ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಕುರಿತಂತೆ ಇಂದು ಮತ್ತೊಂದು ಪ್ರಮುಖ ಅಪ್​ಡೇಟ್ ಹೊರಬಿದ್ದಿದೆ. ಈ ಬಗ್ಗೆ ಇಸ್ರೋ ತನ್ನ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಪ್ರಕಟಿಸಿದೆ.
ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಅದರಿಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಗೆ ಇಳಿದ ವಿಡಿಯೋ ತುಣುಕೊಂದನ್ನು ಇಂದು ಬೆಳಗ್ಗೆ ಇಸ್ರೋ ಹಂಚಿಕೊಂಡಿತ್ತು. 30 ಸೆಕೆಂಡುಗಳ ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಕುಂದಾಪುರದ ಬಸ್ರೂರಲ್ಲಿ ‘ಬಾಹುಬಲಿ’ ಪ್ರಭಾಸ್!; ‘ಸಲಾರ್’​ಗಾಗಿ ಆಗಮನ?
ಇದಾದ ಬಳಿಕ ಸಂಜೆ ಇಸ್ರೋ ಇನ್ನೊಂದು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಚಂದ್ರಯಾನ-3 ಮಿಷನ್ ಕುರಿತು ಮತ್ತೊಂದು ಮಹತ್ವದ ವಿಷಯ ತಿಳಿಸಿದೆ. ಯೋಜಿಸಿದಂತೆಯೇ ರೋವರ್​ನ ಎಲ್ಲ ಚಲನೆಗಳು ಪರಿಶೀಲಿಸಲ್ಪಟ್ಟಿವೆ. ರೋವರ್ ಚಂದ್ರನ ಮೇಲೆ ಸುಮಾರು 8 ಮೀಟರ್​ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ:ಫ್ಯಾಕ್ಟ್​ ಚೆಕ್ ಮೂಲಕ ಮತ್ತೆ ಮೋದಿ ಬೆಂಬಲಿಗರ ಕಾಲೆಳೆದ ನಟ ಪ್ರಕಾಶ್ ರಾಜ್
ರೋವರ್ ಪೇಲೋಡ್ಸ್​ಗಳಾಗಿರುವ ಎಲ್​ಐಬಿಎಸ್​ ಮತ್ತು ಎಪಿಎಕ್ಸ್ಎಸ್​ ಆನ್​ ಆಗಿವೆ. ಪ್ರೊಪಲ್ಷನ್ ಮೋಡ್, ಲ್ಯಾಂಡರ್​ ಮಾಡ್ಯೂಲ್ ಮತ್ತು ರೋವರ್​ನಲ್ಲಿ ಪೇಲೋಡ್​​ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಇಸ್ರೋ ತಿಳಿಸಿದೆ.
Chandrayaan-3 Mission:All planned Rover movements have been verified. The Rover has successfully traversed a distance of about 8 meters.Rover payloads LIBS and APXS are turned ON.All payloads on the propulsion module, lander module, and rover are performing nominally.…— ISRO (@isro)August 25, 2023
Chandrayaan-3 Mission:All planned Rover movements have been verified. The Rover has successfully traversed a distance of about 8 meters.Rover payloads LIBS and APXS are turned ON.All payloads on the propulsion module, lander module, and rover are performing nominally.…
ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
