ಬೆಂಗಳೂರು:ಇಂದು ಅನಾರೋಗ್ಯದಿಂದ ಮೃತಪಟ್ಟ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಒಂದು ಕಾಲದಲ್ಲಿ ಶಿವಮೊಗ್ಗದ ರಕ್ತಚರಿತ್ರೆಗೂ ಎಂಟ್ರಿಕೊಟ್ಟದ್ದು ಇತಿಹಾಸ. ಪಾತಕ ಲೋಕದ ಸಿಂಹಾಸನಕ್ಕಾಗಿ ಹೆಬ್ಬೆಟ್​ ಮಂಜ ಮತ್ತು ಕೊರಂಗು ನಡುವೆ ನಡೆಯುತ್ತಿದ್ದ ಸಮರದಲ್ಲಿ ಹೆಣವಾಗಬೇಕಿದ್ದ ಕೊರಂಗು ಅದೃಷ್ಟವಶಾತ್​ ಪಾರಾಗಿದ್ದೇ ರೋಚಕ ಕಥೆ.
ಶಿವಮೊಗ್ಗ ಮೂಲದ ನಟೋರಿಯಸ್ ರೌಡಿ ಹೆಬ್ಬೆಟ್ ಮಂಜ ವಿದೇಶದಿಂದಲೇ ಕೊರಂಗು ಕೃಷ್ಣನನ್ನು ಮುಗಿಸಲು ಸ್ಕೆಚ್​ ಹಾಕಿದ್ದ.ಇದನ್ನೂ ಓದಿರಿಹತ್ತನೇ ತರಗತಿಯಲ್ಲೇ ಕೊರಂಗು ಅಟ್ಟಹಾಸ ಮೆರೆದಿದ್ದ…
ಸುಮಾರು ಹತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಹಿರಿಯೂರಿನ ಡಾಬಾ ಬಳಿ ಕೊರಂಗು ಟೀಂ ಮೇಲೆ ಹೆಬ್ಬೆಟ್​ ಮಂಜ ತನ್ನ ಸಹಚರರ ಮೂಲಕ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಕೊರಂಗು ಕೈಬೆರಳು ತುಂಡಾಗಿ ಪ್ರಾಣಾಪಾಯದಿಂದ ಪಾರಾಗಿದ್ದ. ನಂತರ ಬೇರೆ ಪ್ರಕರಣದಲ್ಲಿ ಬೆಂಗಳೂರು ಧಾರವಾಡ ಜೈಲಿನಲ್ಲಿದ್ದ ಹೆಬ್ಬೆಟ್ಚು ಶಿವಮೊಗ್ಗದ ಜೈಲಿಗೆ ಸ್ಥಳಾಂತರಗೊಂಡಿದ್ದ. ಇದೇ ಸಮಯ ಕಾಯುತ್ತಿದ್ದ ಕೊರಂಗು ಶಿವಮೊಗ್ಗದ ಜೈಲಿನಲ್ಲೇ ಹೆಬ್ಬೆಟ್ ಮಂಜನನ್ನು ಮುಗಿಸಲು ಸ್ಕೆಚ್ ಹಾಕಿದ್ದ. ಇದಕ್ಕಾಗಿ ಸ್ಪಾಟ್ ನಾಗನೊಂದಿಗೆ ಡೀಲ್​ ಕುದುರಿಸಿದ್ದ.
2007ರಲ್ಲಿ ಹೆಬ್ಬೆಟ್ ಮಂಜ ಶಿವಮೊಗ್ಗ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಜೈಲಿಗೆ ವಾಪಸಾಗುತ್ತಿದ್ದಂತೆ ಆತನ ಮೇಲೆ ಸ್ಪಾಟ್ ನಾಗ ಎರಗಿದ್ದ. ಆ ಸಂದರ್ಭದಲ್ಲಿ ಜೈಲು ರಣರಂಗವಾಗಿತ್ತು. ಇದರಿಂದ ಮತ್ತಷ್ಟು ಕೆರಳಿದ ಹೆಬ್ಬೆಟ್ ಮಂಜ, ರೌಡಿ ಹಂದಿ ಅಣ್ಣಿಯ ಹುಡುಗರ ಮೂಲಕ ಶಿವಮೊಗ್ಗದಲ್ಲೇ ಸ್ಪಾಟ್ ನಾಗನ ಕಥೆ ಮುಗಿಸಿದ್ದ.
ಇದನ್ನೂ ಓದಿರಿಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!
ತನ್ನ ಶಿಷ್ಯ ಸ್ಪಾಟ್ ನಾಗನನ್ನು ಕೊಂದ ಹೆಬ್ಬೆಟ್ ಮಂಜನ ಗ್ಯಾಂಗ್ ವಿರುದ್ಧ ಕೊರಂಗು ಕೃಷ್ಣ ಕತ್ತಿ ಮಸೆಯುತ್ತಿದ್ದ. ಆ ಗ್ಯಾಂಗ್​ ವಿರುದ್ಧ ಸೇಡು ತೀರಿಸಿಕೊಳ್ಳಲು ನಟೋರಿಯಸ್ ರೌಡಿ ಲೋಕಿ ಜತೆ ಕೊರಂಗು ಡೀಲ್​ ಮಾಡಿಕೊಂಡದ್ದು ಪಾತಕ ಲೋಕದ ಇತಿಹಾಸ ಎನ್ನುತ್ತಾರೆ ಪೊಲೀಸ್​ ಹಿರಿಯ ಅಧಿಕಾರಿಗಳು.
ಬಹಳ ಹಿಂದಿನಿಂದಲೂ ಕಡು ವೈರಿಯಾಗಿದ್ದ ಕೊರಂಗುನನ್ನು ಕೊಲ್ಲಲು ಮಲೇಷ್ಯಾದಲ್ಲೇ ಕುಳಿತು ಹೆಬ್ಬೆಟ್ ಸ್ಕೆಚ್​ ಹಾಕಿದ್ದ. ಕೊರಂಗುನನ್ನು ಮುಗಿಸದೆ ನಾನು ಬೆಂಗಳೂರಿಗೆ ಬರುವುದು ಸಾಧ್ಯವಿಲ್ಲ ಎಂದು ತನ್ನ ಬಾಲ್ಯ ಸ್ನೇಹಿತ ಅಶ್ರಫ್‌ ಬಳಿ ಈ ಹಿಂದೆ ಹೆಬ್ಬೆಟ್ ಹೇಳಿಕೊಂಡಿದ್ದನಂತೆ. ಬೆಂಗಳೂರಲ್ಲಿ ಇದ್ದುಕೊಂಡು ತನ್ನೆಲ್ಲ ಕೆಲಸಗಳಿಗೆ ಅಡ್ಡಿಯಾಗಿದ್ದ ಕೊರಂಗು ಕೃಷ್ಣನನ್ನು ತಾನೇ ಮುಗಿಸಬೇಕೆಂಬ ಹೆಬ್ಬೆಟ್​ ಮಂಜನ ಆಸೆ ಕೊನೆಗೂ ಈಡೇರಲಿಲ್ಲ.
ಇದನ್ನೂ ಓದಿರಿ
ಕುಖ್ಯಾತ ಪಾತಕಿ ಕೊರಂಗು ಕೃಷ್ಣ ವಿಧಿವಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + thirteen =
Remember me
