ನವದೆಹಲಿ:ನಡುರಸ್ತೆಯಲ್ಲಿ ಕೂಲಿ ಕಾರ್ಮಿಕನನ್ನು ಅಡಗಟ್ಟಿದ ಖದೀಮರು ಆತನಿಗೆ ಹೆದರಿಸಿ, ಬೆದರಿಸಿ ಜೇಬಿನಲ್ಲಿದ್ದ 3200 ರೂ. ಹಣವನ್ನು ಕದ್ದು ಪರಾರಿಯಾದ ಘಟನೆ ದೆಹಲಿಯ ಹರಿನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಕಳೆದು ಹೋದ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ
ರಾಷ್ಟ್ರ ರಾಜಧಾನಿಯಲ್ಲಿ ನಡೆದ ದರೋಡೆಕೋರರ ದುಷ್ಕೃತ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದ ನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹಾಡ ಹಗಲೇ ಕಿಡಿಗೇಡಿಗಳ ಗುಂಪೊಂದು ಕೂಲಿ ಕಾರ್ಮಿಕನಿಗೆ ಬೆದರಿಸಿ 3200 ರೂ. ಲೂಟಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳು ಹಣ ಕದ್ದ ನಂತರ ಆತನ ಕತ್ತು ಹಿಸುಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಡಿಯೋ ಪ್ರಕಾರ, ತನ್ನ ಕೈಗಾಡಿಯ ಪಕ್ಕದಲ್ಲಿ ನಿಂತಿದ್ದ ಕೂಲಿ ಕಾರ್ಮಿಕನನ್ನು ಸುತ್ತುವರೆದಿದ್ದ ಮೂವರು, ಆತನ ಬಳಿ ಹಣ ಕೊಡುವಂತೆ ಬೆದರಿಸಿದ್ದಾರೆ. ಹೆಚ್ಚು ಸಮಯ ತೆಗೆದುಕೊಳ್ಳದ ವ್ಯಕ್ತಿ ತನ್ನ ಜೇಬಿನಿಂದ ಹಣವನ್ನು ಕೊಡುತ್ತಾನೆ. ದುಡ್ಡು ಪಡೆದ ನಂತರ ಸ್ಥಳದಿಂದ ಪರಾರಿಯಾಗಲು ತಮಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕೆಂಪು ಟೀ ಶರ್ಟ್‌ ಧರಿಸಿದ್ದ ಕಳ್ಳನು, ವ್ಯಕ್ತಿಯ ಕತ್ತುಹಿಸುಕಿ ಓಡಿ ಹೋಗಿದ್ದಾರೆ.
ಇದನ್ನೂ ಓದಿ:ಬಸವರಾಜ ಬೊಮ್ಮಾಯಿ ಆರೋಗ್ಯಕ್ಕಾಗಿ ಮೃತ್ಯುಂಜಯ ಹೋಮ ಮಾಡಿಸಿದ ಕೆ.ಸುಧಾಕರ್
ನಡುರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತನ ಸಹಾಯಕ್ಕೆ ಕೂಡಲೇ ಯಾರು ಆಗಮಿಸಿಲ್ಲ, ಉಸಿರುಗಟ್ಟಿದ ಪರಿಣಾಮ ಆತ ಕೆಲ ಸಮಯ ನರಳಾಡಿರುವುದು ದೃಶ್ಯದಲ್ಲಿ ಕಂಡುಬಂದಿದೆ,(ಏಜೆನ್ಸೀಸ್).
BiggBoss Kannada S10: ಯಾರು ಅವಕಾಶವಾದಿಗಳು?; ಮಧ್ಯರಾತ್ರಿ ನಡೆಯಿತು ಗ್ರೂಪಿಸಮ್ ಚರ್ಚೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + thirteen =
Remember me
