ನವದೆಹಲಿ:ಭಾರತದಲ್ಲಿ ಕರೊನಾ ಹಾವಳಿ ವಿಕೋಪಕ್ಕೆ ತಿರುಗುತ್ತಿದ್ದು, ಶೀಘ್ರದಲ್ಲೇ ಪ್ರತಿದಿನದ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ಮುಟ್ಟುವ ಸಂಭವವಿದೆ. ಕಳೆದ 2 ದಿನಗಳಿಂದ 90 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.
ಕರೊನಾಗೆ ತತ್ತರಿಸಿರುವ ರಾಷ್ಟ್ರಗಳ ಜಾಗತಿಕ ಪಟ್ಟಿಯಲ್ಲಿ ಭಾರತ ಸದ್ಯ 2ನೇ ಸ್ಥಾನದಲ್ಲಿದ್ದು, ಪ್ರಕರಣಗಳು ಇದೇ ರೀತಿ ಮುಂದುವರಿದರೆ ಅಮೆರಿಕವನ್ನೂ ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಆತಂಕ ಎದುರಾಗಿದೆ. ಪ್ರತಿದಿನ ಸರಾಸರಿ 1 ಸಾವಿರ ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ. ಕಳೆದೊಂದು ತಿಂಗಳ ಹಿಂದಿದ್ದ ಪ್ರತಿದಿನದ ಗುಣಮುಖರ ಪ್ರಮಾಣ ಈಗ ಇಳಿಕೆಯಾಗಿದೆ.
ಭಾರತದಲ್ಲಿ ಪ್ರತಿದಿನ 60 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದ ವೇಳೆ ಯಲ್ಲಿ ಸುಮಾರು 50 ಸಾವಿರ ರೋಗಿಗಳು ಗುಣಮುಖರಾಗುತ್ತಿದ್ದರು. ಈಗ ಪ್ರತಿದಿನ 90 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿದಿನದ ಗುಣಮುಖರ ಸಂಖ್ಯೆ ಸರಾಸರಿ 65 ಸಾವಿರ ಇದೆ.

ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
