ಹೈದರಾಬಾದ್​:ರಸ್ತೆ ದುರಸ್ತಿಗಾಗಿ ಸಂಚಾರ ನಿರ್ಬಂಧಿಸಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ, ರಜಾ ಅವಧಿಯಲ್ಲಿ, ವಾಹನ ಸಂಚಾರ ಕಡಿಮೆ ಇರುವ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬಾರದೇಕೆ ಎಂದು ಸ್ಥಳೀಯಾಡಳಿತಕ್ಕೆ ಶಾಪ ಹಾಕಿರುತ್ತೇವೆ. ಅಂತೆಯೇ, ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳೇ ಇಲ್ಲ ಎನ್ನುವಂತಾಗಿದೆ. ಹೀಗಿರುವಾಗ ರಸ್ತೆ ರಿಪೇರಿ ಮಾಡಿಸಬಾರದೇ ಎಂಬ ಯೋಚನೆ ನಮ್ಮಲ್ಲಿ ಕೆಲವರಲ್ಲಾದರೂ ಬಂದಿರಲಿಕ್ಕೆ ಸಾಕು. ಇಂಥದ್ದೇ ಯೋಚನೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​ ಅವರಿಗೂ ಬಂದಿದೆ. ಹೀಗಾಗಿ ಹೈದರಾಬಾದ್​ನ ಎಲ್ಲ ಪ್ರಮುಖ ರಸ್ತೆಗಳ ಸುಸ್ಥಿತಿಗೆ ಕ್ರಮ ಕೈಗೊಳ್ಳುವಂತೆ ಗುರುವಾರ ಸೂಚಿಸಿದ್ದಾರೆ. ಹೀಗಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಇಲಾಖೆ ಕಾಯರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸದ್ಯ ಹೈದರಾಬಾದ್​ನಲ್ಲಿ ಜನ ಸಂಚಾರ ಅತ್ಯಂತ ವಿರಳವಾಗಿದೆ. ರಾಜಧಾನಿಯಲ್ಲಿರುವ ಬಹುತೇಕರು ಲಾಕ್​ಡೌನ್​ ಘೋಷಣೆ ಬಳಿಕ ಹಳ್ಳಿಗಳತ್ತ ಮುಖಮಾಡಿದ್ದಾರೆ. ಹೈದರಾಬಾದ್​ಗೆ ಹೊಂದಿಕೊಂಡಂತ ಜಿಲ್ಲೆಗಳಲ್ಲಿ ಜನರು ಹೆಚ್ಚಾಗಿರುವುದು ಕಂಡು ಬಂದಿದೆ.
ಈ ನಡುವೆ, ಕರೊನಾ ಹಬ್ಬುವುದನ್ನು ತಡೆಗಟ್ಟಲು ರಸ್ತೆಗಳಲ್ಲಿ ಉಗಿಯುವುದನ್ನು ತೆಲಂಗಾಣ ಸರ್ಕಾರ ನಿಷೇಧಿಸಿದೆ. ಪಾನ್​ ಮಸಾಲಾ, ಗುಟ್ಕಾ, ಎಲೆಅಡಿಕೆ, ತಂಬಾಕು ಹಾಗೂ ತಂಬಾಕು ಉತ್ಪನ್ನ ಮೊದಲಾದವುಗಳನ್ನು ಸೇವಿಸಿ ರಸ್ತೆ ಮೇಲೆ, ಸಾರ್ವಜನಿಕ ಸ್ಥಳಗಳು ಹಾಗೂ ಸಂಸ್ಥೆಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪಿಲಾನಿಯ ಬಿರ್ಲಾ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಆ್ಯಂಡ್​ ಸೈನ್ಸ್​ ವಿದ್ಯಾರ್ಥಿಗಳು ಕರೊನಾ ಮುಂಚೂಣಿ ಪಡೆಯವರಿಗಾಗಿ ಮರುಬಳಕೆಯ ಫೇಸ್​ಶೀಲ್ಡ್​ಗಳನ್ನು ತಯಾರಿಸಿದ್ದಾರೆ. ಒಂದು ಫೇಸ್​ಶೀಲ್ಡ್​ ತಯಾರಿಕಾ ವೆಚ್ಚ 40 ರೂ. ಎಂದು ಅಂದಾಜಿಸಲಾಗಿದೆ.
ಈ ನಡುವೆ, ಹೈದರಾಬಾದ್​ನಲ್ಲಿ ಕೋವಿಡ್​ನ 12 ಹಾಟ್​ಸ್ಪಾಟ್​ಗಳನ್ನು ಗುರುತಿಸಲಾಗಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಪರಿಹಾರ ಸಾಮಗ್ರಿಗೆ ಫೋಟೋ ಅಂಟಿಸಿಕೊಂಡಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
