ಕೊಲ್ಲಂ:ಅಪಾಯಕಾರಿ ಸೆಲ್ಫಿ ಮತ್ತು ಮದುವೆ ಫೋಟೋಶೂಟ್ ಮಾಡಿಸುವುದು ಜೀವಕ್ಕೆ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಬೇಕು. ಹೊಸ ಜೀವನ ಆರಂಭಿಸುವ ಉತ್ಸಾಹದಲ್ಲಿರುವಾಗ ನಮ್ಮ ಸಣ್ಣ ಎಡವಟ್ಟೊಂದು ನಮ್ಮ ಜೀವನವನ್ನೇ ದುಃಖ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಆ ರೀತಿ ನಡೆಯದಂತೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
ನಿಮಗೆ ಗೊತ್ತಿರಬಹುದು ಕಳೆದ ನವೆಂಬರ್​ 10ರಂದು ಗುರುವಾಯೂರು ದೇವಸ್ಥಾನದಲ್ಲಿ ಯುವ ಜೋಡಿ, ಮದುವೆ ಫೋಟೋಶೂಟ್​ ನಡೆಸುವ ಸಂದರ್ಭದಲ್ಲಿ ಆನೆಯೊಂದು ಕೆರಳಿ ಮಾವುತನ ಮೇಲೆ ದಾಳಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸ್ವಲ್ಪ ಯಾಮಾರಿದ್ದರೆ ಯುವ ಜೋಡಿಯ ಮೇಲೂ ಆನೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್​ ಬಚಾವ್​ ಆದರು.
ಇದೊಂದೆ ಘಟನೆಯಲ್ಲ, ಇತ್ತೀಚೆಗಷ್ಟೇ ಕೊಲ್ಲಂ ಛಥನೂರಿನಲ್ಲಿ ವಧು-ವರ ಸೆಲ್ಫಿ ತೆಗೆಯಲೆಂದು ಕಲ್ಲು ಕ್ವಾರಿ ಬಳಿ ಹೋಗಿದ್ದರು. ಈ ವೇಳೆ ವಧು ಕಾಲು ಜಾರಿ ಕಲ್ಲು ಕ್ವಾರಿ ಕೊಳಕ್ಕೆ ಬಿದ್ದಿದ್ದಳು. ಆಕೆಯನ್ನು ಕಾಪಾಡಲು ವರ ಕೂಡ ಕ್ವಾರಿಗೆ ಜಿಗಿದಿದ್ದ. ಬಳಿಕ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದರು. ಮದುವೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಈ ಘಟನೆ ನಡೆದಿದ್ದು, ವಧು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ.
ನಿನ್ನೆಯಷ್ಟೇ (ಡಿ.10) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುಂಟ ಆನೆಯೊಂದು ಫೋಟೋಶೂಟ್​ ನಡೆಸುತ್ತಿದ್ದ ದಂಪತಿಯ ಮೇಲೆ ಬಾಳೆದಿಂಡನ್ನು ಎಸೆದಿದೆ. ಈ ಘಟನೆ ಡಿ.5ರಂದು ಪನ್ಮನಾ ಸುಬ್ರಮಣಿಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ದಂಪತಿ ಜೈಶಂಕರ್ ಮತ್ತು ಗ್ರೀಷ್ಮಾ ಫೋಟೋಶೂಟ್ ಮುಗಿಸಿ ಹೊರಡುತ್ತಿದ್ದ ವೇಳೆ ಸರವಣನ್ ಎಂಬ ಆನೆ ದಂಪತಿಯ ಮೇಲೆ ಬಾಳೆ ದಿಂಡನ್ನು ಎಸೆದಿದೆ. ಆ ಬಾಳೆ ದಿಂಡು ಮದುಮಗನ ಹೆಗಲ ಮೂಲಕ ಹಾದುಹೋಯಿತು.
ಅಂದಹಾಗೆ ಆನೆ ಸರವಣನ್​ಗೆ ಗ್ರೀಷ್ಮಾ ಚಿಕ್ಕಂದಿನಿಂದಲೂ ತುಂಬಾ ಪರಿಚಿತೆ. ದೇವಸ್ಥಾನಕ್ಕೆ ಬಂದಾಗಲೆಲ್ಲ ಸರವಣನ್​ಗೆ ಏನಾದಾರೂ ಆಹಾರವನ್ನು ಸರವಣನ್​ ತರುತ್ತಿದ್ದ. ಆದಾಗ್ಯೂ ಈ ಬಾರಿ ಯಾವುದೇ ಆಹಾರವನ್ನು ತರದಿದ್ದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಅಂದಹಾಗೆ ಅಪಾಯದ ಫೋಟೋಶೂಟ್‌ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವವರೆಲ್ಲ ಅಪಾಯವು ನಮ್ಮ ಹತ್ತಿರದಲ್ಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.(ದಿಗ್ವಿಜಯ ನ್ಯೂಸ್​)
ವೆಡ್ಡಿಂಗ್​ ಫೋಟೋಶೂಟ್​ ವೇಳೆ ಕೆರಳಿದ ಆನೆ: ಮಾವುತ ಬಚಾವ್​ ಆಗಿದ್ದೇ ರೋಚಕ, ವಿಡಿಯೋ ವೈರಲ್​

ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!

ಕನಸುಗಳ ಬೆನ್ನತ್ತಿದ ಛಲಗಾರನ ಸಾಹಸಗಾಥೆ ‘ವಿಜಯಾನಂದ’

ಕರ್ನಾಟಕದ ನಟಿಯೊಂದಿಗೆ ಸಲ್ಮಾನ್ ಖಾನ್ ಡೇಟಿಂಗ್? ವೈರಲ್ ಆಗುತ್ತಿವೆ ಇವರಿಬ್ಬರ ಫೋಟೋಗಳು!

ರಾಜಕೀಯಕ್ಕೆ ಬರ್ತಾರಾ ಅಶ್ವಿನಿ ಪುನೀತ್ ರಾಜ್​​ಕುಮಾರ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
