ಲಂಡನ್​:ಬ್ರಿಟನ್​ ಪ್ರಧಾನಿಯಾಗಿ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್​ ಅವರು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆ, ಎದುರಾಳಿ ಯಾರೂ ಇಲ್ಲದೇ ಇರುವುದರಿಂದ ಸುನಕ್​ಗೆ ಪ್ರಧಾನಿ ಪಟ್ಟ ಒಲಿಯಿತು.
ಬಿಟ್ರನ್​ ಪ್ರಧಾನಿಯಾಗಿ ಆಯ್ಕೆಯಾಗಲು 100 ಸದಸ್ಯರ ಬೆಂಬಲದ ಅಗತ್ಯವಿತ್ತು. ಆದರೆ, ರಿಷಿ ಸುನಕ್​ ಅವರಿಗೆ 193 ಸದಸ್ಯರ ಬೆಂಬಲ ಸಿಕ್ಕಿದೆ. ಮೊದಲ ಪ್ರಯತ್ನದಲ್ಲಿ ಲೀಸ್​ ಟ್ರಸ್​ ವಿರುದ್ಧ ಅಂತಿಮ ಹಂತದಲ್ಲಿ ಸೋಲು ಅನುಭವಿಸಿದ್ದ ರಿಷಿಗೆ, 2ನೇ ಹಂತದಲ್ಲಿ ಬ್ರಿಟನ್​ ಪ್ರಧಾನಿ ಹುದ್ದೆ ಒಲಿದಿದೆ.
ಯಾರು ಈ ರಿಷಿ ಸುನಕ್​?:42 ವರ್ಷದ ರಿಷಿ ಸುನಕ್ ಅವರು 1980ರಲ್ಲಿ ಸೌತಾಂಪ್ಟನ್​ನಲ್ಲಿ ಜನಿಸಿದರು. ಪೂರ್ವ ಆಫ್ರಿಕಾದಿಂದ ಇಂಗ್ಲೆಂಡ್​ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟ್ಯಾನ್​ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ. ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಅವರನ್ನು ರಿಷಿ ಸುನಕ್​ ಮದುವೆ ಆಗಿದ್ದಾರೆ.
ಬೋರಿಸ್​ ಜಾನ್ಸನ್​ ರಾಜೀನಾಮೆ:ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್​​​​ ಜಾನ್ಸನ್​ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್​ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್​ ಕೂಡ ರಾಜೀನಾಮೆ ನೀಡಿದ್ದರು. ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್​​​​ ಜಾನ್ಸನ್​, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ (ಜುಲೈ 7) ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದರು. ನಂತರ ನಡೆದು ಚುನಾವಣೆಯಲ್ಲಿ ಲಿಜ್​ ಟ್ರಸ್​ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರು. ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ರಿಷಿ ಸುನಕ್ ಎರಡನೇ ಸ್ಥಾನಕ್ಕೆ ಕುಸಿದರು. ಇದೀಗ ರಿಷಿ ಅವರಿಗೇ ಪ್ರಧಾನಿ ಸ್ಥಾನ ಒಲಿದಿದೆ.
2023ಕ್ಕೆ ಒಕ್ಕಲಿಗರಿಗೆ ಮೀಸಲಾತಿ ತರದಿದ್ದರೆ ನಾನು ಮುಖ ತೋರಿಸಲ್ಲ: ಕುಮಾರಸ್ವಾಮಿ ಶಪಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 17 =
Remember me
