ನವದೆಹಲಿ:ಸಪ್ತಸಾಗರದಾಚೆಗಿನ ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ನೆಚ್ಚಿನ ಬಟರ್​ ಚಿಕನ್​ ತಿನ್ನಲು 32 ಕಿ.ಮೀ. ದೂರ ಹೋಗಿದ್ದಲ್ಲದೆ, 1.23 ಲಕ್ಷ ರೂ. ದಂಡವನ್ನೂ ಪಾವತಿಸಿದ್ದಾನೆ.
ಆಸ್ಟ್ರೇಲಿಯಾದಲ್ಲಿ ಕೋವಿಡ್​ ಪಿಡುಗು ಜೋರಾಗಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ವಾಹನಗಳಲ್ಲಿ ಸಂಚರಿಸಲು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇದರ ಹೊರತಾಗಿಯೂ ಮೆಲ್ಬೋರ್ನ್​ನ ನಿವಾಸಿ ತನ್ನ ಮನೆಯಿಂದ 32 ಕಿ.ಮೀ. ದೂರದಲ್ಲಿರುವ ತನ್ನ ಅಚ್ಚುಮೆಚ್ಚಿನ ಹೋಟೆಲ್​ನಲ್ಲಿ ಬಟರ್​ಚಿಕನ್​ ತಿನ್ನಲು ನಿರ್ಧರಿಸಿದ.
ಇದನ್ನೂ ಓದಿ:ಮಳೆಯಿಂದ ನೀರು ತುಂಬಿದ್ದ ಕೆಳಸೇತುವೆಯಲ್ಲಿ ತೇಲಿದ ಶವ
ಅದರಂತೆ ಆತ ತನ್ನ ಕಾರಿನಲ್ಲಿ ಮೆಲ್ಬೋರ್ನ್​ನ ವೆರ್ರಿಬೀ ಬಡಾವಣೆಯಿಂದ ಸಿಬಿಡಿಗೆ ತೆರಳಿದ್ದ. ಅಲ್ಲಿ ಬಟರ್​ ಚಿನ್​ ತಿಂದು ಸಮಾಧಾನವಾದ ಬಳಿಕ ಮನೆಗೆ ಹಿಂದಿರುಗುವಾಗ ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆತನಿಗೆ 1.23 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಈ ವ್ಯಕ್ತಿ ಮಾತ್ರವಲ್ಲ. ಇವರೊಂದಿಗೆ ಇನ್ನೂ 74 ಮಂದಿಗೆ ಲಕ್ಷಾಂತರ ರೂಪಾಯಿ ದುಂಡ ವಿಧಿಸಲಾಗಿದೆ ಎಂದು ಮೆಲ್ಬೋರ್ನ್​ ಪೊಲೀಸರು ತಿಳಿಸಿದ್ದಾರೆ. ಜನರು ಲಾಕ್​ಡೌನ್​ನಿಂದ ಬೇಸರಗೊಂಡಿದ್ದಾರೆ. ಇದರಿಂದ ಪಾರಾಗಲು ತಮ್ಮ ಸ್ನೇಹಿತರ ಮನೆಯಲ್ಲಿ ಸೇರಿಕೊಂಡು ಮದ್ಯಪಾನ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಕರೊನಾ ವೈರಾಣು ಸೋಂಕು ಪಸರಣದ ಸರಪಳಿ ತುಂಡರಿಸಲು ಲಾಕ್​ಡೌನ್​ ನಿಯಮ ಅನುಸರಿಸುವುದು ಮುಖ್ಯವಾದ್ದರಿಂದ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್​​ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + sixteen =
Remember me
