ನವದೆಹಲಿ:ಕ್ಲಿನಿಕಲ್​ ಟ್ರಯಲ್​ಗೆ ಒಳಪಡದಿದ್ದರೂ ಕೋವಿಡ್​-19 ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಮುಂದಾಗಿದೆ. 1,490.40 ಕೋಟಿ ರೂ. ಮೌಲ್ಯದ ಲಸಿಕೆಯನ್ನು ತಯಾರಿಸಲು ಕೇವಲ ಅರ್ಧ ಗಂಟೆಯಲ್ಲಿ ನಿರ್ಧರಿಸಿದ್ದಾಗಿ ಸಂಸ್ಥೆಯ ಮುಖ್ಯಸ್ಥ ಅಡಾರ್​ ಪೂನಾವಾಲಾ ತಿಳಿಸಿದ್ದಾರೆ.
ಬ್ರಿಟನ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಕೋವಿಡ್​-19 ಲಸಿಕೆಯನ್ನು ಸೆರಂ ಇನ್​ಸ್ಟಿಟ್ಯೂಟ್​ ಭಾರತದಲ್ಲಿ ತಯಾರಿಸಿ ಮಧ್ಯಮ ಆದಾಯದ ರಾಷ್ಟ್ರಗಳಿಗೂ ಸರಬರಾಜು ಮಾಡಲಿದೆ. ನವೆಂಬರ್​ ವೇಳೆಗೆ 1,490.40 ಕೋಟಿ ರೂ. ಮೌಲ್ಯದ ಲಸಿಕೆಗಳು ಸಿದ್ಧವಾಗಲಿವೆ. ಭಾರತದಲ್ಲಿ ತಲಾ 1 ಸಾವಿರ ರೂ.ನಂತೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಒಂದು ವೇಳೆ ಕ್ಲಿನಿಕಲ್​ ಟ್ರಯಲ್ಸ್​ನ ಫಲಿತಾಂಶಗಳು ವ್ಯತಿರಿಕ್ತವಾಗಿ ಬಂದಲ್ಲಿ 1,490.40 ಕೋಟಿ ರೂ. ಮೌಲ್ಯದ ಲಸಿಕೆಯನ್ನು ನಾಶಪಡಿಸಬೇಕಾದ ಅಪಾಯವೂ ಇದೆ. ಆದರೂ, ರಿಸ್ಕ್​ ತೆಗೆದುಕೊಂಡು ಲಸಿಕೆಯನ್ನು ತಯಾರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದ ಗಣಿಯಲ್ಲಿ ಪತ್ತೆಯಾದ 11 ಕ್ಯಾರಟ್​ ವಜ್ರದ ಹರಳಿನ ಬೆಳೆ ಕೇಳಿದರೆ ಶಾಕ್​ ಆಗುತ್ತೀರಿ
ದ ಲ್ಯಾನ್ಸೆಟ್​ ಜರ್ನಲ್​ನಲ್ಲಿ ಪ್ರಕಟವಾಗಿರುವ ಕೋವಿಡ್​-19 ಲಸಿಕೆಯ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ನ ವರದಿಯಲ್ಲಿ ಮೊದಲ ಹಂತದಲ್ಲಿ ತೃಪ್ತಿದಾಯಕ ಫಲಿತಾಂಶ ಲಭ್ಯವಾಗಿದೆ. ಯಾವುದೇ ರೀತಿಯ ಗಂಭೀರವಾದ ಅಡ್ಡಪರಿಣಾಮಗಳನ್ನು (ಸೈಡ್​ ಎಫೆಕ್ಟ್ಸ್​) ಉಂಟು ಮಾಡದೆ, ಪ್ರತಿಕಾಯ ಮತ್ತು ಟಿ-ಸೆಲ್​ನ ರೋಗನಿರೋಧ ಪ್ರತಿಕ್ರಿಯೆಯನ್ನು ತೋರಿರುವುದಾಗಿ ಹೇಳಲಾಗಿತ್ತು.
ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಸೆರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥರು ಭಾರತದಲ್ಲಿ ಪ್ರತಿಯೊಬ್ಬರಿಗೂ ಕೋವಿಡ್​-19 ಲಸಿಕೆ ಹಾಕಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಆಕ್ಸ್​ಫರ್ಡ್​ನ ಲಸಿಕೆ ಆಗಸ್ಟ್​ನಲ್ಲಿ 3ನೇ ಹಂತದ ಟ್ರಯಲ್​ಗೆ ಒಳಪಡುವುದು ಬಹುತೇಕ ಖಚಿತವಾಗಿದೆ. ಅಲ್ಲಿಂದ ಎರಡು ಅಥವಾ ಎರಡೂವರೆಗೆ ತಿಂಗಳಲ್ಲಿ ಈ ಹಂತದ ಟ್ರಯಲ್​ ಮುಗಿಯುತ್ತದೆ. ಕ್ಲಿನಿಕಲ್​ ಟ್ರಯಲ್​ ಫಲಿತಾಂಶ ಸಕಾರಾತ್ಮಕವಾಗಿದ್ದು, ಭಾರತೀಯ ಔಷಧ ನಿಯಂತ್ರಕರು ಲಸಿಕೆ ಸುರಕ್ಷಿತವಾಗಿದ್ದು ಪರಿಣಾಮಕಾರಿಯಾಗಿದೆ ಎಂದು ಹೇಳಿ ಹಸಿರು ನಿಶಾನೆ ತೋರಿದರೆ ನವೆಂಬರ್​ನಲ್ಲಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ​
ಸೋಂಕಿತ ಮಕ್ಕಳಲ್ಲಿ ಜೀವಕಸಿಯುವ ಹೊಸ ಸಮಸ್ಯೆ- ಎಂಟು ಮಂದಿ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
