ಭೋಪಾಲ್​:ಪ್ರಪಂಚದಲ್ಲಿ ಎಂತೆದ್ದದ್ದೋ ಕಳ್ಳರಿರುತ್ತಾರೆ. ಅದೇ ರೀತಿ ಈ ಕಳ್ಳ ಕೂಡ ತೀರಾ ವಿಚಿತ್ರದವನೇ. ದೇವಸ್ಥಾನಕ್ಕೆ ಕದಿಯಲು ಬಂದ ಈತ, ದೇವಸ್ಥಾನದ ಒಳಗೇ ನಿದ್ರೆ ಮಾಡುತ್ತಾನೆ. ಬೆಳಗ್ಗೆ ಈತನ ಬಂಧನಕ್ಕೆ ಬಂದ ಪೊಲೀಸರಿಗೆ, ಚಳಿ ಇದೆ, ಸ್ವಲ್ಪ ಹೊತ್ತು ಮಲಗ್ತೀನಿ ಎಂದು ಹೇಳಿದ್ದಾನೆ!
ಇದನ್ನೂ ಓದಿ:‘ಬಿಜೆಪಿಯೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​​!’ ಕೆಲ ತಿಂಗಳ ಹಿಂದೆ ಬಿಜೆಪಿಯೊಂದಿಗಿದ್ದ ನಾಯಕನ ಹೇಳಿಕೆ
ಹೌದು. ಇದು ನಿಜವೇ. ಇಂತದ್ದೊಂದು ಘಟನೆ ಮಧ್ಯಪ್ರದೇಶದ ಶಾಜಾಪುರದ ಲಾಲ್‌ಬಾಯ್ ಫುಲ್ಬಾಯ್ ದೇವಸ್ಥಾನಲ್ಲಿ ನಡೆದಿದೆ. ದೇವಸ್ಥಾನಕ್ಕೆ ಕನ್ನ ಹಾಕಲು ಮುಂದಾದ ಕಳ್ಳ, ರಾತ್ರಿ ವೇಳೆ ದೇವಸ್ಥಾನದ ಬಳಿ ಬಂದು ದೇವಸ್ಥಾನದ ಬಾಗಿಲು ಮುರಿದಿದ್ದಾನೆ. ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತು ಇಡಲೆಂದು ಮಾಡಲಾಗಿದ್ದ ಕೋಣೆಯನ್ನೂ ಮುರಿದಿದ್ದಾನೆ. ಅಲ್ಲಿದ್ದ ಸಾಮಾನನ್ನೆಲ್ಲ ಗಂಟು ಕಟ್ಟಿಕೊಂಡಿದ್ದಾನೆ. ಅಷ್ಟರಲ್ಲಿ ಆತನಿಗೆ ನಿದ್ರೆ ಬಂದಿದೆ. ಕೋಣೆಯ ಬಾಗಿಲು ಹಾಕಿಕೊಂಡು, ಅಲ್ಲೇ ಇದ್ದ ಮಂಚದ ಮೇಲೆ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದಾನೆ.
ಬೆಳಗ್ಗೆ ದೇವಸ್ಥಾನದ ಪೂಜಾರಿ, ದೇವರ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಿದ್ದಾನೆ. ಆಗ ಅವನಿಗೆ ಆಘಾತವಾಗಿದೆ. ದೇವಸ್ಥಾನದ ಬೀಗ ಮುರಿದಿದೆ, ಒಳಗಿನ ಕೋಣೆ ಒಳಗಿನಿಂದ ಲಾಕ್​ ಆಗಿದೆ ಎನ್ನುವುದು ಗೊತ್ತಾದಾಕ್ಷಣ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಇದನ್ನೂ ಓದಿ:ಬೈಕ್​ ಸವಾರನ ಮೇಲೆ ಖಾಸಗಿ ಬಸ್ಸು ಹರಿದು ಸಾವು! ಸ್ಥಳೀಯರ ಆಕ್ರೋಶಕ್ಕೆ ಸುಟ್ಟು ಭಸ್ಮವಾದ ಬಸ್ಸು
ಪೊಲೀಸರು ಕೋಣೆಯ ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಗಾಢ ನಿದ್ರೆಯಲ್ಲಿದ್ದ ಕಳ್ಳನನ್ನು ಎಬ್ಬಿಸಲಾಗಿದೆ. ಎದ್ದೊಡನೆ ಪೊಲೀಸರನ್ನು ನೋಡಿದ ಕಳ್ಳ, ‘ತುಂಬಾ ಚಳಿ ಇದೆ, ಸ್ವಲ್ಪ ಹೊತ್ತು ಮಲಗ್ತೀನಿ. ಆಮೇಲೆ ಪೊಲೀಸ್​ ಸ್ಟೇಷನ್​ಗೆ ಹೋಗೋಣ’ ಎಂದು ಹೇಳಿದ್ದಾನೆ. ಕಳ್ಳನ ವರ್ತನೆಯಿಂದ ನಕ್ಕ ಪೊಲೀಸರು, ಆತನನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಕಳ್ಳತನವಾಗದಿರುವಂತೆ ದೇವಿಯೇ ಕಾಪಾಡಿದ್ದಾಳೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್​)
ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
