ಇಂದೋರ್​:ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ 14 ವರ್ಷದ ಬಾಲಕ 100 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದೋರ್​ನ ಮಹಾನಗರ ಪಾಲಿಕೆಯ ಸಿಬ್ಬಂದಿ ಗಡಿಯನ್ನು ಪಲ್ಟಿ ಮಾಡಿದ್ದಾರೆ. ಇದರಿಂದಾಗಿ ಗಾಡಿಯಲ್ಲಿದ್ದ ಸಾವಿರಾರು ರೂ. ಮೌಲ್ಯದ ಮೊಟ್ಟೆ, ತರಕಾರಿ ರಸ್ತೆ ಪಾಲಾಗಿವೆ.
ಕೋವಿಡ್​-19 ಪಿಡುಗು ಮೊದಲೇ ಬಡವರ ಬದುಕನ್ನು ದುಸ್ತರಗೊಳಿಸಿದೆ. ಇಂಥದ್ದರಲ್ಲಿ ಅಳಿದುಳಿದಿರುವ ಬಂಡವಾಳದಲ್ಲೇ ತಳ್ಳುಗಾಡಿಯಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸಲು ಯತ್ನಿಸುತ್ತಾರೆ. ಆದರೂ, ಮೊದಲಿನಷ್ಟು ನಿರೀಕ್ಷಿತ ಆದಾಯ ಬರುತ್ತಿಲ್ಲ. ಹಾಗಾಗಿ ಸಾಲಸೋಲ ಮಾಡಿ ತಂದು ಹಾಕಿದ ಬಂಡವಾಳದಲ್ಲಿ ದುಡಿದು ಸಾಲ ತೀರಿಸಲೂ ಆಗದೆ ಸಾಕಷ್ಟು ಜನರು ಪಡಿಪಾಟಲು ಪಡುತ್ತಿದ್ದಾರೆ.
Indore bjp government in Indore bad job ……pic.twitter.com/dSX5ilhXbO
— Vikas Choudhary (@VikasCh05703641)July 23, 2020

ಹೀಗಿದ್ದರೂ, 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ನಿರ್ವಹಣೆಗಾಗಿ ತಳ್ಳುಗಾಡಿಯಲ್ಲಿ ಮೊಟ್ಟೆ, ತರಕಾರಿ ಮತ್ತಿತರ ಡೇರಿ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ. ತಾನು ಹೋಗಬೇಕಿದ್ದ ಬಡಾವಣೆ ದೂರವಿದ್ದುದರಿಂದ, ಸುಧಾರಿಸಿಕೊಳ್ಳಲೆಂದು ರಸ್ತೆ ಬದಿ ಗಾಡಿ ನಿಲ್ಲಿಸಿಕೊಂಡು ನಿಂತಿದ್ದ.ಕೋವಿಡ್​ ಹಿನ್ನೆಲೆಯಲ್ಲಿ ಇಂದೋರ್​ ಮಹಾನಗರಪಾಲಿಕೆ ಎಡ-ಬಲ ಪದ್ಧತಿ, ಅಂದರೆ ಒಂದು ದಿನ ರಸ್ತೆಯ ಎಡಗಡೆ ಇರುವ ಅಂಗಡಿಗಳು ತೆರೆದಿದ್ದರೆ, ಇನ್ನೊಂದು ದಿನ ಬಲಗಡೆ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ-ವಹಿವಾಟು ನಡೆಸುವ ಪದ್ಧತಿಯನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಯುವತಿಯ ತಬ್ಬಿದ ಡೆಲಿವರಿ ಬಾಯ್‌: ಶೌಚಗೃಹಕ್ಕೆ ಹೋಗಿ ವಿಚಿತ್ರ ವರ್ತನೆ!
ಇದರಂತೆ ಶುಕ್ರವಾರ ಬಲ ಬದಿಯ ಅಂಗಡಿಗಳು ತೆರೆದು ವಹಿವಾಟು ಮಾಡಬಹುದಿತ್ತು. ಆದರೆ, ಬಾಲಕ ತನ್ನ ಗಾಡಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದು ಪಾಲಿಕೆ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಯಿತು. ತಕ್ಷಣವೇ ಬಾಲಕನ ಬಳಿ ಹೋದ ಅವರು 100 ರೂ. ಲಂಚ ಕೊಡು ಇಲ್ಲವೇ ಗಾಡಿ ತೆಗಿ ಎಂದು ಹೇಳಿದ್ದಾರೆ. ಗಾಡಿಯಲ್ಲಿ ವಸ್ತುಗಳು ಹೆಚ್ಚಾಗಿರುವುದರಿಂದ ಭಾರವಿದೆ. ಸುಧಾರಿಸಿಕೊಳ್ಳುತ್ತಿದ್ದೇನೆ. ತೆಗೆಯುತ್ತೇನೆ ಎಂದು ಹೇಳಿದ್ದಲ್ಲದೆ, ಲಂಚ ಕೊಡಲು ನಿರಾಕರಿಸಿದ್ದಾನೆ. ಇಷ್ಟಕ್ಕೆ ಸಿಟ್ಟಾದ ಅವರು ಗಾಡಿಯನ್ನು ಮಗುಚಿ ಹಾಕಿ ಹೊರಟುಹೋಗಿದ್ದಾರೆ.
ಗಾಡಿಯಲ್ಲಿದ್ದ ಮೊಟ್ಟೆಗಳೆಲ್ಲವೂ ಬಿದ್ದು ಒಡೆದು, ಅದರ ರಸವೆಲ್ಲವೂ ರಸ್ತೆಯಲ್ಲಿ ನೀರಿನಂತೆ ಹರಿಯಲಾರಂಭಿಸಿತ್ತು. ಇದರಿಂದಾಗಿ ಸಾಲ ಮಾಡಿ ಬಂಡವಾಳ ಹಾಕಿದ್ದ ಬಾಲಕನಿಗೆ ಸಾಲ ತೀರಿಸುವುದು ಹೇಗೆಂದು ಗೊತ್ತಾಗದೆ, ಗಾಡಿಯನ್ನು ಮಗುಚಿ ಹಾಕಿದ ಅಧಿಕಾರಿಗಳನ್ನು ನಿಂದಿಸುತ್ತಾ, ತನ್ನ ದುರದೃಷ್ಟಕ್ಕೆ ತನ್ನನ್ನೇ ತಾನು ಹಳಿದುಕೊಳ್ಳುತ್ತಾ ಅಳಿದುಳಿದ ವಸ್ತುಗಳನ್ನು ಎತ್ತಿಕೊಂಡು ಅಸಹಾಯಕನಾಗಿ ಮುಂದೆ ಸಾಗಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಚೀನಾ ಡಿಎನ್​ಎ ಅಧ್ಯಯನ: ನಿಶ್ಚಿತ ಜನಾಂಗೀಯರೇ ಟಾರ್ಗೆಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 14 =
Remember me
