ಮುಂಬೈ:ಅಂದಾಜು ರೂ. 1,200 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಯ ಗುತ್ತಿಗೆಯನ್ನು ಜಂಟಿ ಉದ್ಯಮದ ಮೂಲಕ ಪಡೆದುಕೊಂಡಿದೆ ಎಂದು ರೈಲ್ವೆ ಸಂಬಂಧಿತ ಕಂಪನಿಯಾದ ಇರ್ಕಾನ್​ (IRCON) ಭಾನುವಾರ ತಿಳಿಸಿದೆ.
“ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ (IRCON) ತನ್ನ ಜಂಟಿ ಉದ್ಯಮದಡಿಯಲ್ಲಿ ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ (DRA) ಅಂದರೆ ಇರ್ಕಾನ್-DRA ಜಂಟಿ ಉದ್ಯಮದ ಮೂಲಕ ಶಿವಲಿಂಗಪುರಂ ನಿಲ್ದಾಣದಿಂದ ಬೊರ್ರಗುಹಾಲು ನಿಲ್ದಾಣದವರೆಗೆ ಕೊತ್ತವಲಸ-ಕೋರಾಪುಟ್ ರೈಲು ಮಾರ್ಗ ದ್ವಿಪಥ ಯೋಜನೆಯ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದುಕೊಳ್ಳಲಾಗಿದೆ ಎಂದು ಇರ್ಕಾನ್​ ಷೇರು ಮಾರುಕಟ್ಟೆಗೆ ತಿಳಿಸಿದೆ.
1,260 ದಿನಗಳಲ್ಲಿ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಮೋಡ್‌ನಲ್ಲಿ ಈ ಯೋಜನೆಯನ್ನು ನಿರ್ಮಿಸಲಾಗುವುದು ಎಂದು IRCON ಹೇಳಿದೆ. ಪೂರ್ವ ಕರಾವಳಿ ರೈಲ್ವೆಯ ಈ ಯೋಜನೆಯ ವೆಚ್ಚ 1,198.09 ಕೋಟಿ ರೂ. ಇದೆ.ವಾರದ ಕೊನೆಯ ವಹಿವಾಟಿನ ದಿನದಂದು ಇರ್ಕಾನ್​ ಷೇರು ಬೆಲೆ 250.80 ರೂ. ಇತ್ತು. ಹಿಂದಿನ ದಿನಕ್ಕೆ ಹೋಲಿಸಿದರೆ ಈ ಸ್ಟಾಕ್ 2.96% ರಷ್ಟು ಏರಿಕೆ ಕಂಡಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 280.90 ರೂ. ಇದೆ. ಈ ಬೆಲೆ ಜನವರಿ 2023 ರಲ್ಲಿತ್ತು. ಏಪ್ರಿಲ್ 2023 ರಲ್ಲಿ ಈ ಷೇರಿನ ಬೆಲೆ 69.32 ರೂ.ಗೆ ತಲುಪಿತ್ತು.
ದೇಶೀಯ ಬ್ರೋಕರೇಜ್ ಪ್ರಭುದಾಸ್ ಲೀಲಾಧರ್ ಪ್ರಕಾರ, ಮುಂದಿನ ದಿನಗಳಲ್ಲಿ ಈ ಸ್ಟಾಕ್‌ನಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಕಾಣಬಹುದು. ಸ್ಟಾಪ್ ಲಾಸ್ ಅನ್ನು 210 ರೂ. ಮಟ್ಟದಲ್ಲಿ ಇಟ್ಟುಕೊಂಡು ರೂ. 280 ಟಾರ್ಗೆಟ್ ಪ್ರೈಸ್​​ ನಿಗದಿಗೆ ಬ್ರೋಕರೇಜ್​ ಸಲಹೆ ನೀಡಿದೆ.
ಏಪ್ರಿಲ್ 19 ರಂದು, ಇರ್ಕಾನ್​ ಇಂಟರ್ನ್ಯಾಷನಲ್ ಲಿಮಿಟೆಡ್ 2014-15 ನೇ ಸಾಲಿನ ಆರ್‌ಸಿಎಫ್ ರಾಯ್ ಬರೇಲಿ ಯೋಜನೆಗೆ ಸಂಬಂಧಿಸಿದಂತೆ 42.87 ಕೋಟಿ ರೂಪಾಯಿಗಳ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಬೇಡಿಕೆಯನ್ನು ಸ್ವೀಕರಿಸಿದೆ ಎಂದು ತಿಳಿಸಿದೆ. IRCON ಇಂಟರ್ನ್ಯಾಷನಲ್ ತನ್ನ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್​ನಲ್ಲಿ ಮಾಹಿತಿಯನ್ನು ನೀಡಿದೆ. ಈ ಬೇಡಿಕೆಯ ವಿರುದ್ಧ ಕಂಪನಿ ಮೇಲ್ಮನವಿ ಸಲ್ಲಿಸಲಿದೆ.
IRCON ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ರೈಲ್ವೆಗಳನ್ನು ಸ್ಥಾಪಿಸಲು, ನಿರ್ವಹಿಸಲು ನೆರವು ನೀಡುವುದಕ್ಕಾಗಿ ಸ್ಥಾಪಿಸಲಾದ ಕಂಪನಿಯಾಗಿದೆ. ಕಂಪನಿಯ ಕೆಲಸವು ರೈಲ್ವೆಗಳ ನಿರ್ಮಾಣ, ರೈಲ್ವೆ ವಿದ್ಯುದೀಕರಣ, ಸಂಕೇತಗಳು ಮತ್ತು ದೂರಸಂಪರ್ಕ, ರಸ್ತೆಗಳು, ಹೆದ್ದಾರಿಗಳು, ವಾಣಿಜ್ಯ, ಕೈಗಾರಿಕಾ ಮತ್ತು ವಸತಿ ಸಂಕೀರ್ಣಗಳು, ವಿಮಾನ ನಿಲ್ದಾಣದ ರನ್​ವೇ, ವಿಮಾನ ನಿಲ್ದಾಣ ನಿರ್ಮಾಣ, ಇಂಜಿನ್‌ಗಳ ಗುತ್ತಿಗೆ, ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳು ಇತ್ಯಾದಿಗಳನ್ನು ಒಳಗೊಂಡಿದೆ.

ನಷ್ಟದಲ್ಲಿದೆ ಅದಾನಿ ಸಮೂಹದ ಕಂಪನಿ: ಷೇರು ಬೆಲೆ ರೂ. 93ಕ್ಕೆ ಕುಸಿತ; ಹೂಡಿಕೆಗೆ ಸಕಾಲವೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
