ನವದೆಹಲಿ:ಎಸ್​.ಎಸ್​. ರಾಜಮೌಳಿ ನಿರ್ದೇಶನದ, ಜೂ. ಎನ್​ಟಿಆರ್​-ರಾಮ್​ಚರಣ್​ ಅಭಿನಯದ ಆಸ್ಕರ್​ ವಿಜೇತ “ಆರ್​ಆರ್​ಆರ್​” ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ಮಿಂಚಿದ್ದ ಜಾರ್ಜ್​ ರೇಮಂಡ್ ಸ್ಟೀವನ್ಸನ್ ಅವರು ಕೊನೆಯುಸಿರೆಳೆದಿದ್ದಾರೆ.
ರೇಮಂಡ್ ಸ್ಟೀವನ್ಸನ್ ಉತ್ತರ ಐರಿಶ್ ಮೂಲದ ನಟ. 1964ರ ಮೇ 25ರಂದು ಲಿಸ್ಬರ್ನ್​ ನಗರದಲ್ಲಿ ಜನಿಸಿದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಇನ್ನು 3 ದಿನಗಳಲ್ಲಿ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ವಿಧಿಯ ಕರೆಗೆ ಓಗೊಟ್ಟಿದ್ದಾರೆ.
ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಶೇ.15ಕ್ಕೆ ಇಳಿಕೆ; ಜೂನ್​ನಿಂದ ಇವಿ ವಾಹನಗಳು ದುಬಾರಿ
ಸ್ಟೀವನ್ಸನ್​ ಅವರು ನಿನ್ನೆ (ಮೇ 22) ಇಟಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಕಾರಣ ತಿಳಿದುಬರಬೇಕಿದೆ. ಸ್ಟೀವನ್ಸನ್​ ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ರೇಮಂಡ್ ಸ್ಟೀವನ್ಸನ್ ತಮ್ಮ ಸಿನಿಮಾ ವೃತ್ತಿಜೀವನವನ್ನು 1998ರಲ್ಲಿ ದಿ ಥಿಯರಿ ಆಫ್ ಫ್ಲೈಟ್‌ ಸಿನಿಮಾದೊಂದಿಗೆ ಪ್ರಾರಂಭಿಸಿದರು. 2008 ರಲ್ಲಿ ಬಿಡುಗೊಡೆಗೊಂಡ ಔಟ್‌ಪೋಸ್ಟ್ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಪಾತ್ರದಲ್ಲಿ ಅದ್ಭುತ ನಟನೆಯ ಮೂಲಕ ಭಾರತೀಯರಿಗೂ ಪರಿಚಿತರಾದರು.
ಅಂದಹಾಗೆ ಸ್ಟೀವನ್ಸನ್ ಅವರು ಥಾರ್ ಸಿನಿಮಾ ಸೇರಿದಂತೆ ಅನೇಕ ಜನಪ್ರಿಯ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ನಟನಾಗಿದ್ದ ಸ್ವೀವನ್ಸನ್​ ಅವರ ಅಕಾಲಿಕ ಮರಣ ಭಾರತೀಯ ಅಭಿಮಾನಿಗಳು ಸೇರಿದಂತೆ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಆಘಾತವಾಗಿದ್ದು, ನೆಚ್ಚಿನ ನಟ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ:ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ
ಆರ್​ಆರ್​ಆರ್​ ಸಿನಿಮಾ ತಂಡವು ಕೂಡ ಸ್ಟೀವನ್ಸನ್​ ಸಾವಿಗೆ ಸಂತಾಪ ಸೂಚಿಸಿದೆ. ನಮ್ಮ ತಂಡಕ್ಕೆ ನಿಜಕ್ಕೂ ಆಘಾತಕಾರಿ ಸುದ್ದಿ. ರೇಮಂಡ್​ ಸ್ಟೀವನ್ಸನ್​ ಆತ್ಮಕ್ಕೆ ಶಾಂತಿ ದೊರಕಲಿ. ನೀವು ನಮ್ಮ ಹೃದಯದಲ್ಲಿ ಸದಾ ಇರುತ್ತೀರಿ ಸ್ಕಾಟ್​ ಸರ್​​ ಎಂದು ಟ್ವೀಟ್​ ಮೂಲಕ ಆರ್​ಆರ್​ಆರ್​ ತಂಡ ಕಂಬನಿ ಮಿಡಿದಿದೆ.(ಏಜೆನ್ಸೀಸ್​)
What shocking news for all of us on the team! 💔
Rest in peace, Ray Stevenson.
You will stay in our hearts forever, SIR SCOTT.pic.twitter.com/YRlB6iYLFi
— RRR Movie (@RRRMovie)May 22, 2023

ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆ

ಅಮೃತ ಸಿಂಚನ ಅಂಕಣ | ಒಂದು ಜಗತ್ತು ಒಂದು ಕುಟುಂಬ ಆದರ್ಶ ಸಾಕಾರವಾಗಲಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 12 =
Remember me
