ಬೆಂಗಳೂರು:ಇನ್ನೇನು ಕೆಲ ದಿನಗಳಲ್ಲೇ ಐಪಿಎಲ್​ ಪಂದ್ಯ ಆರಂಭವಾಗಲಿದ್ದು, ಈ ಬಾರಿಯ ಕಪ್​ ನಮ್ಮದೇ ಎನ್ನುತ್ತಿದ್ದಾರೆ ಆರ್​ಸಿಬಿ ಅಭಿಮಾನಿಗಳು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್​ಸಿಬಿ ತಂಡ ಇಂದು ಪ್ರೇಮಿಗಳ ದಿನದ ಪ್ರಯುಕ್ತ ತನ್ನ ಅಭಿಮಾನಿಗಳಿಗೆ ತಂಡದ ನೂತನ ಲಾಂಛನವನ್ನು ಉಡುಗೊರೆಯಾಗಿ ನೀಡುವುದರೊಂದಿಗೆ ಕನ್ನಡದಲ್ಲಿಯೇ ಪ್ರೇಮ ನಿವೇದನೆ ಮಾಡಿಕೊಂಡಿದೆ.
ಎರಡು ದಿನಗಳ ಹಿಂದೆ ಆರ್​ಸಿಬಿ ತನ್ನ ಎಲ್ಲ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ತನ್ನ ಲಾಂಛನವನ್ನು ತೆಗೆದಿತ್ತು. ಏನಾಗಬಹುದು ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ತಂಡವು ತನ್ನ ಹೊಸ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಈ ಬಾರಿ ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ನೀಡಿದೆ. ಹೊಸ ಲಾಂಛನ ಬಿಡುಗಡೆ ಮಾಡಿದ್ದಷ್ಟೇ ಅಲ್ಲದೆ ಕನ್ನಡದಲ್ಲಿ ಟ್ವೀಟ್​ ಮಾಡುವ ಮೂಲಕ ಮತ್ತೊಮ್ಮೆ ಕನ್ನಡಿಗರ ಮನಸ್ಸನ್ನು ಸೆರೆಹಿಡಿದಿದೆ.
ಆರ್​ಸಿಬಿಯ ನೂತನ ಲಾಂಛನದಲ್ಲಿ ಕೆಂಪು ಬಣ್ಣದ ಬ್ಯಾಕ್​ಗ್ರೌಂಡ್​ ಇದ್ದು, ಬಂಗಾರದ ಬಣ್ಣದ ಸಿಂಹವಿದೆ. ಬೆಂಗಳೂರನ್ನು ಪ್ರತಿನಿಧಿಸುವ ಈ ತಂಡವು, “ಹೆಸರಲ್ಲು ನೀವೆ, ಉಸಿರಲ್ಲು ನೀವೆ, ಎಲ್ಲೆಲ್ಲೂ ನೀವೇ ಸ್ಫೂರ್ತಿ. ಸೋಲಿನಲ್ಲೂ ನೀವೆ, ಗೆಲುವಿನಲ್ಲೂ ನೀವೆ, ಎಂದೆಂದು ನೀವೆ ಸಾಥಿ. ನಮ್ಮ ನಿನ್ನೆಗಳು ನೀವೆ, ನಾಳೆಗಳೂ ನೀವೆ, ಎಲ್ಲವೂ ನಿಮ್ಮ ಪ್ರೀತಿ.” ಎಂದು ಟ್ವೀಟ್​ ಮಾಡಿದೆ. ಪ್ರೇಮಿಗಳ ದಿನಕ್ಕೆ ಹೊಸ ಲಾಂಛನದ ಉಡುಗೊರೆಯೊಂದಿಗೆ ಈ ರೀತಿಯಲ್ಲಿ ಪ್ರೀತಿ ಹಂಚಿಕೊಂಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
