ನವದೆಹಲಿ:ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದೀಗ ಸೀಮಾ ಕುರಿತ ಮತ್ತೊಂದು ಇಂಟೆರೆಸ್ಟಿಂಗ್​ ಸಂಗತಿ ಬಯಲಾಗಿದೆ.
ಸೀಮಾ ಭಾರತ ಪ್ರವೇಶಿಸುವ ಮುನ್ನ ಒಂದು ವಾರಗಳ ಕಾಲ ನೇಪಾಳದ ಕಾಠ್ಮಂಡುವಿನ ಹೋಟೆಲ್​ನಲ್ಲಿ ಪ್ರಿಯಕರ ಸಚಿನ್​ ಮೀನಾ ಜತೆ ಉಳಿದುಕೊಂಡಿದ್ದಳು ಮತ್ತು ರೂಮ್​ ಬುಕ್​ ಮಾಡಲು ಇಬ್ಬರು ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ
ಇಬ್ಬರು ಉಳಿದುಕೊಂಡಿದ್ದ ಕಾಠ್ಮಂಡುವಿನ ನ್ಯೂ ವಿನಾಯಕ್​ ಹೋಟೆಲ್​ಗೆ ಇಂಡಿಯಾ ಟುಡೆ ಭೇಟಿ ನೀಡಿ ವರದಿ ಮಾಡಿದೆ. ಇಬ್ಬರು ಮಾರ್ಚ್​ ತಿಂಗಳಲ್ಲಿ ಹೋಟೆಲ್​ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಸೀಮಾ ಮತ್ತು ಸಚಿನ್​ ಹೆಚ್ಚೆಚ್ಚು ಇನ್​ಸ್ಟಾಗ್ರಾಂ ರೀಲ್ಸ್​ ಮಾಡುತ್ತಿದ್ದರು. ರೂಮ್​ ಬುಕ್​ ಮಾಡಿಕೊಟ್ಟ ಹೋಟೆಲ್​ ರೆಸೆಪ್ಶನಿಸ್ಟ್​ ಗಣೇಶ್​ ರೊಕಂಗರ್​ ಮಕ್ಕಳ ಜತೆ ಇಬ್ಬರು ರೀಲ್ಸ್​ ಮಾಡಿದ್ದಾರೆ. ಇಬ್ಬರು ರೂಮ್​ 204ರಲ್ಲಿ ಉಳಿದುಕೊಂಡಿದ್ದರು.
ಸಚಿನ್​ ಮೀನಾ ಮೊದಲು ಏಕಾಂಗಿಯಾಗಿ ಬಂದು ರೂಮ್​ ಮಾಡಿದನು ಮತ್ತು ಆತನ ಪತ್ನಿ ಸೀಮಾ ತಡವಾಗಿ ಬಂದು ಆತನನ್ನು ಸೇರಿದಳು ಎಂದು ಗಣೇಶ್​ ಹೇಳಿದ್ದಾರೆ. ಅವರು ಬಳಿ ಯಾವುದೇ ಐಡಿ ಕಾರ್ಡ್​ ಇರಲಿಲ್ಲ. ರಿಜಿಸ್ಟರ್​ನಲ್ಲಿ ಇಬ್ಬರು ತಮ್ಮ ಹೆಸರನ್ನು ಮಾತ್ರ ಬರೆದರು. ಆದರೆ, ರಿಜಿಸ್ಟರ್​ ಪರಿಶೀಲಿಸಿದಾಗ ಅವರ ಹೆಸರನ್ನು ಎಲ್ಲೆಲ್ಲಿಯೋ ಬರೆದಿದ್ದರು ಎಂದು ತಿಳಿಸಿದ್ದಾರೆ.
ಗಣೇಶ್​ ಕುಟುಂಬದ ಜತೆ ಸೀಮಾ ಮತ್ತು ಸಚಿವ್​ ತುಂಬಾ ಆಪ್ತರಾಗಿದ್ದರು. ಗಣೇಶ್​ ಅವರ ಮಕ್ಕಳ ಜತೆ ಅವರು ರೀಲ್ಸ್​ ಮಾಡಿರುವ ವಿಡಿಯೋ ಲಭ್ಯವಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಆಕೆ ಪಾಕಿಸ್ತಾನದವಳು ಎಂದು ಸುಳಿವು ಬಿಟ್ಟು ಕೊಡಲೇ ಇಲ್ಲ. ಆಕೆ ಮತ್ತು ಸಚಿನ್​ ತಮ್ಮ ರೂಮಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಇದೊಂದು ಸಣ್ಣ ರೂಮ್​ ಆಗಿದ್ದು, ಒಂದು ಕನ್ನಡಿ ಮತ್ತು ಎರಡು ಬೆಡ್​ಗಳನ್ನು ಹೊಂದಿವೆ. ಸೀಮಾ ಹೈದರ್ ಕ್ಲಬ್‌ಗಳು ಮತ್ತು ಪಬ್‌ಗಳಿಗೆ ಹೋಗುವ ಆಸಕ್ತಿ ತೋರಿದಳು. ಆದರೆ ಅಲ್ಲಿ ಭಾರತೀಯ ಜನರು ಮೋಸ ಹೋಗಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ವಿವರಣೆ ನೀಡಿದಾಗ ಹೋಗಲು ಹಿಂದೇಟು ಹಾಕಿದರು. ಸುಮಾರು ಒಂದು ವಾರಗಳ ಕಾಲ ಹೋಟೆಲ್​ನಲ್ಲಿ ಉಳಿದುಕೊಂಡ ಬಳಿಕ ಇದ್ದಕ್ಕಿಂತೆ ಟ್ಯಾಕ್ಸಿ ಮಾಡಿಕೊಂಡು ಇಬ್ಬರು ಪೊಖರಾ ಕಡೆ ಹೊರಟರು ಎಂದು ಗಣೇಶ್​ ಮಾಹಿತಿ ನೀಡಿದ್ದಾರೆ.
ಇನ್ನು ಆಕೆಯ ಪಾಕಿಸ್ತಾನಿ ಗುರುಚಿತ ಚೀಟಿ ತೀರಾ ಇತ್ತೀಚಿನದು ಮತ್ತು 2022ರಲ್ಲಿ ಅದನ್ನು ಮಾಡಲಾಗಿದೆ. ಕೆಲವು ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದಾಳೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಸದನಕ್ಕೆ ಶೋಭೆಯಲ್ಲ: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಶಾಸಕರ ಅಮಾನತು
ಸೀಮಾ, ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಸಂಬಂಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಳೆದ ಮೇ ತಿಂಗಳಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಕಠ್ಮಂಡುವಿನಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಗ್ರೇಟರ್​ ನೋಯ್ಡಾಗೆ ಬಂದು ತನ್ನ ಪ್ರಿಯಕರನ್ನು ಸೇರಿದ್ದಾಳೆ. ಸೀಮಾ ಮತ್ತು ಸಚಿನ್ ಮೀನಾ ಅವರು 2019 ರಲ್ಲಿ PUBG ಆಡುವಾಗ ಮೊದಲು ಪರಿಚಯವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೆ ನೀಡಿದ್ದಾನೆ. ಮೀನಾ ಕುಟುಂಬವು ಸೀಮಾಳ ಜತೆ ಆಕೆಯ ನಾಲ್ವರು ಮಕ್ಕಳನ್ನು ಒಪ್ಪಿಕೊಂಡು ತಮ್ಮ ಜತೆ ಇರಿಸಿಕೊಂಡಿದ್ದಾರೆ.
ಜುಲೈ 4 ರಂದು ಗ್ರೇಟರ್ ನೋಯ್ಡಾ ಪೊಲೀಸರು ಸೀಮಾ, ಸಚಿನ್ ಮತ್ತು ಸಚಿನ್ ಅವರ ತಂದೆಯನ್ನು ಬಂಧಿಸಿದ್ದರು. ಆದರೆ, ಜುಲೈ 7ರಂದು ಮೂವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ.(ಏಜೆನ್ಸೀಸ್​)
ಪ್ರೇಯಸಿನಾ ಅಥವಾ ಪಾಕ್​ ಏಜೆಂಟಾ? ವಿಚಾರಣೆ ವೇಳೆ ಅನುಮಾನ ಮೂಡಿಸಿದ ಸೀಮಾ ನಡೆ

ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three − 1 =
Remember me
