ನವದೆಹಲಿ:ಈಗಾಗಲೇ ವಿವಾದದ ಸುಳಿಯಲ್ಲಿರುವ ಸಿಲುಕಿರುವ ನೂತನ ಸಂಸತ್​ ಭವನವನ್ನು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)ವು ಶವಪೆಟ್ಟಿಗೆ ಹೋಲಿಸುವ ಮೂಲಕ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಆರ್​ಜೆಡಿ ಹೇಳಿಕೆ ದೇಶದ್ರೋಹದ ಹೇಳಿಕೆ ಎಂದು ಬಿಜೆಪಿ ಹೇಳಿದೆ.
ಇಂದು ನೂತನ ಸಂಸತ್​ ಉದ್ಘಾಟನೆ ನಡುವೆ ಆರ್​ಜೆಡಿ ಟ್ವೀಟ್​ ಮಾಡಿದೆ. ಒಂದು ಕಡೆ ಶವಪೆಟ್ಟಿಗೆಯ ಫೋಟೋ ಮತ್ತು ಇನ್ನೊಂದು ಕಡೆ ಹೊಸ ಸಂಸತ್​ ಫೋಟೋ ಹಾಕಿ ಟ್ವೀಟ್​ ಮಾಡಿರುವ ಆರ್​ಜೆಡಿ ಏನಿದು? ಎಂದು ಅಡಿಬರಹ ನೀಡಿದೆ. ಈ ಮೂಲಕ ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆ (ಕಾಫಿನ್​)ಗೆ ಹೋಲಿಸಿದೆ.
ये क्या है?pic.twitter.com/9NF9iSqh4L
— Rashtriya Janata Dal (@RJDforIndia)May 28, 2023

ಈ ಬಗ್ಗೆ ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಅವರು ಪ್ರತಿಕ್ರಿಯಿಸಿ, ನಮ್ಮ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವುದನ್ನು ಪ್ರತಿನಿಧಿಸುತ್ತದೆ. ಇದನ್ನು ದೇಶ ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾಗಿದೆ ಮತ್ತು ಇದು ಚರ್ಚೆಗಳ ಸ್ಥಳವಾಗಿದೆ ಎಂದಿದ್ದಾರೆ.
#WATCH| The coffin in our tweet is a representation of democracy being buried. The country will not accept this. Parliament is the temple of democracy and it is the place to have discussions…: RJD leader Shakti Singh Yadav on his party comparing the new Parliament with a…pic.twitter.com/bY4yVfFzzJ
— ANI (@ANI)May 28, 2023

ಆರ್​ಜೆಡಿ ಟ್ವೀಟ್​ಗೆ ಬಿಜೆಪಿ ತಿರುಗೇಟು ನೀಡಿದ್ದು, ಹೊಸ ಸಂಸತ್ ಕಟ್ಟಡದ ವಿನ್ಯಾಸವನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಹೇಳಿದೆ.
2024 ರಲ್ಲಿ ದೇಶದ ಜನರು ನಿಮ್ಮನ್ನು ಈ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ ಬಿಜೆಪಿ ವಕ್ತಾರ ಗೌರವ್​ ಭಾಟಿಯಾ ಆರ್​ಜೆಡಿಗೆ ತಿರುಗೇಟು ನೀಡಿದ್ದಾರೆ.
#WATCH| A case of treason should be registered against such people who have compared the new Parliament building with a coffin: BJP leader Sushil Modi on RJD’s tweet comparing the new Parliament building with a coffinpic.twitter.com/K9FYLMELxX
— ANI (@ANI)May 28, 2023

ಐತಿಹಾಸಿಕ ಹೊಸ ಸಂಸತ್​ ಭವನವನ್ನು ಇಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಪಕ್ಕದಲ್ಲಿ ಅಳವಡಿಸಿದರು. ವಿಪಕ್ಷಗಳ ಬಹಿಷ್ಕಾರದ ನಡುವೆಯೂ ಹೊಸ ಸಂಸತ್​ ಭವನ ಉದ್ಘಾಟನೆಯಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಅವರನ್ನು ಅವಮಾನಿಸಲಾಗಿದೆ ಎಂದು ವಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿದೆ.(ಏಜೆನ್ಸೀಸ್​)
ಬಸ್ಸುಗಳಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ; ಬಿಎಂಟಿ‌ಸಿ ಸ್ಪಷ್ಟನೆ

ಪೊಲೀಸರು ವಿಚಾರಣೆಗೆ ಕರೆತರುವಾಗ ಮೇಲ್ಸೇತುವೆಯಿಂದ ಹಾರಿ ಸಾಮಾಜಿಕ ಕಾರ್ಯಕರ್ತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
