ನವದೆಹಲಿ:ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಟೀಮ್​ ಇಂಡಿಯಾ ಬಾರ್ಬಡೋಸ್​ನಿಂದ ಭಾರತಕ್ಕೆ ಮರಳುತ್ತಿದ್ದು, ಈ ಬಗ್ಗೆ ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಭಾರತದ ಆಟಗಾರರು ವಿಮಾನದಲ್ಲಿ ಕಪ್​ನೊಂದಿಗೆ ತವರಿಗೆ ಮರಳುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಬುಧವಾರ (ಜುಲೈ 03) ಭಾರತದತ್ತ ಹೊರಟಿರುವ ಆಟಗಾರರು, ಸಿಬ್ಬಂದಿ ಹಾಗೂ ಅವರ ಕುಟುಂಬದವರು ಗುರುವಾರ (ಜುಲೈ 04) ಬೆಳಗ್ಗೆ ನವದೆಹಲಿಗೆ ಬಂದಿಳಿಯಲಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಘೋಷಣೆಯೊಂದನ್ನು ಮಾಡಿದ್ದು, ಅಭಿಮಾನಿಗಳು ವಿಶ್ವಕಪ್​ ವಿಜೇತ ತಂಡದ ಆಟಗಾರರನ್ನು ಭೇಟಿ ಮಾಡಬಹುದಾಗಿದೆ.
🇮🇳, we want to enjoy this special moment with all of you.So let’s celebrate this win with a victory parade at Marine Drive & Wankhede on July 4th from 5:00pm onwards.It’s coming home ❤️🏆
ಇದನ್ನೂ ಓದಿ:ಅತಿಯಾದ ನಿದ್ರೆಯಿಂದ ಭಾರತ ವಿರುದ್ಧದ ಪಂದ್ಯ ತಪ್ಪಿಸಿಕೊಂಡಂತ್ರೆ ಈ ಆಟಗಾರ; ಬಳಿಕ ನೀಡಿದ ಸ್ಪಷ್ಟನೆ ವೈರಲ್​
ಗುರುವಾರ (ಜುಲೈ 04) ಟೀಮ್​ ಇಂಡಿಯಾ ಆಟಗಾರರಿರುವ ವಿಮಾನ ನವದೆಹಲಿಗೆ ಬಂದಿಳಿಯಲಿದ್ದು, ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಜುಲೈ 4, ಬೆಳಗ್ಗೆ 11 ಗಂಟೆಗೆ ಭಾರತ ತಂಡ, ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಲಿದ್ದು, ಆ ಬಳಿಕ ಮುಂಬೈನಲ್ಲಿ ನಡೆಯಲಿರುವ ರೋಡ್​ ಶೋನಲ್ಲಿ ಭಾಗಿಯಾಗಲು ಆಟಗಾರರು ತೆರಳಲಿದ್ದಾರೆ.
ಟೀಮ್​ ಇಂಡಿಯಾ ವಿಜಯೋತ್ಸವವನ್ನು ಆಚರಿಸಲು ಜುಲೈ 04 ಸಂಜೆ 05 ಗಂಟೆಗೆ ಮುಂಬೈನ ಮರೈನ್​ ಡ್ರೈವ್​ನಿಂದ ವಾಂಖೆಡೆವರೆಗೂ ವಿಜಯೋತ್ಸವ ಯಾತ್ರಯನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಟೀಮ್​ ಇಂಡಿಯಾ ಆಟಗಾರರು ಭಾಗಿಯಾಗಲಿದ್ದಾರೆ. ಈ ಬಗ್ಗೆ ಸ್ವತಃ ನಾಯಕ ರೋಹಿತ್​ ಶರ್ಮಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಪೋಸ್ಟ್​​ ಮಾಡಿದ್ದಾರೆ. ವಿಶ್ವಕಪ್​ ವಿಜೇತ ತಂಡದ ಆಟಗಾರರನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ.
🏆🇮🇳 Join us for the Victory Parade honouring Team India's World Cup win! Head to Marine Drive and Wankhede Stadium on July 4th from 5:00 pm onwards to celebrate with us! Save the date!#TeamIndia#Champions@BCCI@IPLpic.twitter.com/pxJoI8mRST
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
