ಟೆಕ್ಸಾಸ್​:ಅಮೆರಿಕದ ಟೆಕ್ಸಾಸ್​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ನಿವಾಸಿಗಳು. ನರಸಿಂಹರೆಡ್ಡಿ ಮತ್ತು ಲಕ್ಷ್ಮೀ ದಂಪತಿ ಮಾರಿಕಾಳ ವಲಯದ ಪದ್ದಚಿಂತಕುಂತ ಗ್ರಾಮದವರಾಗಿದ್ದು, ಮೌನಿಕಾ ರೆಡ್ಡಿ ಮತ್ತು ಭರತ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದರು. ಮಕ್ಕಳಿಬ್ಬರು ಒಳ್ಳೆಯ ಕೆಲಸ ಸಿಕ್ಕಿದ್ದರಿಂದ ಟೆಕ್ಸಾಸ್​ನಲ್ಲಿ ನೆಲೆಸಿದ್ದರು. ಮೌನಿಕಾಗೆ ಅಮೆರಿಕದಲ್ಲೇ ವ್ಯಕ್ತಿಯೊಬ್ಬನ ಜತೆ ಲವ್​ ಆಗಿತ್ತು. ಹೀಗಾಗಿ ಕಳೆದ ಫೆಬ್ರವರಿಯಲ್ಲಿ ಇಡೀ ಕುಟುಂಬ ಮಗಳು ಮೌನಿಕಾ ಮದುವೆ ಟೆಕ್ಸಾಸ್​ಗೆ ಹೋಗಿತ್ತು.
ಇದನ್ನೂ ಓದಿ:ಕರೊನಾ ರೋಗಿಯ ಮೇಲೆ ಆಂಬುಲೆನ್ಸ್​ ಡ್ರೈವರ್​ ಅತ್ಯಾಚಾರ: ಕರಾಳ ಘಟನೆ ಬಗ್ಗೆ ಸಂತ್ರಸ್ತೆಯ ಮೊದಲ ಪ್ರತಿಕ್ರಿಯೆ!
ಅದೇ ಸಮಯದಲ್ಲಿ ಕರೊನಾ ಉಲ್ಬಣಗೊಂಡು ಲಾಕ್​ಡೌನ್​ ಹೇರಿದ್ದರಿಂದ ಇಡೀ ಕುಟುಂಬ ಅನಿವಾರ್ಯವಾಗಿ ಅಲ್ಲಿಯೇ ನೆಲಸಬೇಕಾಯಿತು. ಅಮೆರಿಕ ಸಮಯ ಪ್ರಕಾರ ಶನಿವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ನರಸಿಂಹರೆಡ್ಡಿ ಸೇರಿದ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ.
ನರಸಿಂಹರೆಡ್ಡಿ, ಪತ್ನಿ ಲಕ್ಷ್ಮೀ ಮತ್ತು ಮಗ ಭರತ ಸ್ಥಳದಲ್ಲೇ ಮೃತಪಟ್ಟರೆ, ಮೌನಿಕಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ನರಸಿಂಹರೆಡ್ಡಿ ಹೈದರಾಬಾದ್​ ಡಿಪೋ-1ರಲ್ಲಿ ಆರ್​ಟಿಸಿ ಕಂಡಕ್ಟರ್​ ಆಗಿದ್ದರು. ಮುಂದಿನ ತಿಂಗಳಷ್ಟೇ ನಿವೃತ್ತಿಯಾಗಬೇಕಿತ್ತು. ಅಷ್ಟರಲ್ಲೇ ದುರಂತ ಸಂಭವಿಸಿದ್ದು, ನರಸಿಂಹರೆಡ್ಡಿ ತವರಿನಲ್ಲಿ ನೀರವ ಮೌನ ಆವರಿಸಿದೆ.(ಏಜೆನ್ಸೀಸ್​)
ಸಮುದ್ರದಿಂದ ತೇಲಿಬಂದ್ವು ಚಿನ್ನ? ಭೀಕರ ಮಳೆ ಲೆಕ್ಕಿಸದೇ ಮೀನುಗಾರರ ದೌಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
