ಅಹಮದಾಬಾದ್:ಕಳೆದ ಕೆಲ ದಿನಗಳಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಹಾಗೂ ಅವರ ಪತ್ನಿ, ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಕೌಟುಂಬಿಕ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ತಮ್ಮ ಮಗ ರವೀಂದ್ರ ಜಡೇಜಾ ಜೊತೆಗಿನ ಸಂಬಂಧದ ಕುರಿತು ಅವರ ತಂದೆ ಅನಿರುದ್ಧ ಸಿನ್ಹಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಿವಾಬಾ ಅದು ಸಂಫೂರ್ಣ ಸ್ಕ್ರಿಪ್ಟೆಡ್‌ ಮತ್ತು ಶುದ್ದ ಸುಳ್ಳು ಎಂದು ಕಿಡಿಕಾರಿದ್ಧಾರೆ.
ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ರಿವಾಬಾ ಅವರಿಗೆ ಪತ್ರಕರ್ತರೊಬ್ಬರು ಕೇಳಿದಾಗ ಅವರು ಸಿಡಿಮಿಡಿಗೊಂಡಿದ್ದಾರೆ. ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ಇಂಥ ವಿಷಯಗಳನ್ನು ಚರ್ಚಿಸುವ ಬದಲು, ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ನಾವು ಇವತ್ತು ಇಲ್ಲಿ ಸೇರಿದ್ದು ಯಾಕೆ ನೀವು ಆ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
પરિવારના વિખવાદ અંગે સવાલ પૂછતાં ભડક્યા રિવાબાજાડેજા.સાંભળો પત્રકારોને શું કહ્યુ ?#RivabaJadeja#Cricketer#RavindraJadeja#Interview#RavindraJadejafather#anirudhsinghjadeja#jamnagar#ravindrajadejanews#controversy#BreakingNews#Rajkot#Jamnagar#video#RavindraJadejafamilypic.twitter.com/RbCGQxA85U
ಇದನ್ನೂ ಓದಿ:100 ರೂ. ನೋಟಿನ ಮೇಲೆ ಗಾಂಧಿ ಬದಲು ಶ್ರೀರಾಮನ ಚಿತ್ರ; ವಿಡಿಯೋ ವೈರಲ್
ರವೀಂದ್ರ ಜಡೇಜಾನನ್ನು ಒಬ್ಬ ಕ್ರಿಕೆಟಿಗನನ್ನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. 20 ಲೀಟರ್ ಹಾಲಿನ ಕ್ಯಾನ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ವಾಚ್‌ಮ್ಯಾನ್‌ ಆಗಿಯೂ ಕೆಲಸ ಮಾಡಿದ್ದೇನೆ. ಜಡೇಜಾ ಸಹೋದರಿ ಆತನಿಗಾಗಿ ನನಗಿಂತ ಹೆಚ್ಚು ಕಷ್ಟಪಟ್ಟಿದ್ದಾಳೆ. ಅವಳು ಅವನನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದರೂ, ಆತ ಮಾತ್ರ ತನ್ನ ಸಹೋದರಿಯೊಂದಿಗೂ ಯಾವುದೇ ಸಂಬಂಧ ಉಳಿಸಿಕೊಂಡಿಲ್ಲ ಎಂದು ಜಡೇಜಾ ತಂದೆ ಕಾರ್ಯಕ್ರಮದಲ್ಲಿ ಆರೋಪಿಸಿದ್ದರು.
ಸಂದರ್ಶನದಲ್ಲಿ ಹೇಳಲಾದ ಎಲ್ಲಾ ವಿಷಯಗಳು ಅರ್ಥಹೀನ ಮತ್ತು ಸುಳ್ಳು. ಇದು ಕೇವಲ ಏಕಪಕ್ಷೀಯ ವಿಚಾರ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಇವು ನನ್ನ ಹೆಂಡತಿಯ ವರ್ಚಸ್ಸಿಗೆ ಧಕ್ಕೆ ತರಲು ಮಾಡಿದ ಪ್ರಯತ್ನ. ಇದು ನಿಜಕ್ಕೂ ಖಂಡನೀಯ ಮತ್ತು ಅಸಹ್ಯಕರವಾಗಿವೆ. ನಾನು ಕೂಡ ಹೇಳಲು ಬಹಳಷ್ಟು ಇದೆ. ಆದರೆ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕ ಮಾಡಲು ನನಗೆ ಇಷ್ಟವಿಲ್ಲ ಎಂದು ಜಡೇಜಾ ತಮ್ಮ ತಂದೆ ನೀಡಿದ್ದ ಹೇಳಿಕೆಗಳಿಗೆ ತಿರುಗೇಟು ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − three =
Remember me
