣ ವ್ಯಕ್ತಿಗೂ ತಲುಪುತ್ತದೆ. ಭಾರತದ ಡಿಜಿಟಲ್ ಮೂಲಸೌಕರ್ಯವು “ಸುಗಮ ವ್ಯಾಪಾರದ ಮೇಲೆ ಜೀವನವನ್ನು ಸುಗಮಗೊಳಿಸುವುದನ್ನು” ಉತ್ತೇಜಿಸಲು ಪ್ರಯತ್ನಿಸುತ್ತದೆ, ಏಕೆಂದರೆ ಇದು ವ್ಯವಹಾರಗಳು ಮತ್ತು ನಾಗರಿಕರು ಇಬ್ಬರಿಗೂ ಪ್ರಯೋಜನ ಪಡೆಯಲು ಸಮಗ್ರ ಮತ್ತು ಪ್ರಜಾಪ್ರಭುತ್ವದ ಭೂರಮೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಶೇ.15ಕ್ಕೆ ಇಳಿಕೆ; ಜೂನ್​ನಿಂದ ಇವಿ ವಾಹನಗಳು ದುಬಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
