ಹೈದರಾಬಾದ್‌:ಶ್ರೀರಾಮ ನವಮಿ ಪ್ರಯುಕ್ತ ಹೈದರಾಬಾದ್​ನಲ್ಲಿ ಬೃಹತ್​ ಶೋಭಾಯಾತ್ರೆ ಆಚರಿಸಲಾಯಿತು. ಬಿಸಿಲನ್ನೂ ಲೆಕ್ಕಿಸದೆ ಸಹಸ್ರಾರು ಭಕ್ತರು ಸಂಭ್ರಮದಿಂದ ಪಾಲ್ಗೊಂಡು ಕಿಲೋಮೀಟರ್​ಗಟ್ಟಲೆ ಹೆಜ್ಜೆಹಾಕಿದರು. ಆದರೆ ದುಷ್ಕರ್ಮಿಗಳು ಭಕ್ತರನ್ನು ಟಾರ್ಗೆಟ್​ ಮಾಡಿ 50ಕ್ಕೂ ಹೆಚ್ಚು ಮಾಂಗಲ್ಯ ಸರ, ಮೊಬೈಲ್​ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದಾರೆ.
ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಜಿ -4 ಸದಸ್ಯ ರಾಷ್ಟ್ರಗಳಿಗೆ ಅಮೆರಿಕಾ ಬೆಂಬಲ!
ಭಾಗ್ಯನಗರಿಯಲ್ಲಿ ಶೋಭಾಯಾತ್ರೆ ಸಾಗಿದ ರಸ್ತೆಗಳಲ್ಲಿ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಗುತ್ತಿತ್ತು. ಹಲವೆಡೆ ಅನ್ನದಾನ ಕಾರ್ಯಕ್ರಮಗಳು ನಡೆದವು. ಮಹಿಳೆ, ಮಕ್ಕಳೆನ್ನದೆ ಎಲ್ಲರೂ ಶೋಭಾಯಾತ್ರೆಯ ಸಂದರ್ಭದಲ್ಲಿ ಶ್ರೀರಾಮ ಭಕ್ತಿ ಪರವಶತೆಯಲ್ಲಿ ಮುಳುಗಿದ್ದಾಗ ಹೊಂಚು ಹಾಕಿ ದುಷ್ಕರ್ಮಿಗಳು ಎಷ್ಟು ಸಾಧ್ಯವೋ ಅಷ್ಟು ಆಭರಣ, ಮೊಬೈಲ್​ ಫೋನ್​ಗಳನ್ನು ದರೋಡೆ ಮಾಡಿದ್ದಾರೆ.
ಶೋಭಾಯಾತ್ರೆಯಲ್ಲಿ ಶ್ರೀರಾಮ ದೇವರ ಬೃಹತ್​ ಚಿತ್ರಪಟದ ಮೆರವಣಿಗೆ ನಡೆದಿದ್ದು, ದೇವರ ದರ್ಶನಕ್ಕಾಗಿ ಮನೆಗಳಿಂದ ಹೊರಬಂದು ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಸ್ಪಷ್ಟ ಸ್ಕೆಚ್ ಹಾಕಿ ಚೈನ್, ಬ್ರೇಸ್, ಮೊಬೈಲ್ ಗಳನ್ನು ಕದ್ದೊಯ್ದಿದ್ದಾರೆ. ಆಭರಣ, ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರು ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ.
ಕೆಲವು ದುಷ್ಕರ್ಮಿಗಳು ಭಕ್ತರನ್ನು ಗುರಿಯಾಗಿಸಿಕೊಂಡು ಭಕ್ತರಂತೆ ನಟಿಸುತ್ತ ಕೈಚಳಕ ತೋರಿದ್ದಾರೆ. ಇದೊಂದು ದೊಡ್ಡ ಗ್ಯಾಂಗ್​ನ ಕೃತ್ಯವಾಗಿದೆ. ಗ್ಯಾಂಗ್ ಸದಸ್ಯರು ಕದ್ದ ವಸ್ತುಗಳನ್ನು ಕೈ ಬದಲಿಸಿ ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕೆಲವು ಕಳ್ಳರು ಭಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಭಕ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಮೂಲಕ ಇತರ ಕಳ್ಳರ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೀತಾರಾಮ್ ಬಾಗ್ ದೇವಸ್ಥಾನ, ಮಂಗಲ್ ಹತ್ ನಿಂದ ಹನುಮಾನ್ ವ್ಯಯಮಶಾಲೆ ಹಾಗೂ ಸುಲ್ತಾನ್ ಬಜಾರ್ ವರೆಗೆ ಶೋಭಾಯಾತ್ರೆ ನಡೆಯಿತು. ಮಂಗಲ್ ಮಾಟ್, ಶಾಹಿನಾಯತ್ ಗಂಜ್, ಅಫ್ಜಲ್ ಗಂಜ್ ಮತ್ತು ಸುಲ್ತಾನ್ ಬಜಾರ್ ಪೊಲೀಸ್ ಠಾಣೆಗಳಲ್ಲಿ 50 ಕ್ಕೂ ಹೆಚ್ಚು ಜನರು ಆಭರಣ, ಮೊಬೈಲ್​ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಬಿಡುಗಡೆಯಾದ ತಿಂಗಳಲ್ಲೇ ಓಟಿಟಿಗೆ ಯುವ! ಯಾವ ಪ್ಲಾಟ್‌ಫಾರ್ಮ್ ನಲ್ಲಿ ಸ್ಟ್ರೀಮ್? ಇಲ್ಲಿದೆ ಮಾಹಿತಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + sixteen =
Remember me
