ರಾಂಚಿ :ಮೇವು ಹಗರಣಕ್ಕೆ ಸಂಬಂಧಿಸಿದ ಡುಮ್ಕಾ ಟ್ರೆಷರಿ ಕೇಸ್​​ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಅವರಿಗೆ ಇದೀಗ ಮನೆಗೆ ತೆರಳುವ ಅವಕಾಶ ಲಭ್ಯವಾಗಿದೆ.
‘ಡುಮ್ಕಾ ಖಜಾನೆ ಪ್ರಕರಣ’ ಎಂದೇ ಕರೆಯಲ್ಪಡುವ ಈ ಪ್ರಕರಣದಲ್ಲಿ, ಲಾಲು ಅವರು 1990ರ ದಶಕದಲ್ಲಿ ಮುಂಚಿನ ಬಿಹಾರದಲ್ಲಿದ್ದ ಜಾರ್ಖಂಡ್​ ನಗರದ ಖಜಾನೆಯಿಂದ 3.13 ಕೋಟಿ ರೂ. ಹಣವನ್ನು ಅಕ್ರಮವಾಗಿ ಹೊರತೆಗೆದ ಆರೋಪ ಎದುರಿಸುತ್ತಿದ್ದಾರೆ. ಡಿಸೆಂಬರ್ 2017 ರಿಂದ ಜೈಲಿನಲ್ಲಿರುವ 72 ವರ್ಷ ವಯಸ್ಸಿನ ಲಾಲು, ಬಂಧನದ ಅಧಿಕ ಸಮಯವನ್ನು ಝಾರ್ಕಂಡಿನ ರಾಜೇಂದ್ರ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಈ ಜನವರಿ ತಿಂಗಳಲ್ಲಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್​​ಗೆ ಕರೆತರಲಾಗಿತ್ತು.
ಇದನ್ನೂ ಓದಿ:ನಾವು ಬಸ್ ಓಡಿಸಲ್ಲ, ನೀವೆ ಓಡಿಸಿ! ಬಿಎಂಟಿಸಿ ಮತ್ತು ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ
ಹಾಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲುಗೆ ಮೇವು ಹಗರಣಕ್ಕೆ ಸಂಬಂಧಿಸಿದ ಇನ್ನೂ ಮೂರು ಪ್ರಕರಣಗಳಲ್ಲಿ ಅದಾಗಲೇ ಜಾಮೀನು ಲಭಿಸಿತ್ತು. ಇದೀಗ ಡುಮ್ಕಾ ಪ್ರಕರಣದಲ್ಲಿಯೂ ಜಾಮೀನು ಲಭ್ಯವಾಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಲಾಲು ತಮ್ಮ ಮನೆಗೆ ತೆರಳಬಹುದಾಗಿದೆ.
ಜಾಮೀನು ನೀಡಿದ ಝಾರ್ಕಂಡ್​ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು, ಪೂರ್ವಾನುಮತಿ ಇಲ್ಲದೆ ದೇಶವನ್ನು ಬಿಟ್ಟು ಹೋಗಬಾರದು ಹಾಗೂ ತಮ್ಮ ವಿಳಾಸ ಅಥವಾ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬದಲಾಯಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ.(ಏಜೆನ್ಸೀಸ್)
ಕರೊನಾ ಸೋಂಕಿತ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ

ಸಾವಿನಲ್ಲೂ ಕಲೆ ಅರಳಿದೆ ! ಕಾಫಿನ್​ಗಳಿಗೆ ರಂಗು ತುಂಬುವ ಕಲಾವಿದರು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
