ಬಿಹಾರ:ಬ್ರಾಹ್ಮಣರು ಈ ದೇಶಕ್ಕೆ ಸೇರಿಲ್ಲ. ಅವರು ರಾಷ್ಯಾದಿಂದ ಬಂದು ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ ಎಂಬುದು ಡಿಎನ್​ಎ ಪರೀಕ್ಷೆಯಿಂದ ಬಹಿರಂಗವಾಗಿದೆ ಎಂದು ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಹೇಳಿದ್ದಾರೆ. ಇದೀಗ ಆರ್​ಜೆಡಿ ನಾಯಕ ಆಡಿರುವ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜತೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ:‘ನಾನು ಹೇಳಿದ್ದೂ ಆಯ್ತು… ಅವರು ಉತ್ತರಿಸಿದ್ದೂ ಆಯ್ತು’: ‘ವಿಷಕಂಠ’ ಹೇಳಿಕೆ ವಿವಾದ ತಣ್ಣಗಾಗಿಸುವ ಪ್ರಯತ್ನದಲ್ಲಿ ಖರ್ಗೆ!

#WATCH| "The DNA test shows no Brahmins belong to this country and are from Russia and now have settled here. Brahmins are trying to divide us and rule. We should chase them away from here," said RJD leader Yaduvansh Kumar Yadav in Bihar's Supaul yesterdaypic.twitter.com/e2AOUPZTx1
ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಮಾತನಾಡುತ್ತಾ, ಬ್ರಾಹ್ಮಣರು ನಮ್ಮನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ ರಷ್ಯಾ ಮತ್ತು ಯುರೋಪಿಯನ್ ದೇಶಗಳಿಂದ ಬಂದವರು. ಅವರನ್ನು ಅಲ್ಲಿಂದ ಗಡಿ ಪಾರು ಮಾಡಿದ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ನಾವು ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ನೀವು ಕೊಟ್ಟಿರುವ 40% ಹಣದಲ್ಲೇ ಬಿಜೆಪಿ ಶಾಸಕರನ್ನು ಖರೀದಿಸುತ್ತದೆ: ರಾಹುಲ್ ಗಾಂಧಿ
ನಿರ್ಮಲಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಕುರಿತ ಚರ್ಚೆಯ ಸಂದರ್ಭದಲ್ಲಿ ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಬ್ರಾಹ್ಮಣರ ಬಗ್ಗೆ ಟೀಕಿಸಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಯದುವಂಶ್ ಕುಮಾರ್ ಯಾದವ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ ಎಂದು ಬಿಜೆಪಿ ಶಾಸಕ ನೀರಜ್ ಬಬ್ಲು ವಾಗ್ದಾಳಿ ನಡೆಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
