ಶ್ರೀನಗರ:ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್​ ರಿಯಾಜ್ ನಾಯ್ಕೂನನ್ನು ನಿನ್ನೆ ಅವನ ಊರು ಆವಂತಿಪುರದಲ್ಲೇ ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ.
ಮೋಸ್ಟ್ ವಾಂಟೆಡ್​ ಟೆರರಿಸ್ಟ್​ ರಿಯಾಜ್​ ನಾಯ್ಕೂ ಸೇರಿ ಕೆಲವು ಉಗ್ರರು ಅಲ್ಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ರಕ್ಷಣಾ ಪಡೆಗಳಿಗೆ ಸಿಕ್ಕಿತ್ತು. ಇದೇ ಮಾಹಿತಿಯನ್ನಾಧರಿಸಿ ಅವರು ಕಾರ್ಯಾಚರಣೆ ನಡೆಸಿದ್ದು. ಕೊನೆಗೂ ಬಿಡಲಿಲ್ಲ. ರಿಯಾಜ್​ನನ್ನು ಕೊಂದು ಹಾಕಿದ್ದಾರೆ.
ಇದನ್ನೂ ಓದಿ:ಯೋಧರ ದಾಳಿಗೆ ಬಲಿಯಾದ ಹಿಜ್ಬುಲ್‌ ಮುಜಾಹಿದ್ದೀನ್ ಸಂಘಟನೆ ಕಮಾಂಡರ್​ನ ರಕ್ತಸಿಕ್ತ ಅಧ್ಯಾಯ
ಆದರೆ ಈ ರಿಯಾಜ್​ ನಾಯ್ಕೂ ತನ್ನ ಹಳ್ಳಿಗೆ ಆಗಮಿಸಿದ್ದ ಬಗ್ಗೆ ರಕ್ಷಣಾ ಪಡೆಗೆ ಮಾಹಿತಿ ಕೊಟ್ಟವರು ಯಾರು? ಸಾಮಾನ್ಯವಾಗಿ ಇದನ್ನೆಲ್ಲ ಬಹಿರಂಗಪಡಿಸುವುದಿಲ್ಲ. ಆದರೆ ಈ ಘಟನೆಯಲ್ಲಿ ರಿಯಾಜ್​ ಮಾಹಿತಿ ನೀಡಿದವರ ಹೆಸರನ್ನು ಗುಪ್ತಚರ ಇಲಾಖೆ ಮೂಲ ಬಹಿರಂಗಪಡಿಸಿದೆ.
ರಿಯಾಜ್​ ತನ್ನ ತಂದೆ-ತಾಯಿಯನ್ನು ನೋಡಲು ಆವಂತಿಪುರದ ಹಳ್ಳಿಗೆ ಬರುತ್ತಿದ್ದಾನೆ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಕೊಟ್ಟಿದ್ದು ಇನ್ನೊಂದು ಉಗ್ರಸಂಘಟನೆ. ‘ದಿ ರೆಸಿಸ್ಟನ್ಸ್​ ಫ್ರಂಟ್​’ ಎಂಬ ಉಗ್ರಸಂಘಟನೆ ರಿಯಾಜ್​ ಬಗ್ಗೆ ಮಾಹಿತಿ ನೀಡಿತ್ತು. ಪಾಕಿಸ್ತಾನಿ ಉಗ್ರರ ಈ ಸಂಘಟನೆ ಕಾಶ್ಮೀರದಲ್ಲಿ ಹೊಸದಾಗಿ ರಚನೆಯಾಗಿದೆ. ಸದ್ಯ ಆನ್​ಲೈನ್​ನಲ್ಲಿ ವಿಪರೀತ ಸಕ್ರಿಯವಾಗಿದೆ.
ಇದನ್ನೂ ಓದಿ:ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್​ ಯೋಧರ ಗುಂಡಿಗೆ ಬಲಿ
ದಿ ರೆಸಿಸ್ಟನ್ಸ್​ ಫ್ರಂಟ್​ಗೆ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆ ಮೇಲೆ ಅದೇನೋ ಸಿಟ್ಟು. ಈ ಎರಡೂ ಸಂಘಟನೆಗಳ ನಡುವೆ ವೈರತ್ವ. ಇದೇ ಸಿಟ್ಟಿನಲ್ಲಿ ರಿಯಾಜ್​ ಬಗ್ಗೆ ಸಂಪೂರ್ಣ ವಿವರಣೆಯನ್ನು ಟಿಆರ್​ಎಫ್​ ಗುಪ್ತಚರ ಇಲಾಖೆಗೆ ನೀಡಿತ್ತು.
ರಿಯಾಜ್​ ನಾಯ್ಕೂ ಮೋಸ್ಟ್ ವಾಂಟೆಡ್​ ಉಗ್ರ. ಎಂಟು ವರ್ಷಗಳಿಂದಲೂ ಆತನಿಗಾಗಿ ಭದ್ರತಾ ಪಡೆಗಳು ಹುಡುಕುತ್ತಿದ್ದವು. ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದ. ಈ ಬಾರಿ ಮಿಸ್​ ಆಗದ ಹಾಗೆ ಹೊಡೆದು ಉರುಳಿಸಿವೆ. (ಏಜೆನ್ಸೀಸ್​)
ಇದನ್ನೂ ಓದಿ:ತೆಲಂಗಾಣದಲ್ಲಿ ಪೊಲೀಸ್​ ಪೇದೆಯೇ ಮದ್ಯದ ಕಳ್ಳನಾದಾಗ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − nine =
Remember me
