
ಬೆಂಗಳೂರು:ಹದಿನೇಳರ ಆ ಹುಡುಗನ ಭಾವಪೂರ್ಣ ಹಾಡಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡಿದ ನಂತರ ನೆಟ್ಟಿಗರು ಭಾವಪರವಶರಾಗಿದ್ದಾರೆ.ಹಾಡುಹಾಡುತ್ತಲೇ ಅಸಂಖ್ಯಾತ ಹೃದಯಗಳನ್ನು ಗೆದ್ದ ರಿಷಭ್ ಗೆ ಎರಡು ವರ್ಷಗಳ ಹಿಂದೆ ಅಪರೂಪದ ಸ್ಥಿತಿಯ ರಕ್ತಹೀನತೆ ಇರುವುದು ಪತ್ತೆಯಾಯಿತು ಮತ್ತು ದುರದೃಷ್ಟವಶಾತ್, ಜುಲೈ 9 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾನೆ.ರಿಷಬ್ ಹಾಡುಗಳಿಗಾಗಿ 2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಮೆಚ್ಚುಗೆ ಗಳಿಸಿದ್ದ. ಆತನ ಸುಮಧುರ ಧ್ವನಿಯನ್ನು ನೆಟ್ಟಿಗರು ಶ್ಲಾಘಿಸಿದ್ದರು. ಆತನ ನಿಧನದ ನಂತರ, ಆತನ ವೀಡಿಯೊಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈಗ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ:ಗೃಹ, ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ…
ಫೇಸ್‌ಬುಕ್ ಬಳಕೆದಾರ ಮೊಂಜಿತ್ ಗೊಗೊಯ್, ರಿಷಬ್ ನ ಎರಡು ಹಾಡುಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.ಒಂದು ವೀಡಿಯೊದಲ್ಲಿ, ವೃಷಭ್ ಆಸ್ಪತ್ರೆಯಲ್ಲಿದ್ದಾಗ, ರಣಬೀರ್ ಕಪೂರ್ ಅವರ ‘ಎ ದಿಲ್ ಹೈ ಮುಷ್ಕಿಲ್’ ಚಲನಚಿತ್ರದ ‘ಚನ್ನಾ ಮೇರೆಯಾ’ ಹಿಟ್ ಹಾಡನ್ನು ಗಿಟಾರ್ ನುಡಿಸುತ್ತ ಹಾಡಿದ್ದ.
https://www.facebook.com/watch/?v=748614809220288
2013 ರ ‘ಯೆ ಜವಾನಿ ಹೈ ದಿವಾನಿ’ ಯ ಹಾಡು ಹಾಡುವ ಮೂಲಕ ಆಸ್ಪತ್ರೆಯ ಆ ಕೋಣೆಯಲ್ಲಿ ಸುಮಧುರ ಸಂಗೀತದ ಅಲೆಯನ್ನೆಬ್ಬಿಸಿದ್ದ. ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ರಿಷಬ್‌ನ ಕೋಣೆಯಲ್ಲಿದ್ದು ಮತ್ತು ಆತನಿಗೆ ಸ್ಫೂರ್ತಿ ನೀಡಿದ್ದರು.ರಿಷಬ್ ಹಾಡಿನ ವೀಡಿಯೊಗಳು ಸಾವಿರಾರು ಲೈಕ್‌ಗಳನ್ನು ಮತ್ತು ಹಂಚಿಕೆಗಳನ್ನು ಗಳಿಸಿದ್ದು, ನೆಟ್ಟಿಗರು ಕಾಮೆಂಟ್‌ ಬಾಕ್ಸ್​​ನಲ್ಲಿ ಭಾವನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ತನ್ನ ವೈದ್ಯರ ಬಳಿ ಹೋಗಿ ಮನೆಯ ದಾರಿ ಕೇಳಿದ ನಾಯಿ!
“ನೀವು ಸಂಗೀತದ ಮೂಲಕ ನಮಗೆ ಸಾಕಷ್ಟು ಸ್ಫೂರ್ತಿ ನೀಡಿದ್ದೀರಿ. ನೀವು ಅಮರರಾಗಿದ್ದೀರಿ” ಎಂದು ಫೇಸ್​​ಬುಕ್ ಬಳಕೆದಾರರು ಆತನ ಸಂಗೀತ ಕಲೆಯನ್ನು ಶ್ಲಾಘಿಸಿ, ನಿಧನಕ್ಕೆ ಅಶ್ರುತರ್ಪಣೆ ಸಲ್ಲಿಸಿದ್ದಾರೆ,ರಿಷಬ್ ದತ್ತಾ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಕಾಕೋಪೊಥರ್ ಮೂಲದವ. ಆತ ಆರಂಭದಲ್ಲಿ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದು ನಂತರ ಬೆಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಆತ ಬ್ರಾಹ್ಮಣನಾಗಿದ್ದರಿಂದಲೇ ಇಷ್ಟೆಲ್ಲ ಚರ್ಚೆ; ವಿಕಾಸ್​ ದುಬೆ ಎನ್​ಕೌಂಟರ್​ಗೆ ಕಾಂಗ್ರೆಸ್​ ಹೊಸ ವ್ಯಾಖ್ಯಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 13 =
Remember me
