ನವದೆಹಲಿ: ಕಳೆದ ಏಳುವರ್ಷಗಳ ಅವಧಿಯಲ್ಲಿ ಬ್ಯಾಂಕುಗಳು ಒಟ್ಟು 10.7 ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ (ಎನ್​ಪಿಎ)ಯನ್ನು ರೈಟ್ ಆಫ್ (ವಸೂಲಿ ಆಗದೆ ಲೆಕ್ಕಪುಸ್ತಕಕ್ಕೆ ಸೀಮಿತ) ಮಾಡಿದೆ. ಕಳೆದ ವರ್ಷ 2,02,781 ಕೋಟಿ ರೂಪಾಯಿ ಇದೆ ರೀತಿ ರೈಟ್ ಆಫ್ ಆಗಿತ್ತು. ಕಳೆದ ವರ್ಷ ಕೋವಿಡ್ ಸಂಕಷ್ಟ ಎದುರಾದ ಸಂದರ್ಭದಲ್ಲಿ ಸಾಲಗಾರರಿಗೆ ಲೋನ್ ಮೊರಟೋರಿಯಂ ಅವಕಾಶವನ್ನು ಆರ್​ಬಿಐ ಘೋಷಿಸಿತ್ತು. ಇವೆಲ್ಲದರ ಪರಿಣಾಮ ಎನ್​ಪಿಎ ಪ್ರಮಾಣ 11,68,095 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 2021-22ರ ಕೇಂದ್ರ ಮುಂಗಡಪತ್ರದಲ್ಲಿ ಎನ್​ಪಿಎ ಪ್ರಮಾಣ 12.05 ಲಕ್ಷ ಕೋಟಿ ರೂಪಾಯಿ ಮುನ್ನೋಟ ಒದಗಿಸಲಾಗಿತ್ತು.
ಷೇರುಪೇಟೆ ಕುಸಿತ:ಅಮೆರಿಕದ ಫೆಡರಲ್ ಬ್ಯಾಂಕ್ ನೀತಿಗೆ ಮುಂದಾಗಿ ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಕುಸಿತ ದಾಖಲಿಸಿದೆ. ಬುಧವಾರ 329.06 ಅಂಶ ಕುಸಿದು 57,788.03ರಲ್ಲಿ ನಿಫ್ಟಿ 103.50 ಅಂಶ ಕುಸಿದು 17,221.40 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿವೆ. ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ 44 ಪೈಸೆ ಅಪಮೌಲ್ಯ ಕಂಡಿದ್ದು 76.32 ರೂಪಾಯಿ ಆಗಿದೆ. ಕಳೆದ 20 ತಿಂಗಳಲ್ಲಿ ಇದು ಹೆಚ್ಚಿನ ಕುಸಿತವಾಗಿದೆ.
ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ 297 ರೂ. ಇಳಿಕೆ ಆಗಿದ್ದು, 10 ಗ್ರಾಂನ ಬೆಲೆ 47,019 ರೂ.ಗೆ ತಗ್ಗಿದೆ. ಬೆಳ್ಳಿ ಬೆಲೆ 556 ರೂ. ಕುಗ್ಗಿದ್ದು, ಕೆಜಿ ದರ 59,569 ರೂ.ಗೆ ಇಳಿಕೆ ಆಗಿದೆ.
ರಾವತ್‌ ಸಾವಿನ ಬಗ್ಗೆ ನವೆಂಬರ್‌ನಲ್ಲಿಯೇ ಮುನ್ಸೂಚನೆ ಕೊಟ್ಟಿದ್ದ ಜ್ಯೋತಿಷಿ- ಪತ್ರಿಕೆಯಲ್ಲಿಯೂ ಪ್ರಕಟ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
