ರೊಮಾನಿಯಾ:ಕಾನೂನು ಎಲ್ಲರಿಗೂ ಒಂದೇ ಎಂದು ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಮಾತು ಪ್ರಚಲಿತದಲ್ಲಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಗಣ್ಯಾತಿಗಣ್ಯರ ಮುಂದೆ ಕಾನೂನುಗಳು ಮೌನ ವಹಿಸುವುದನ್ನು ದಿನನಿತ್ಯವೂ ನೋಡುತ್ತಿದ್ದೇವೆ.
ಆದರೆ. ರೊಮಾನಿಯಾದಲ್ಲಿ ಮಾತ್ರ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಸಾಬೀತು ಮಾಡಿದೆ.
ಇಲ್ಲಿಯ ಪ್ರಧಾನಿ ಲುಡೋವಿಕ್‌ ಅವರಿಗೆ ಸರ್ಕಾರ 600 ಡಾಲರ್​ (ಸುಮಾರು 46 ಸಾವಿರ ರೂಪಾಯಿ) ದಂಡ ವಿಧಿಸಿದೆ. ಪ್ರಧಾನಿ ಮಾತ್ರವಲ್ಲದೇ ಸಚಿವರು ಸೇರಿದಂತೆ ಗಣ್ಯಾತಿಗಣ್ಯರಿಗೂ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:ಕರೊನಾ ವೈರಸ್​ ಹೆಂಡತಿ ಇದ್ದಂತೆ ಎಂದ ಸಚಿವ: ಆಮೇಲೇನಾಯ್ತು ನೀವೇ ನೋಡಿ…
ಅಷ್ಟಕ್ಕೂ ಪ್ರಧಾನಿ ಹಾಗೂ ಇತರ ಗಣ್ಯರು ಮಾಡಿರುವ ತಪ್ಪು ಎಂದರೆ ಲಾಕ್​ಡೌನ್​ ನಿಯಮವನ್ನು ಉಲ್ಲಂಘನೆ ಮಾಡಿರುವುದು! ಇವರು ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡುತ್ತಿರುವ ಫೋಟೋವನ್ನು ಮಾಜಿ ಹಣಕಾಸು ಸಚಿವ ಯಗೆನ್‌ ಒರ್ಲಾಂಡೊ ಟಿಯೊಡೊರೊವಿಕಿ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದರಿಂದ ಎಲ್ಲರೂ ಇದೀಗ ಬೆಲೆ ತೆತ್ತಿದ್ದಾರೆ.
ಪ್ರಧಾನಿ ಲುಡೋವಿಕ್‌ ಒರ್ಬಾನ್‌, ಉಪ ಪ್ರಧಾನಿ ರಲೂಕಾ ಟಾರ್ಕನ್‌, ಸಚಿವರಾದ ವರ್ಜೀಲ್‌ ಪೊಪೇಸ್ಕಾ, ಲೂಸಿಯಾನ್‌ ಬೊಡೆ, ಬೊಗ್‌ಡಾನ್‌ ಔರೆಸ್ಕಾ ಅವರಿಗೆ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​
ಅಷ್ಟಕ್ಕೂ ಈ ಫೋಟೋದಲ್ಲಿ ಇದ್ದದ್ದು ಏನೆಂದರೆ, ಪ್ರಧಾನಿ ಲುಡೋವಿಕ್‌ ಧೂಮಪಾನ ಮಾಡುತ್ತಿದ್ದಾರೆ, ವಿದೇಶಾಂಗ ಸಚಿವ ಕೈಗೆ ಗ್ಲೌಸ್‌ ಧರಿಸಿಕೊಂಡು ಸಿಗಾರ್‌ ಹಿಡಿದುಕೊಂಡಿದ್ದಾರೆ. ಒಬ್ಬ ಸಚಿವನ ಕೈಯಲ್ಲಿ ಒಂದು ಮದ್ಯದ ಗ್ಲಾಸ್‌ ಇದ್ದು, ಇನ್ನೊಬ್ಬರು ಮದ್ಯದ ಬಾಟಲಿ ಇದ್ದ ಟೇಬಲ್‌ಗೆ ಹತ್ತಿರದಲ್ಲೇ ಕಾಣುತ್ತಿದ್ದಾರೆ. ಟೇಬಲ್‌ನಲ್ಲಿ ಷಾಂಪೇನ್‌ ಬಾಟಲಿ ಸೇರಿದಂತೆ ಹಲವಾರು ಬಗೆಯ ಸ್ನಾಕ್ಸ್​ಗಳು ಇವೆ. ರಲುಕಾ ಟರ್ಕನ್‌ ಮಾಸ್ಕ್ ಧರಿಸಿಕೊಂಡಿದ್ದರೂ ಸರಿಯಾಗಿ ಹಾಕಿಕೊಂಡಿಲ್ಲ.
ಈ ಫೋಟೋ ಮೇ 25ರಂದು ನಡೆದ ಸಚಿವ ಸಂಪುಟ ಸಭೆ ಎಂದು ರಾಜಕೀಯ ಮೂಲಗಳು ಹೇಳುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಿಗೆ ಪ್ರಧಾನಿ ಲುಡೋವಿಕ್‌ ತಪ್ಪೊಪ್ಪಿಕೊಂಡು ದಂಡವನ್ನು ಪಾವತಿಸಿದ್ದಾರೆ. ಉಳಿದವರು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ ಎಂದಿದೆ ವರದಿ.
ಕರೊನಾ ಬಿಕ್ಕಟ್ಟು ನಿವಾರಣೆ: ಕರ್ನಾಟಕಕ್ಕೆ ಪ್ರಧಾನಿ ಮೋದಿ ಶಹಭಾಸ್​ಗಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
