ಕೇರಳ:ಗಣ್ಯ ವ್ಯಕ್ತಿಗಳ ಆಗಮನ-ನಿರ್ಗಮನ ಇಲ್ಲವೇ ಅಪಘಾತ, ಪ್ರಕೃತಿವಿಕೋಪದ ಪರಿಣಾಮವಾಗಿ ರಸ್ತೆ ಬಂದ್ ಆಗುವುದು, ಸಂಚಾರ ಸ್ಥಗಿತಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಒಂದು ವಿಶೇಷ ಕಾರಣಕ್ಕಾಗಿ ರಸ್ತೆ ಬಂದ್ ಆಗಿತ್ತು. ಆ ಕಾರಣ ಮತ್ತೇನೂ ಅಲ್ಲ, ಗಜಪ್ರಸವ.
ಹೌದು.. ಆನೆಯೊಂದರ ಹೆರಿಗೆಯ ಕಾರಣಕ್ಕಾಗಿ ಎರಡು ರಾಜ್ಯಗಳ ನಡುವಿನ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತಮಿಳುನಾಡು ಮತ್ತು ಕೇರಳವನ್ನು ಸಂಪರ್ಕಿಸವು ಮಾರ್ಗದಲ್ಲಿ ಇಡುಕ್ಕಿ ಜಿಲ್ಲೆಯ ಮರಯೂರ್ ಪ್ರದೇಶದಲ್ಲಿ ಈ ಗಜಪ್ರಸವ ಸಂಭವಿಸಿದೆ.
ಈ ಪ್ರದೇಶದಲ್ಲಿ ಆನೆಯೊಂದು ರಸ್ತೆ ಮಧ್ಯೆಯೇ ಹೆರಿಗೆಗೆ ಒಳಗಾದ್ದರಿಂದ ರಸ್ತೆಯ ಎರಡೂ ಕಡೆ ಇಂದು ಬೆಳಗ್ಗೆ ಸುಮಾರು ಒಂದು ಗಂಟೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಹೆರಿಗೆಯ ಬಳಿಕ ಆನೆ ಮರಿಯೊಂದಿಗೆ ಕಾಡನ್ನು ಪ್ರವೇಶಿಸಿದ ನಂತರವೇ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
