ನವದೆಹಲಿ: ಎಲ್ಲ ಹೆಲ್ಪ್​ಲೈನ್ ನಂಬರ್​ಗಳನ್ನು ಏಕೀಕರಣಗೊಳಿಸಿದ್ದು, ಇನ್ನು ಮುಂದೆ 139 ಮಾತ್ರ ಹೆಲ್ಪ್​ಲೈನ್ ನಂಬರ್ ಆಗಿರಲಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.
ತುರ್ತು ಸಮಸ್ಯೆ, ಗೊಂದಲ, ಟಿಕೆಟ್ ಸಂಬಂಧಿತ ವಿಷಯಗಳನ್ನು ಪರಿಹರಿಸಿಕೊಳ್ಳಲು ಇನ್ನು ಮುಂದೆ 139 ಮಾತ್ರ ಚಾಲ್ತಿಯಲ್ಲಿ ಇರಲಿದೆ. ಆದಾಗ್ಯೂ 182 ನಂಬರ್​ನ ಹೆಲ್ಪ್ ಲೈನ್ ಕೂಡ ಇರಲಿದೆ. ಇದು ರೈಲ್ವೆ ಸುರಕ್ಷೆಗೆ ಬಳಕೆಯಾಗಲಿದೆ.
139 ನಂಬರಿನ ಹೆಲ್ಪ್​ಲೈನ್​ನಲ್ಲಿ 12 ಭಾಷೆಗಳಲ್ಲಿ ವ್ಯವಹರಿಸಬಹುದಾಗಿದೆ. ಇದು ಇಂಟರಾಕ್ಟಿವ್​ ವಾಯ್ಸ್​ ರೆಸ್ಪಾನ್ಸ್​ ಸಿಸ್ಟಂ (ಐವಿಆರ್​ಎಸ್​) ನಲ್ಲಿ ಕೆಲಸಮಾಡುತ್ತದೆ. ಇದಕ್ಕೆ ಯಾವುದೇ ಮೊಬೈಲ್​ ಅಥವಾ ಸ್ಮಾರ್ಟ್​ಫೋನ್​ನಿಂದ ಕರೆಮಾಡಬಹುದಾಗಿದೆ. ಸೆಕ್ಯುರಿಟಿ, ಮೆಡಿಕಲ್ ನೆರವಿಗಾಗಿ ಪ್ರಯಾಣಿಕರು ಒಂದನ್ನು ಒತ್ತಬೇಕು. ಪ್ಯಾಸೆಂಜರ್ ಎನ್​ಕ್ವೈರಿಗೆ 2 ಒತ್ತಬೇಕು. ಕೆಟರಿಂಗ್ ಸಂಬಂಧಿತ ದೂರಿಗೆ 3, ಜನರಲ್ ಕಂಪ್ಲೇಂಟ್​ಗಳಿಗಾಗಿ 4 ಒತ್ತಬೇಕು. ವಿಜಿಲೆನ್ಸ್ ಸಂಬಂಧಿತ ದೂರಿಗಾಗಿ 5 ಒತ್ತಬೇಕು. ಅಪಘಾತ ಸಂಬಂಧಿತ ವಿಚಾರಣೆಗೆ 6, ಕಂಪ್ಲೇಂಟ್​​ಗಳ ಸ್ಟೇಟಸ್ ತಿಳಿದುಕೊಳ್ಳಲು 9 ಒತ್ತಬೇಕು. ಕಾಲ್ ಸೆಂಟರ್ ಪ್ರತಿನಿಧಿಗಳ ಜತೆಗೆ ಮಾತನಾಡಬೇಕಾದರೆ * ಒತ್ತಬೇಕು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
