ಬೆಂಗಳೂರು:ಮುಂದಿನ ಐಪಿಎಲ್​ ಆವೃತ್ತಿಗೆ ಜಿಂಬಾಂಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್​ ಅವರನ್ನು ಮುಖ್ಯ ತರಬೇತುದಾರರಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಫ್ರಾಂಚೈಸಿ ಇಂದು (ಆ.04) ಘೋಷಣೆ ಮಾಡಿದೆ. ಈ ಮೂಲಕ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವಧಿಯ ಅಂತ್ಯವನ್ನು RCB ಖಚಿತಪಡಿಸಿದೆ.
ಆ್ಯಂಡಿ ಅವರು ಈಗಾಗಲೇ ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸಿ ಕ್ರಿಕೆಟ್​ ತಂಡಗಳನ್ನು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, ಕೋಚ್​ ಆಗಿ ಪಿಎಸ್​ಎಲ್​, ದಿ ಹಂಡ್ರೆಡ್​, ಐಎಲ್​ಟಿ20, ಟಿ10 ಟೂರ್ನಿಗಳಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ. ಇಂಗ್ಲೆಂಡ್‌ ಪಾಲಿಗೆ ಅತ್ಯಂತ ಯಶಸ್ವಿ ತರಬೇತುದಾರರಾಗಿದ್ದ ಆ್ಯಂಡಿ, ಅವರ ಅವಧಿಯಲ್ಲಿ ತವರು ಮತ್ತು ವಿದೇಶಿ ನೆಲದಲ್ಲಿ ಆ್ಯಶಸ್​ ಸರಣಿಗಳನ್ನು ಗೆದ್ದಿದ್ದಾರೆ ಮತ್ತು 2010ರಲ್ಲಿ T20 ವಿಶ್ವಕಪ್‌ನಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಲ್ಲದೆ, ಇಂಗ್ಲೆಂಡ್ ಟೆಸ್ಟ್ ತಂಡವನ್ನು ವಿಶ್ವದ ನಂಬರ್ 1 ಸ್ಥಾನಕ್ಕೆ ತೆಗೆದುಕೊಂಡು ಹೋದರು.
ಇದನ್ನೂ ಓದಿ:ಅಂತಾರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡಿಗರ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್!
ಐಸಿಸಿ ಹಾಲ್​ ಆಫ್​ ಫೇಮ್​ನಲ್ಲಿ ಸ್ಥಾನ ಪಡೆದ ಜಿಂಬಾಂಬ್ವೆ ತಂಡದ ಮೊದಲ ಆಟಗಾರನೆಂಬ ಹೆಗ್ಗಳಿಕೆಯನ್ನೂ ಆ್ಯಂಡಿ ಫ್ಲವರ್​ ಹೊಂದಿದ್ದಾರೆ. ಆ್ಯಂಡಿ ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. 63 ಟೆಸ್ಟ್​ ಪಂದ್ಯಗಳಲ್ಲಿ 12 ಶತಕಗಳೊಂದಿಗೆ 51.54 ರನ್​ ಬ್ಯಾಟಿಂಗ್​ ಸರಾಸರಿಯೊಂದಿಗೆ ಯಶಸ್ವಿ ಕ್ರಿಕೆಟ್​ ಕರಿಯರ್​ ಹೊಂದಿದ್ದಾರೆ. ಭಾರತದ ನೆಲದಲ್ಲೂ ಆಟಗಾರನಾಗಿ ಮತ್ತು ಕೋಚ್​ ಆಗಿಯೂ ಒಳ್ಳೆಯ ಟ್ರ್ಯಾಕ್​ ರೆಕಾರ್ಡ್​ ಇದೆ.
ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ತಂಡವು ಹೀನಾಯ ಸೋಲನ್ನು ಅನುಭವಿಸಿತು. ಈ ಆವೃತಿಯ ಬಳಿಕ ಆರ್​ಸಿಬಿ ಫ್ರಾಂಚೈಸಿ ಆಂತರಿಕ ಪರಿಶೀಲನೆ ನಡೆಸಿದ್ದು, ಅದರ ಭಾಗವಾಗಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರ ಒಪ್ಪಂದವನ್ನು ನವೀಕರಿಸದಿರುವ ನಿರ್ಧಾರವನ್ನು RCB ದೃಢಪಡಿಸಿದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ RCBಗಾಗಿ ಅವರ ಎಲ್ಲ ಪ್ರಯತ್ನಗಳಿಗಾಗಿ ಫ್ರಾಂಚೈಸಿ ಈ ಇಬ್ಬರೂ ಗಣ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.
ಕೋಚ್​ ಆಗಿ ನೇಮಕವಾದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿರುವ ಆ್ಯಂಡಿ ಫ್ಲವರ್​, ನಾನು RCB ತಂಡ ಸೇರುತ್ತಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ಈ ಫ್ರಾಂಚೈಸಿಯನ್ನು ಪ್ರತಿನಿಧಿಸಲು ನಿಜವಾಗಿಯೂ ಗೌರವವಿದೆ. RCB ತಂಡವು ಅಪ್ರತಿಮ ಅಭಿಮಾನಿಗಳನ್ನು ಹೊಂದಿದೆ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ:ನುಹ್​ ಹಿಂಸಾಚಾರ: ರಾಜಸ್ಥಾನಿ ಸೋಗಿನಲ್ಲಿ ಪಾಕ್​ ಯೂಟ್ಯೂಬರ್​ನಿಂದ ಉರಿಯುವ ಬೆಂಕಿಗೆ ತುಪ್ಪ!
ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಮೆಚ್ಚುತ್ತೇನೆ. ಪ್ರಸ್ತುತ RCB ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ. ನಾನು ವಿಶೇಷವಾಗಿ ಫಾಫ್ ಜೊತೆ ಮತ್ತೆ ಒಂದಾಗಲು ಉತ್ಸುಕನಾಗಿದ್ದೇನೆ. ನಾವು ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ನಮ್ಮ ಪಾಲುದಾರಿಕೆ ಹಾಗೂ ಸಂಬಂಧವನ್ನು ಇನ್ನೂ ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಆ್ಯಂಡಿ ಫ್ಲವರ್​ ಹೇಳಿದ್ದಾರೆ.(ಏಜೆನ್ಸೀಸ್​)
ಮುಂಬರುವ ದಿನಗಳಲ್ಲಿ AI ಮಹಿಳೆಯರ ಉದ್ಯೋಗವನ್ನೇ ಹೆಚ್ಚು ಕಿತ್ತುಕೊಳ್ಳುತ್ತಂತೆ! ಯಾಕೆ?

ನುಹ್​ ಹಿಂಸಾಚಾರ: ರಾಜಸ್ಥಾನಿ ಸೋಗಿನಲ್ಲಿ ಪಾಕ್​ ಯೂಟ್ಯೂಬರ್​ನಿಂದ ಉರಿಯುವ ಬೆಂಕಿಗೆ ತುಪ್ಪ!

ಮಾನವಸಹಿತ ಆಳಸಮುದ್ರ ಯಾನಕ್ಕೆ ಭಾರತ ಸಜ್ಜು; 2026ರ ವೇಳೆಗೆ ಸಾಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
