ನವದೆಹಲಿ :ದೆಹಲಿಯ ಮಹಿಪಾಲ್​ಪುರ ಪ್ರದೇಶದಲ್ಲಿ ಕೊಲೆ ಮಾಡಿ, ಮೃತದೇಹವನ್ನು ವಿಲೇವಾರಿ ಮಾಡುವ ಪ್ರಯತ್ನದಲ್ಲಿದ್ದ ಸೆಕ್ಯುರಿಟಿ ಗಾರ್ಡ್​ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಏರ್​ಪೋರ್ಟ್​ನ ಪಾರ್ಕಿಂಗ್ ಸ್ಲಿಪ್ ಹೊಂದಿದ್ದ ಮೃತನ ಗುರುತು ಹಚ್ಚುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಬಂಧಿತ ಆರೋಪಿ, ಸೆಕ್ಯುರಿಟಿ ಗಾರ್ಡ್ ಆಗಿದ್ದ ಸುರ್ಮೇಶ್​ ಮತ್ತು ಮೃತ ವ್ಯಕ್ತಿಯ ನಡುವೆ ಪಾರ್ಕಿಂಗ್​ ವಿಷಯದಲ್ಲಿ ಗುರುವಾರ ರಾತ್ರಿ ಜಗಳವಾಗಿತ್ತು. ಆರೋಪಿಯು ಆ ಪುರುಷನನ್ನು ಥಳಿಸಿ, ಕತ್ತು ಹಿಚುಕಿ ಸಾಯಿಸಿದ್ದ. ಮೃತದೇಹವನ್ನು ಎರಡು ದಿನ ಪಾರ್ಕಿಂಗ್​ನ ಬೇಸ್​ಮೆಂಟ್​ನಲ್ಲಿ ಮುಚ್ಚಿಟ್ಟಿದ್ದು, ಇಂದು ಬೆಳಗಿನ ಜಾವ ಅದನ್ನು ವಿಲೇವಾರಿ ಮಾಡಲು ಸಾಗಿಸುವ ಪ್ರಯತ್ನದಲ್ಲಿದ್ದ. ಗಸ್ತಿನಲ್ಲಿದ್ದ ಪೊಲೀಸ್​ ಪೇದೆ ವಿನೋದ್​ ಕುಮಾರ್​ ಅವರು ಅನುಮಾನಗೊಂಡು ಪರಿಶೀಲಿಸಿದಾಗ ಮೃತದೇಹದೊಂದಿಗೆ ಆರೋಪಿ ಸುರ್ಮೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!
ವಸಂತ್ ಕುಂಜ್​ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಕೃತ್ಯದ ಸ್ಥಳ ಪರಿಶೀಲನೆಗೆ ಪೊಲೀಸ್​ ತಂಡ ತೆರಳಿದೆ. ಮೃತನ ಎಡತೋಳಿನ ಮೇಲೆ ಟ್ಯಾಟೂ ಇದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಲಿಪ್ ಸಿಕ್ಕಿದೆ. ದೇಹವನ್ನು ಸಫ್ದಾರ್​ ಜಂಗ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಆತನ ಗುರುತು ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)
ಮತ್ತಷ್ಟು ಅನ್​ಲಾಕ್​: ಪೂಜಾ ಚಟುವಟಿಕೆಗಳಿಗೆ ಅನುಮತಿ; ಮನೋರಂಜನಾ ಉದ್ಯಾನಗಳಿಗೆ ಅವಕಾಶ

‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
