ನವದೆಹಲಿ:ರೈಲ್ವೇ ಪ್ರೊಟೆಕ್ಷನ್​ ಫೋರ್ಸ್​ (ಆರ್​ಪಿಎಫ್​) ಕಾನ್​ಸ್ಟೆಬಲ್ ಒಬ್ಬ ಆರ್​​ಪಿಎಫ್​ ಎಸ್​​ಐ ಮಾತ್ರವಲ್ಲದೆ ಇತರ ಮೂವರನ್ನು ರೈಲೊಳಗೇ ಗುಂಡಿಟ್ಟು ಕೊಂದ ಪ್ರಕರಣ ನಡೆದಿದೆ. ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್​ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್​ಪ್ರೆಸ್​ ರೈಲೊಳಗೇ ಈ ಘಟನೆ ನಡೆದಿದೆ.
ಆರ್​​ಪಿಎಫ್​ ಕಾನ್​ಸ್ಟೆಬಲ್ ಚೇತನ್ ಸಿಂಗ್ (34) ನಾಲ್ವರನ್ನು ಕೊಂದ ಆರೋಪಿ. ಈತ ತನ್ನ ಹಿರಿಯ ಸಹೋದ್ಯೋಗಿ, ಆರ್​ಪಿಎಫ್​ ಸಬ್​​ ಇನ್​​ಸ್ಪೆಕ್ಟರ್​ ಟಿಕಾರಾಮ್ ಮೀನಾ ಮಾತ್ರವಲ್ಲದೆ ಮೂವರು ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದಾನೆ. ಅಬ್ದುಲ್ ಖಾದಿರ್​ಭಾಯ್​ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದಾರ್ ಮೊಹಮ್ಮದ್ ಹುಸೇನ್ ಕೊಲೆಗೀಡಾದ ಇತರ ಮೂವರು.
ಕೊಲೆ ಮಾಡಿದ ಬಳಿಕ ರೈಲಿನ ಚೈನ್ ಎಳೆಯಲಾಗಿದ್ದು, ಮೀರಾ ರೋಡ್ ಮತ್ತು ದಹಿಸರ್ ಸ್ಟೇಷನ್​ ನಡುವೆ ರೈಲು ನಿಂತಿತ್ತು. ಆಗ ಆರೋಪಿ ಪರಾರಿ ಆಗಲೆತ್ನಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!
ರೈಲ್ವೇ ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕಾನ್​ಸ್ಟೆಬಲ್ ಮುಂಬೈನ ಭಾವ್​ನಗರ ಡಿವಿಜನ್​ನಿಂದ ಕಳೆದ ಮಾರ್ಚ್​​ನಲ್ಲಿ ವರ್ಗಾವಣೆಗೊಂಡಿದ್ದ. ಇತ್ತೀಚೆಗಷ್ಟೇ ತನ್ನ ಊರಾದ ಹತ್ರಾಸ್​ಗೆ ಹೋಗಿದ್ದ ಈತ ಜು. 17ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಂಗ್ ಸಂಸಾರದೊಂದಿಗೆ ನೆಲೆಸಿದ್ದು, ಪತ್ನಿ, 6 ಮತ್ತು 8 ವರ್ಷದ ಇಬ್ಬರು ಮಕ್ಕಳು ಹಾಗೂ ಪಾಲಕರು ಜೊತೆಗಿದ್ದಾರೆ.
ವಿಡಿಯೋ ವೈರಲ್:ಗುಂಡಿಟ್ಟು ಸಾಯಿಸುವ ಮುನ್ನ ಈತ ಬೆದರಿಕೆ ಒಡ್ಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಕೈಯಲ್ಲಿ ಗನ್ ಹಿಡಿದು ಹೆದರಿಸುತ್ತಿದ್ದ ಚೇತನ್ ಸಿಂಗ್, ಪಾಕಿಸ್ತಾನ ಸಂಪರ್ಕ ಹೊಂದಿದ್ದ ಮೂವರನ್ನು ಕೊಂದಿದ್ದೇನೆ ಎಂದಿದ್ದಾನೆ. ಮಾತ್ರವಲ್ಲ, ಭಾರತದಲ್ಲಿ ಬದುಕಬೇಕಿದ್ದರೆ ಮೋದಿ-ಯೋಗಿಗಷ್ಟೇ ಮತ ಹಾಕಬೇಕು ಎಂದೂ ವಿಡಿಯೋದಲ್ಲಿ ಹೇಳಿರುವುದು ಕೇಳಿಸಿದೆ. ಅದಾಗ್ಯೂ ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. –ಏಜೆನ್ಸೀಸ್
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
