ಮುಂಬೈ:ಸ್ಮಾಲ್ ಕ್ಯಾಪ್ ಕಂಪನಿ ಆದಿತ್ಯ ವಿಷನ್ ಲಿಮಿಟೆಡ್‌ನ ಷೇರುಗಳು 4 ವರ್ಷಗಳಲ್ಲಿ ಹೂಡಿಕೆದಾರರಿಗೆ ಅದ್ಭುತ ಲಾಭ ನೀಡಿವೆ. ಆದಿತ್ಯ ವಿಷನ್ (Aditya Vision) ಷೇರುಗಳಲ್ಲಿ ಹಣ ಹೂಡಿದ ಹೂಡಿಕೆದಾರರು ಶ್ರೀಮಂತರಾಗಿದ್ದಾರೆ.
ಬಹು ಬ್ರಾಂಡ್ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲ್ ಚೈನ್​ ಕಂಪನಿ ಆಗಿರುವ ಆದಿತ್ಯ ವಿಷನ್ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 20 ರಿಂದ 3400 ರೂ.ಗೆ ಏರಿಕೆಯಾಗಿವೆ. ಆದಿತ್ಯ ವಿಷನ್ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 16000% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 3,997.85 ಆಗಿದೆ. ಆದಿತ್ಯ ವಿಷನ್ ಷೇರುಗಳ 52 ವಾರಗಳ ಕನಿಷ್ಠ ಬೆಲೆ 1255 ರೂ. ಇದೆ. ಹಿರಿಯ ಹೂಡಿಕೆದಾರ ಆಶಿಶ್ ಕಚೋಲಿಯಾ ಕೂಡ ಆದಿತ್ಯ ವಿಷನ್ ಷೇರುಗಳ ಮೇಲೆ ಬಾಜಿ ಕಟ್ಟಿದ್ದಾರೆ.
ಜುಲೈ 8, 2020 ರಂದು ಆದಿತ್ಯ ವಿಷನ್ ಲಿಮಿಟೆಡ್‌ ಷೇರುಗಳ ಬೆಲೆ 20.60 ರೂ. ಇತ್ತು. ಕಂಪನಿಯ ಷೇರುಗಳ ಬೆಲೆ 14 ಮೇ 2024 ರಂದು 3460.80 ರೂ. ಆಗಿದೆ. ಆದಿತ್ಯ ವಿಷನ್ ಷೇರುಗಳು ಕಳೆದ 4 ವರ್ಷಗಳಲ್ಲಿ ಹೂಡಿಕೆದಾರರಿಗೆ 16700% ಮಲ್ಟಿಬ್ಯಾಗರ್ ಆದಾಯವನ್ನು ನೀಡಿವೆ. ಒಬ್ಬ ವ್ಯಕ್ತಿಯು ಜುಲೈ 8, 2020 ರಂದು ಆದಿತ್ಯ ವಿಷನ್ ಲಿಮಿಟೆಡ್‌ನ ಷೇರುಗಳಲ್ಲಿ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಮತ್ತು ತನ್ನ ಹೂಡಿಕೆಯನ್ನು ಈಗಲೂ ಉಳಿಸಿಕೊಂಡಿದ್ದರೆ, ಪ್ರಸ್ತುತ ಷೇರುಗಳ ಮೊತ್ತವು ರೂ 1.68 ಕೋಟಿ ಆಗಿರುತ್ತದೆ.
ಕಳೆದ 2 ವರ್ಷಗಳಲ್ಲಿ ಆದಿತ್ಯ ವಿಷನ್ ಲಿಮಿಟೆಡ್‌ನ ಷೇರುಗಳ ಬೆಲೆ 403% ರಷ್ಟು ಭಾರಿ ಜಿಗಿತವಾಗಿದೆ. ಮೇ 13, 2022 ರಂದು ಕಂಪನಿಯ ಷೇರುಗಳ ಬೆಲೆ 689.20 ರೂ. ಇತ್ತು. ಕಳೆದ ಒಂದು ವರ್ಷದಲ್ಲಿ ಈ ಷೇರುಗಳ ಬೆಲೆ 143% ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳು ಮೇ 15, 2023 ರಂದು ರೂ 1427.80 ರಷ್ಟಿತ್ತು, ಅದು ಈಗ ರೂ 3400 ದಾಟಿದೆ.
ಆಶಿಶ್ ಕಚೋಲಿಯಾ ಅವರು ಕಂಪನಿಯ 2 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಕಚೋಲಿಯಾ ಆದಿತ್ಯ ವಿಷನ್ ಲಿಮಿಟೆಡ್‌ 239506 ಷೇರುಗಳನ್ನು ಹೊಂದಿದೆ. ಈ ಕಂಪನಿಯಲ್ಲಿ ಕಚೋಲಿಯಾ ಶೇ. 1.87 ಪಾಲನ್ನು ಹೊಂದಿದ್ದಾರೆ. ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇಕಡಾ 53.43 ಇದೆ. ಸಾರ್ವಜನಿಕ ಷೇರುಗಳ ಪಾಲು ಶೇಕಡಾ 46.57 ಇದೆ.

ರೂ. 80,000 ಕೋಟಿ ಖರ್ಚು ಮಾಡಲು ಯೋಜನೆ: ಅದಾನಿ ಸಮೂಹದ ಷೇರುಗಳಿಗೆಲ್ಲ ಭರ್ಜರಿ ಡಿಮ್ಯಾಂಡು

ರೂ. 374ರಿಂದ 25ಕ್ಕೆ ಕುಸಿದ ರಿಲಯನ್ಸ್ ಷೇರುಗಳ ಬೆಲೆ: ಈಗ ಮತ್ತೆ ಬೇಡಿಕೆ, ಅಪ್ಪರ್​ ಸರ್ಕ್ಯೂಟ್​ ಹಿಟ್​

ಆಹಾರ, ತರಕಾರಿ, ಇಂಧನ ಬೆಲೆ ಏರಿಕೆ: ಸಗಟು ಹಣದುಬ್ಬರ ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 12 =
Remember me
