ಪಾಟ್ನಾ:ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಇದೀಗ ಲೋಕಸಭಾ ಚುನಾವಣೆ ಸರ್ಧೆಗೆ ಮುಂದಾಗಿದ್ದು, ತಂದೆಯ ಕ್ಷೇತ್ರದಿಂದಲೇ ಕಣಕ್ಕೆ ಇಳಿದಿರುವುದು ಅನೇಕರಿಗೆ ಭಾರೀ ಆಶ್ಚರ್ಯ ಮೂಡಿಸಿದೆ. ಅದರಲ್ಲೂ ಲಾಲು ಪ್ರಸಾದ್​ ಯಾದವ್ ಅವರ ಎದುರಿಗೆ ನಿಂತು, ತಂದೆಯ ವಿರುದ್ಧವೇ ಎಲೆಕ್ಷನ್ ಗೆಲ್ಲುವ ಸವಾಲು ಹಾಕಿದ್ದಾರೆಯೇ ಎಂದು ಅನೇಕರು ಭಾರೀ ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಅಸಲಿಗೆ ಇದು ತಪ್ಪು ಕಲ್ಪನೆ!
ಇದನ್ನೂ ಓದಿ:ಸಾಲು ಸಾಲು ಎಲೆಕ್ಷನ್ ಸವಾಲು: ಮುಂದಿದೆ ಪರಿಷತ್​, ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ!
ಸರಣ್​ ಲೋಕಸಭಾ ಕ್ಷೇತ್ರದಲ್ಲಿ ಆರ್​ಜೆಡಿಯಿಂದ ಕಣಕ್ಕಿಳಿದಿರುವ ರೋಹಿಣಿ ಆಚಾರ್ಯ ಎದುರು ಆಕೆಯ ತಂದೆಯ ಹೆಸರಿನ ಲಾಲು ಪ್ರಸಾದ್​ ಯಾದವ್​ ಎಂಬ ವ್ಯಕ್ತಿಯೇ ಸ್ಪರ್ಧೆಗೆ ಇಳಿದಿರುವುದು ಮೊದ ಮೊದಲು ಮತದಾರರಿಗೆ ತೀವ್ರ ಗೊಂದಲ ಮೂಡಿಸಿತ್ತು. ಆದರೆ, ಇದೀಗ ಈತ ಥೇಟ್​ ಆರ್​ಜೆಡಿ ನಾಯಕನ ಹೆಸರನ್ನೇ ಹೊಂದಿದ್ದಾರೆ ಎಂದು ಸ್ಪಷ್ಟವಾಗಿದೆ.
ಸರಣ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿರುವ ರಾಷ್ಟ್ರೀಯ ಜನಸಂಭವನ ಪಕ್ಷದ ಅಭ್ಯರ್ಥಿ ಲಾಲು ಪ್ರಸಾದ್ ಯಾದವ್​ ಮೂಲತಃ ಒಬ್ಬ ಸಾಮಾನ್ಯ ರೈತರಾಗಿದ್ದು, ಆರ್​ಜೆಡಿ ನಾಯಕನ ಪುತ್ರಿಯ ವಿರುದ್ಧ ಸ್ಪರ್ಧೆಗೆ ಇಳಿದಿರುವುದು ಸದ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಏಪ್ರಿಲ್​ 26ರಂದು ನಾಮಪತ್ರ ಸಲ್ಲಿಸಿದ ಯಾದವ್, “ಈ ಕ್ಷೇತ್ರದಲ್ಲಿ ಅನೇಕ ಬಾರಿ ಸ್ಪರ್ಧಿಸಿದ್ದೇನೆ. ಈ ಹಿಂದೆ ಬಿಹಾರದ ಸಿಎಂ ಆಗಿದ್ದ ರಬ್ರಿ ದೇವಿ ವಿರುದ್ಧವೂ ಕಣಕ್ಕಿಳಿದಿದ್ದೆ. ಖಂಡಿತ ಈ ಬಾರಿ ಭಾರೀ ಅಂತರರಿಂದ ಗೆಲ್ತೇನೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಡರೈಲ್​ ಮಿಚೆಲ್​ಗೆ ಕ್ರೀಸ್​ ಕೊಡಲಿಲ್ಲ ಅನ್ನೋದಕ್ಕೆ ಕಾರಣವಿದೆ! ಧೋನಿ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ

ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:10 + three =
Remember me
