ಭುವನೇಶ್ವರ:ಬಾಲಿವುಡ್​​ನಲ್ಲಿ ತೆರೆ ಕಂಡಿರುವ ಧೂಮ್​ ಚಿತ್ರದ ಪ್ರೇರಣೆಯಿಂದಈ ಖತರ್ನಾಕ್​ ಕಳ್ಳರು ಮಾಡಿರುವ ಕಳ್ಳತನಕ್ಕೆ ಎಂತಹವರೂ ಬೆರರಾಗುತ್ತಾರೆ.
ಹೈಫ್ರೊಫೈಲ್​ ಕಳ್ಳತನ ಮಾಡುವುದು ಹೇಗೆ, ಅದಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದನ್ನು ಹಿಂದಿಯಲ್ಲಿ ತೆರೆ ಕಂಡ ಧೂಮ್​ ಸರಣಿ ಚಿತ್ರಗಳೇ ಉದಾಹರಣೆಯಾಗಿವೆ. ಭಾರೀ ಹಿಟ್​ ಆದ ಈ ಚಿತ್ರಗಳು ಇದೀಗ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತಿದೆ.
ಧೂಮ್​ ಚಿತ್ರ ವೀಕ್ಷಿಸಿದ ಕಳ್ಳರು, ಒಡಿಶಾದ ಶಾಲಾ ಕೊಠಡಿಗೆ ಶುಕ್ರವಾರ ರಾತ್ರಿ ನುಗ್ಗಿ ಅಲ್ಲಿದ್ದ ಕಂಪ್ಯೂಟರ್ಸ್​​, ಪ್ರಿಂಟರ್ಸ್​​ ಹಾಗೂ ಎಲೆಕ್ಟ್ರಾನಿಕ್​ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿರುವುದಷ್ಟೇ ಅಲ್ಲ, ಬದಲಾಗಿ ಬೋರ್ಡ್​ ಮೇಲೆ ಧೂಮ್​​-4, ಶೀಘ್ರದಲ್ಲೇ ಮತ್ತೆ ಬರುತ್ತೇವೆ ಎಂದು ಬರೆದಿದ್ದಾರೆ.
ಮಾರನೇ ದಿನ ಶಾಲಾ ಕೊಠಡಿಯನ್ನು ತೆರೆದ ಶಿಕ್ಷಕರು ಇದನ್ನು ನೋಡಿ ದಂಗಾಗಿದ್ದಾರೆ. ಅರೇ ಕಳ್ಳತನ ಮಾಡಿದ್ದಲ್ಲದೇ ಮತ್ತೆ ಬರುತ್ತೇನೆ ಎಂದು ಹೇಳಿರುವ ಈ ಕಳ್ಳರ ಧೈರ್ಯವನ್ನು ಮೆಚ್ಚಲೇಬೇಕಿದೆ ಎಂದು ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹುಬ್ಬೇರಿಸಿದ್ದಾರೆ.
ಖತಿಗುಡಾದ ಇಂದ್ರಾವತಿ ಪ್ರೌಢ ಶಾಲೆಯಲ್ಲಿ ಈ ಕಳ್ಳತನ ನಡೆದಿದೆ, ಶಾಲೆಯಲ್ಲಿದ್ದ ಪ್ರಿಂಟರ್​, ಕಂಪ್ಯೂಟರ್​ ಕಳವು ಮಾಡಿದ್ದಲ್ಲದೇ, ನಿಮಗೆ ತಾಕತ್ತಿದ್ದರೆ ನಮ್ಮನ್ನು ಹಿಡಿಯಿರಿ ಎಂದು ಬೋರ್ಡ್​ ಮೇಲೆ ಬರೆದು ಸವಾಲು ಕೂಡ ಹಾಕಿದ್ದಾರೆ.ಸದ್ಯ ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಸರಬೇಶ್ವರ್​ ಬೆಹ್ರಾ ಅವರು ಖತಿಗುಡದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಧೂಮ್​ ಕಳ್ಳರನ್ನು ಪೊಲೀಸರು ಹಿಡಿಯುವರೇ ಎಂಬುದನ್ನು ಕಾದುನೋಡಬೇಕಿದೆ.(ಏಜೆನ್ಸೀಸ್​)
ಹಣಕ್ಕಾಗಿ ಮನೆ ಮಾಲೀಕನ ಮಗನನ್ನೇ ಕಿಡ್ನ್ಯಾಪ್​ ಮಾಡಿ ವಿಫಲ ಯತ್ನ, 24 ಗಂಟೆಯಲ್ಲೇ ಸೆರೆಸಿಕ್ಕ ಖದೀಮ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
