ಮುಂಬೈ:ಕಳೆದ ಶುಕ್ರವಾರದ ವಹಿವಾಟಿನಲ್ಲಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್‌ನ ಷೇರುಗಳ ಬೆಲೆಯಲ್ಲಿ 5% ವರೆಗೆ ಏರಿಕೆ ಕಂಡುಬಂದಿದೆ.
ಶುಕ್ರವಾರ ಈ ಷೇರು 20.40 ರೂ.ಗೆ ತಲುಪಿತ್ತು. ಈ ಬೆಲೆಯಲ್ಲಿ, ಪೆನ್ನಿ ಸ್ಟಾಕ್ ತನ್ನ ಒಂದು ವರ್ಷದ ಕನಿಷ್ಠ ರೂ 5.17 ರಿಂದ ಶೇಕಡಾ 266 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಇದರ 52 ವಾರಗಳ ಗರಿಷ್ಠ ಬೆಲೆ ರೂ 23.99 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 13,645.24 ಕೋಟಿ ರೂ. ಇದೆ.
ಈ ವರ್ಷ ಇಲ್ಲಿಯವರೆಗೆ, ಈ ಷೇರುಗಳ ಬೆಲೆ 40% ವರೆಗೆ ಲಾಭ ನೀಡಿದೆ. ಒಂದು ವರ್ಷದಲ್ಲಿ ಶೇ. 250ರಷ್ಟು ಏರಿಕೆ ಕಂಡಿದೆ.
ಈ ಷೇರುಗಳ ಕಳೆದ ಐದು ವರ್ಷಗಳಲ್ಲಿ 680.39% ರಷ್ಟು ಬಲವಾದ ಏರಿಕೆ ದಾಖಲಿಸಿವೆ. ಈ ಅವಧಿಯಲ್ಲಿ ಈ ಷೇರು ಬೆಲೆ 2 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ. ದೀರ್ಘಾವಧಿಯಲ್ಲಿ ಈ ಷೇರು ಕೂಡ ಭಾರಿ ನಷ್ಟವನ್ನು ಅನುಭವಿಸಿದೆ. 2007ರಲ್ಲಿ ಈ ಷೇರಿನ ಬೆಲೆ 136 ರೂ. ಇತ್ತು. ಅಲ್ಲಿಂದ ಇದುವರೆಗೆ ಈ ಷೇರು ಬೆಲೆ ಶೇ. 85ರಷ್ಟು ಕುಸಿದಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್‌ನ ಏಕೀಕೃತ ನಿವ್ವಳ ಲಾಭ 588.79 ಕೋಟಿ ರೂ. ಆಗಿದೆ. ಈ ಕಂಪನಿಯ ಲಾಭವು ಮುಖ್ಯವಾಗಿ ಆದಾಯದ ಹೆಚ್ಚಳದಿಂದ ಹೆಚ್ಚಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 43.99 ಕೋಟಿ ರೂ.ಗಳ ಏಕೀಕೃತ ನಿವ್ವಳ ನಷ್ಟವನ್ನು ಕಂಪನಿ ಅನುಭವಿಸಿತ್ತು. 2024ರ ಮಾರ್ಚ್​ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 1,863.63 ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಗೆ ಹೋಲಿಸಿದರೆ, ಇದು ಶೇಕಡಾ 1,385.41 ಹೆಚ್ಚಳವಾಗಿದೆ.
2023-24ರ ಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭವು 1,021.95 ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2022-23 ರಲ್ಲಿ ಇದು 55.42 ಕೋಟಿ ರೂ. ಇತ್ತು. 2023-24 ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 7,151.29 ಕೋಟಿ ರೂ.ಗೆ ಏರಿಕೆಯಾಗಿದ್ದು, ವರ್ಷದ ಹಿಂದೆ 5,922.15 ಕೋಟಿ ರೂ. ಇತ್ತು.

ಸರ್ಕಾರಿ ಬ್ಯಾಂಕ್​ಗಳ ಬೆಳವಣಿಗೆ: ಎಸ್​ಬಿಐ ಹಿಂದಿಕ್ಕಿ ಈ ಬ್ಯಾಂಕ್​ ಮುಂಚೂಣಿಗೆ

ಮುಂದಿನ 5-10 ವರ್ಷಗಳಲ್ಲಿ ಭಾರತದಲ್ಲಿ ಸತುವಿಗೆ ದುಪ್ಪಟ್ಟು ಬೇಡಿಕೆ ಏಕೆ ಗೊತ್ತೆ?

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 6.7%: ಇಂಡಿಯಾ ರೇಟಿಂಗ್ಸ್ ಅಂದಾಜು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × four =
Remember me
