ಲೊಂಬಾರ್ಡಿ (ಇಟಲಿ):2-3 ದಶಕಗಳ ಹಿಂದೆ ತುಂಬಾ ಜನಪ್ರಿಯವಾಗಿದ್ದ ಮಲೆನಾಡಿನ ಮೂಲೆನಾಗೆ… ತನ್‌ ಹುಂಜ ಕೂಗಿದ್ರೆನೇ ಬೆಳಗಾಗ್ತೆಂದು…. ಅನ್ನೋ ಹಾಡು ಕೇಳಿರಬೇಕಲ್ಲವೆ? ತನ್ನ ಹುಂಜ ಕೂಗಿದ್ರೆ ಮಾತ್ರ ಬೆಳಗಾಗುತ್ತದೆ ಎಂದು ಅಂದುಕೊಂಡಿದ್ದ ಅಜ್ಜಿಯೊಬ್ಬಳ ಗರ್ವ ಮುರಿದುಹೋಗಿರುವ ಕುರಿತಾದ ಬಲು ಪ್ರಸಿದ್ಧ ಗೀತೆಯಿದು.
ಆದರೆ ಇಲ್ಲೊಂದು ಪ್ರಕರಣದಲ್ಲಿ, ಪಾಪ ಆಸಾಮಿಯೊಬ್ಬ ತನ್ನ ಹುಂಜ ಕೂಗಿದ್ರೆ ಬೆಳಗಾಗ್ತದೆ ಎನ್ನದಿದ್ದರೂ ಹುಂಜ ಬೆಳ್ಳಂಬೆಳಗ್ಗೆ ಕೂಗಿ ನಿದ್ದೆ ಹಾಳು ಮಾಡುತ್ತದೆ ಎಂದು ದಂಡ ಹಾಕಿಸಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಇಟಲಿಯ ಲೋಂಬಾರ್ಡಿ ಪಟ್ಟಣವಾದ ಕೆಸ್ಟಿರಾಗಾ ವಿದರ್ಡೊ ಎಂಬಲ್ಲಿ. ಹುಂಜ ಕೂಗಿದ್ದಕ್ಕೆ ದಂಡ ತೆತ್ತ ವ್ಯಕ್ತಿಯ ಹೆಸರು ಏಂಜೇಲೊ ಬೋಲೆಟ್ಟಿ.
ಅಷ್ಟಕ್ಕೂ ಆಗಿರುವುದು ಏನೆಂದರೆ, 83 ವರ್ಷದ ಏಂಜೇಲೊ ತಮ್ಮ ಮನೆಯಲ್ಲಿ ಹುಂಜ ಸಾಗಿದ್ದರು. ಇದು ಸಾಮಾನ್ಯವಾಗಿ ಎಲ್ಲ ಹುಂಜಗಳಂತೆ ನಸುಕಿನ 4:30-5 ಗಂಟೆಗೆ ಕೂಗುತ್ತಿತ್ತು. ಗಡಿಯಾರ ಇಲ್ಲದ ಕಾಲದಲ್ಲಿ ಹುಂಜ ಕೂಗಿದ್ದನ್ನು ಕೇಳಿಯೇ ಜನರು ಎದ್ದೇಳುತ್ತಿದ್ದುದು ಉಂಟು.
ಇದನ್ನೂ ಓದಿ:ಶಾಂತಿಗಾಗಿ ಪತ್ನಿ ರೇವತಿ ಜತೆ ನಿಖಿಲ್‌ ಧ್ಯಾನ- ಫೋಟೋ ವೈರಲ್
‌ಆದರೆ ಹುಂಜ ನಸುಕಿನಲ್ಲಿ ಕೂಗುವುದನ್ನು ನೆರೆಮನೆಯ ಕೆಲವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಸೂರ್ಯ ಏಳುವ ಮೊದಲೇ ಕೂಗಿ ಇದು ತಮ್ಮ ನಿದ್ದೆ ಹಾಳು ಮಾಡುತ್ತಿದೆ ಎಂದು ಇವರು ಸದಾ ಗೊಣಗುತ್ತಿದ್ದರು. ಅವರು ಅನೇಕ ಬಾರಿ ಏಂಜೇಲೊ ಅವರಿಗೆ ಕಂಪ್ಲೇಂಟ್‌ ಮಾಡಿದ್ದೂ ಉಂಟು.
ಆದರೆ ಹುಂಜದ ಬಾಯನ್ನು ಕಟ್ಟಿ ಇಡಲು ಸಾಧ್ಯವೆ? ಅವರಿಗೆ ಏನು ಮಾಡುವುದು ಗೊತ್ತಾಗಲಿಲ್ಲ, ಹುಂಜ ಕೂಗುವುದು ನಿಲ್ಲಿಸಲಿಲ್ಲ. ಇದರಿಂದ ಸಿಟ್ಟುಕೊಂಡಿದ್ದ ನೆರೆಹೊರೆಯಲು ಪೊಲೀಸರಿಗೆ ದೂರು ದಾಖಲು ಮಾಡಿದ್ದರು, ಹುಂಜ ಕಿರಿಕಿರಿ ಮಾಡುತ್ತದೆ ಎಂದು ದೂರಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಏಂಜೇಲೋ ಅವರಿಗೆ 166 ಯುರೋ ಅಂದರೆ ಸುಮಾರು 14,700 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ದಂಡವನ್ನು ವೃದ್ಧನೇನೋ ಕಟ್ಟಿದ ಎನ್ನಿ. ಆದರೆ ಹುಂಜದ ಗತಿ ಏನಾಯಿತು ಗೊತ್ತಿಲ್ಲ.
ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಗನ್ ಹಿಡಿದು ಬ್ಯಾಂಕ್‌ ನುಗ್ಗಿದ: ಬೆಚ್ಚಿಬಿದ್ದ ಕಲಬುರಗಿ ಸಿಬ್ಬಂದಿ- ಮುಂದೇನಾಯ್ತು?

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + one =
Remember me
