ನವದೆಹಲಿ:ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾ ಮೈದಾನದಲ್ಲಿ ತುಂಬಾ ಶಾಂತವಾಗಿ ಕಾಣುತ್ತಾರೆ. ಹಾಗೆಂದು ಅವರು ಸೋಮಾರಿಯಲ್ಲ, ಅಸಾಧಾರಣ ಮತ್ತು ಅದ್ಭುತ ಆಟಗಾರ ಎಂದು 50ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೆಲಸ ಮಾಡಿರುವ ಅಂಪೈರ್ ಅನಿಲ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ : ಕೊಚ್ಚಿ ಸೆಮಿನಾರ್‌ನಿಂದ ಹಿಂದೆ ಸರಿದ ಬಂಗಾಳಿ ನಟಿ ಶ್ರೀಲೇಖಾ
ರೋಹಿತ್ ಶರ್ಮಾ ವಿಷಯಗಳನ್ನು ಮರೆತುಬಿಡುತ್ತಾರೆ. ಅವರಿಗೆ ನೆನಪಿನ ಶಕ್ತಿ ಕಡಿಮೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಅಂಪೈರ್ ಅನಿಲ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಆರಂಭಿಕ ಸಿಕ್ಸರ್‌ಗಳನ್ನು ಹೊಡೆಯುವಲ್ಲಿ ಸಾಕಷ್ಟು ಅನುಭವ ಹೊಂದಿರುವ ರೋಹಿತ್ ಶರ್ಮಾ ಆಟವನ್ನು ಹಲವು ಅಂತಾರಾಷ್ಟ್ರೀಯ ಆಟಗಾರರು, ಕ್ರಿಕೆಟ್​ ದಿಗ್ಗಜರು ಶ್ಲಾಘಿಸಿದ್ದಾರೆ. 37ರ ಹರೆಯದ ರೋಹಿತ್ ಒಬ್ಬ ‘ಸಾಮಾನ್ಯ’ ವ್ಯಕ್ತಿಯಂತೆ ಕಾಣಿಸಬಹುದು. ಆದರೆ ಅವರು ಹೆಚ್ಚಿನ ‘ಕ್ರಿಕೆಟ್ ಐಕ್ಯೂ’ ಹೊಂದಿರುವ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರು. ಆಟವನ್ನು ಹೇಗೆ ಆಡಬೇಕು ಮತ್ತು ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಬೌಲರ್‌ಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾರ್ಕರ್‌ಗಳನ್ನು ಸಿಕ್ಸರ್‌ಗಳಂತೆ ತಿರುಗಿಸಬಲ್ಲರು. 2013ರಲ್ಲಿ ಶ್ರೀಲಂಕಾ ವಿರುದ್ಧ ಈಡನ್‌ ಗಾರ್ಡನ್‌ನಲ್ಲಿ 264 ರನ್‌ ಗಳಿಸಿದ್ದೇ ಇದಕ್ಕೆ ಉದಾಹರಣೆ. ಏಕದಿನ ಪಂದ್ಯಗಳಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ರೋಹಿತ್ ದಾಖಲೆ ಇನ್ನೂ ಉಳಿದಿದೆ ಎಂದು ಚೌಧರಿ ಹೇಳಿದ್ದಾರೆ.
ಕಾರ್​ ಡಿಕ್ಕಿ ಹೊಡೆದ ರಬಸಕ್ಕೆ 10 ಮೀಟರ್​ ಮೇಲಕ್ಕೆ ಹಾರಿ ಬಿದ್ದ ಮಹಿಳೆ..ಅಪಘಾತದ ವೀಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
