ಲಖನೌ:ಬಟ್ಟೆ ಅಥವಾ ಯಾವುದೇ ವಸ್ತುಗಳನ್ನು ಖರೀದಿಸಲು ಮಾಲ್ ಅಥವಾ ಮಾರುಕಟ್ಟೆಗಳಿಗೆ ಹೋದಾಗ ನಮ್ಮ ವಸ್ತುಗಳ ಬಗ್ಗೆ ನಾವು ತುಂಬಾ ಜವಬ್ದಾರರಾಗಿರಬೇಕು. ಒಂದು ಕ್ಷಣ ಮೈಮರೆತರೆ ಏನಾಗಲಿದೆ ಎಂಬುದಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ವೀಕೆಂಡ್​ ಹಿನ್ನೆಲೆಯಲ್ಲಿ ಭಾನುವಾರ ನೋಯ್ಡಾದಲ್ಲಿರುವ ಮಾಲ್​ ಒಂದಕ್ಕೆ ಶಾಪಿಂಗ್​ ಹೋದ ಮಹಿಳೆ ಬಟ್ಟೆಯನ್ನು ಖರೀದಿಸಿ ಟ್ರಯಲ್​ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಆಕೆಯ ಪರ್ಸ್​ನಿಂದ ಬರೋಬ್ಬರಿಗೆ 1 ಲಕ್ಷ ರೂ. ಹಣವನ್ನು ಕಳ್ಳತನ ಮಾಡಲಾಗಿದೆ. ಟ್ರಯಲ್​ ರೂಮ್​ನ ಹೊರಭಾಗದಲ್ಲಿ ಇಡಲಾಗಿದ್ದ ಪರ್ಸ್​ನಲ್ಲಿ ಹಣ ಎಗರಿಸಲಾಗಿದೆ.
ಇದನ್ನೂ ಓದಿರಿ:ಬಿಗ್​ಬಾಸ್​ನಿಂದ ಹೊರಬಂದ ಗೀತಾ ಭಾರತಿ ಭಟ್!
ಈ ಘಟನೆ ನೋಯ್ಡಾದ 18ನೇ ಸೆಕ್ಟರ್​ನಲ್ಲಿರುವ ಡಿಎಲ್​ಎಫ್​ ಆಫ್​ ಇಂಡಿಯಾ ಮಾಲ್​ನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯು ಟ್ರಯಲ್​ ರೂಮ್​ನ ಹೊರಭಾಗದಲ್ಲಿ ಬ್ಯಾಗ್​ ಅನ್ನು ನೇತು ಹಾಕಿ ಬಟ್ಟೆಯನ್ನು ಟ್ರಯಲ್​ ನೋಡಲು ರೂಮಿನ ಒಳಗೆ ಹೋಗಿದ್ದಾಳೆ. ಆಕೆ ರೂಮಿಂದ ಹೊರ ಬಂದು ನೋಡಿದಾಗ ಪರ್ಸ್​ ನೋಡಿದಾಗ ಒಂದು ಲಕ್ಷ ರೂ. ನಾಪತ್ತೆಯಾಗಿರುವುದನ್ನು ಕಂಡು ಕಂಗಾಲಾದರು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸದ್ಯ ನೋಯ್ಡಾ ಪೊಲೀಸರು 20ನೇ ಸೆಕ್ಟರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮಾಲ್​ನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಮಾಲ್​ನಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!

ತಿಂಡಿ ತಿನ್ನುವಾಗ ಹೃದಯಾಘಾತಕ್ಕೆ ಒಳಗಾಗಿ ಕೆಎಸ್​ಆರ್​ಟಿಸಿ ಕಂಡಕ್ಟರ್​ ಸಾವು

ಪಾರ್ಟಿ-ಸಮಾರಂಭ ಅಂತ ಕರೊನಾ ರಿಯಾಯಿತಿ ನೀಡಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
