ನಾಗರಕೋಯಿಲ್​:ತಮಿಳುನಾಡಿನ ನಟೋರಿಯಸ್​ ಕ್ರಿಮಿನಲ್​ ರೋಮಿಯೋ ಕಾಶಿಗೆ ಮಹಿಳಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರೋಮಿಯೋ ಕಾಶಿಗೆ ಕೇವಲ 29 ವರ್ಷ. ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಆರೋಪಿ, ಅವರಿಗೆ ಗೊತ್ತಿಲ್ಲದ ಹಾಗೇ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪವಿದೆ.
ಇತ್ತೀಚೆಗೆ ವೈದ್ಯೆಯೊಬ್ಬರು ಕಾಶಿ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯ ವೇಳೆ ಕಾಶಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಈ ಪ್ರಕರಣದಲ್ಲಿ ಕಾಶಿಯ ತಂದೆ ಥಂಕಪಾಂಡಿಯನ್​ ಮತ್ತು ಸ್ನೇಹಿತರಾದ ಜಿನೋ ಮತ್ತು ದಿನೇಶ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:17 vs 110 ಕೋಟಿ ರೂಪಾಯಿ: ಮಿಲ್ಕಿ ಬ್ಯೂಟಿ ತಮನ್ನಾ ನಡೆಗೆ ಅಭಿಮಾನಿಗಳ ಮೆಚ್ಚುಗೆ!
ಆರೋಪಿ ರೋಮಿಯೋ ಕಾಶಿ ವಿರುದ್ಧ ಪೊಲೀಸರಿಗೆ ದೂರು ನೀಡಲು ಹಲವಾರು ಮಹಿಳೆಯರು ಮಂದೆ ಬಂದ ಬಳಿಕ ಪ್ರಕರಣ ವೇಗ ಪಡೆದುಕೊಂಡಿತು. ತನಿಖೆಯ ಭಾಗವಾಗಿ ಕಾಶಿಯ ಲ್ಯಾಪ್​ಟಾಪ್​ ಓಪನ್​ ಮಾಡಿದಾಗ 400 ಸೆಕ್ಸ್​ ವಿಡಿಯೋಗಳು ಮತ್ತು ಸಂತ್ರಸ್ತೆಯ 1900 ಫೋಟೋಗಳು ಪತ್ತೆಯಾಗಿವೆ.
ಮೃದುವಾದ ಅಥವಾ ಅಮಾಯಕ ನೋಟ ಮತ್ತು ತೋರಿಕೆಯಲ್ಲಿ ನಿಜವಾದ ಪ್ರಾಮಾಣಿಕತೆಯನ್ನು ನಂಬಿ ಕಾಶಿ ಬಲೆಗೆ ಅನೇಕ ಹೆಣ್ಣು ಮಕ್ಕಳು ಬಿದ್ದು, ಹಣ ಜೊತೆಗೆ ಮಾನವನ್ನು ಕಳೆದುಕೊಂಡಿದ್ದಾರೆ. ಜೀವಾವಧಿ ಶಿಕ್ಷೆಯ ಜೊತೆಗೆ ಕಾಶಿ 1 ಲಕ್ಷ ರೂ. ದಂಡವನ್ನು ಕಟ್ಟಬೇಕಿದೆ.(ಏಜೆನ್ಸೀಸ್​)
ದಕ್ಷಿಣ ಕನ್ನಡ; ಉಳ್ಳಾಲದ ವ್ಯಕ್ತಿಗೆ 7 ಲಕ್ಷ ರೂ. ವಿದ್ಯುತ್​ ಬಿಲ್​ ನೀಡಿದ ಮೆಸ್ಕಾಂ ಸಿಬ್ಬಂದಿ

ಈ ಟಿಪ್ಸ್​ ಪಾಲಿಸಿದರೆ ತಾಮ್ರದ ಪಾತ್ರೆಗಳನ್ನು ಫಳ ಫಳ ಹೊಳೆಯುವಂತೆ ಮಾಡೋದು ಎಷ್ಟು ಸುಲಭ ನೋಡಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
