ಅಹಮದಬಾದ್​:ವಜ್ರ ತುಂಬಿದ ಬ್ಯಾಗ್​ಗಳನ್ನು ಕಳ್ಳರ ಗುಂಪೊಂದು ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿರುವ ಘಟನೆ ಗುಜರಾತಿನ ಸೂರತ್​ ನಗರದಲ್ಲಿ ನಡೆದಿದೆ. ದರೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಚೇಸಿಂಗ್​ನಲ್ಲಿ ಪೊಲೀಸರು ಆರೋಪಿಗಳನ್ನು ನೆರೆಯ ವಲ್ಸದ್​ ಜಿಲ್ಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೂರತ್​ ಡಿಸಿಪಿ ಭಕ್ತಿ ಥಾಕರ್​ ಅಂಗಡಿಯಾನ ಎಂಬ ಕೊರಿಯರ್​ ಸಂಸ್ಥೆಯ ಸಿಬ್ಬಂದಿ ವಜ್ರ ತುಂಬಿದ ಬ್ಯಾಗುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಲು ತಯಾರಿ ನಡೆಸುತ್ತಿದ್ದರು. ಪ್ರತಿನಿತ್ಯ ಅಂಗಡಿಯಾನ ಕೊರಿಯರ್​ ಕಂಪನಿಯಿಂದ ಬೆಲೆಬಾಳುವ ವಸ್ತುಗಳನ್ನು ಸಾಗಿಸಲಾಗುತ್ತದೆ ಎಂಬ ವಿಚಾರ ತಿಳಿದ ಆರೋಪಿಗಳು ಹೊಂಚು ಹಾಕಿ ದರೋಡೆ ಮಾಡಿದ್ದಾರೆ.
સુરતમાં આંગડિયા પેઢીના કર્મચારી પાસે લૂંટ ચલાવાય@CMOGuj@CP_SuratCity@ANI@CP_SuratCity@sanghaviharshpic.twitter.com/fL5u2xLkdA
ಇದನ್ನೂ ಓದಿ:ಜೈಲರ್​​ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ
ಬಂಧಿತ ಆರೋಪಿಗಳು ದರೋಡೆ ಮಾಡುವ ವೇಳೆ ಕೊರಿಯರ್​​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಐದು ಬ್ಯಾಗುಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. 5.5 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಖದೀಮರು ದೋಚಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಆರೋಪಿಗಳನ್ನು ಸುಮಾರು ಮೂರು ಘಂಟೆಗಳಿಗೂ ಹೆಚ್ಚು ಕಾಲ ಬೆನ್ನಟ್ಟಿ ನೆರೆಯ ವಲ್ಸದ್​ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, 5.5 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕೊರಿಯರ್​ ಕಂಪನಿಗೆ ಹಿಂತಿರುಗಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದು ಯಾವುದೋ ಸಿನಿಮಾದ ಶೂಟಿಂಗ್​ ಇರಬೇಕೆಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ನಿಜ ಜೀವನದಲ್ಲಿ ಈಗೆ ನಡೆಯುತ್ತಾ ಎಂದು ವಿಡಿಯೋ ನೋಡಿ ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
