ಮುಂಬೈ:ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಸ್ಟ್ಯಾಂಡರ್ಡ್ ಕ್ಯಾಪಿಟಲ್ ವಿಶೇಷ ಲಾಭಾಂಶವನ್ನು (ಡಿವಿಡೆಂಡ್​) ಅನುಮೋದಿಸಲು ಮತ್ತು ವಿವಿಧ ಸಾಧನಗಳ ಮೂಲಕ ಹಣವನ್ನು ಸಂಗ್ರಹಿಸಲು ಮುಂದಿನ ವಾರ, ಮಂಗಳವಾರ, ಏಪ್ರಿಲ್ 30, 2024 ರಂದು ಮುಂಬರುವ ಬೋರ್ಡ್ ಮೀಟಿಂಗ್‌ಗೆ ಸಜ್ಜಾಗಿದೆ.
ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು ಏಪ್ರಿಲ್ 30, 2024 ರಂದು ನಡೆಸಲು ನಿರ್ಧರಿಸಲಾಗಿದೆ, ವಿಶೇಷ ಲಾಭಾಂಶವನ್ನು ಮಧ್ಯಂತರ ಲಾಭಾಂಶವಾಗಿ ಘೋಷಿಸುವ ಪ್ರಸ್ತಾಪವನ್ನು ಪರಿಗಣಿಸಲಾಗುವುದು ಎಂದು ಷೇರು ಮಾರುಕಟ್ಟೆಗೆ ಕಂಪನಿ ತಿಳಿಸಿದೆ.
ಮೌಲ್ಯಯುತ ಷೇರುದಾರರ ಅಚಲ ಬೆಂಬಲ ಮತ್ತು ನಂಬಿಕೆಯನ್ನು ಗುರುತಿಸಿ ವಿಶೇಷ ಲಾಭಾಂಶವನ್ನು ನೀಡಲಾಗುತ್ತಿದೆ.
ಕಂಪನಿಯು ಈಕ್ವಿಟಿ ಷೇರುಗಳು/ಪರಿವರ್ತಿಸಬಹುದಾದ ಸೆಕ್ಯುರಿಟಿಗಳು ಸೇರಿದಂತೆ ನಿಧಿಯನ್ನು ಸಂಗ್ರಹಿಸಲು ವಿವಿಧ ವಿಧಾನಗಳನ್ನು ಪರಿಗಣಿಸಲಿದೆ.
ಕಳೆದ 3 ವರ್ಷಗಳಲ್ಲಿ ಈ ಷೇರಿನ ಬೆಲೆ 4,850% ಹೆಚ್ಚಳ ಕಂಡಿರುವುದು ವಿಶೇಷ. ಅಂದರೆ, 3 ವರ್ಷಗಳ ಹಿಂದೆ ಈ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಈಗ ಈ ಷೇರುಗಳ ಬೆಲೆ 48 ಲಕ್ಷ ರೂಪಾಯಿ ಆಗುತ್ತದೆ. ಈ ಕಂಪನಿಯ ಪ್ರಸ್ತುತ ಷೇರು ಮೌಲ್ಯವು 1.98 ರೂ. ಇದೆ. ಏಪ್ರಿಲ್ 26 ರಂದು ಈ ಷೇರು ಬೆಲೆ 4.21% ಏರಿಕೆ ಕಂಡಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 3.52 ಮತ್ತು ಕನಿಷ್ಠ ಬೆಲೆ ರೂ 1.15 ಇದೆ. ಈ ಷೇರಿನ ಮುಖಬೆಲೆ 1 ರೂ. ಇದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಸ್ಟ್ಯಾಂಡರ್ಡ್ ಕ್ಯಾಪಿಟಲ್ 291.06 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ಸ್ಟ್ಯಾಂಡರ್ಡ್ ಕ್ಯಾಪಿಟಲ್ ಡಿಸೆಂಬರ್ 31, 2024 ರಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ 5.78 ಕೋಟಿ ಆದಾಯವನ್ನು ವರದಿ ಮಾಡಿದೆ. ಇದೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 3.32 ಕೋಟಿ ರೂ. ಮುಟ್ಟಿದೆ.

ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಶಿಕ್ಷಣ ವಲಯದ ಸ್ಟಾಕ್​ ಒಂದೇ ದಿನದಲ್ಲಿ 20% ಏರಿಕೆ; ಅಪ್ಪರ್ ಸರ್ಕ್ಯೂಟ್ ಹಿಟ್​

ಮುಂದಿನ ವಾರ ಈ 3 ಸ್ಟಾಕ್‌ ಖರೀದಿಸಿ: ಮಾರುಕಟ್ಟೆ ತಜ್ಞರ ಸಲಹೆ

ಬ್ಯಾಟರಿ ಉತ್ಪಾದನೆ ಕಂಪನಿ ನಷ್ಟದಿಂದ ಲಾಭದತ್ತ: ಷೇರು ಬೆಲೆಯಲ್ಲಿ ಚೇತರಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − three =
Remember me
