ಮುಂಬೈ:ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರು ತಮ್ಮ ಸಹೋದರಿಯ ಹೆಸರಿನಲ್ಲಿ 4.5 ಕೋಟಿ ರೂ. ನಿಶ್ಚಿತ ಠೇವಣಿ ಇರಿಸಿದ್ದರು. ಇದರ ಬಡ್ಡಿ ಎಲ್ಲವೂ ಸೇರಿ 4.63 ಕೋಟಿ ರೂ. ಆಗಿತ್ತು. ಆದರೆ, ರಿಯಾ ಚಕ್ರವರ್ತಿ ಅವರು ಸುಶಾಂತ್​ ಅವರ ಜೀವನದೊಳಗೆ ಪ್ರವೇಶಿಸುತ್ತಿದ್ದಂತೆ ಈ ನಿಶ್ಚಿತ ಠೇವಣಿಯಿಂದ 2.63 ಕೋಟಿ ರೂ. ಮೊತ್ತವನ್ನು ಇಬ್ಬರು ಲೆಕ್ಕಪರಿಶೋಧಕರ (ಸಿಎ) ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಲಾಗಿದೆ. ತನ್ಮೂಲಕ ಅದನ್ನು ಕೇವಲ 2 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ.
2019ರ ಮೇಯಿಂದ 2020ರ ಏಪ್ರಿಲ್​ ನಡುವೆ ಈ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಸ್ವತಃ ರಿಯಾ ಚಕ್ರವರ್ತಿ ಅವರು ಈ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಿಯಾ ಅವರ ಒತ್ತಾಸೆಯ ಮೇರೆಗೆ ಸುಶಾಂತ್​ ಸಿಂಗ್​ ರಜಪೂತ್​ ಈ ವರ್ಗಾವಣೆ ಮಾಡಿದ್ದಾರೆ ಎಂದು ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಆರೋಪಿಸಿದ್ದಾರೆ.
ಇದನ್ನೂ ಓದಿ:ಔಷಧ ಅಂಗಡಿಗಳ ಮೇಲೆ ನಿಗಾ, ಮಾತ್ರೆ ಖರೀದಿಸುವವರ ಮಾಹಿತಿ ಸಂಗ್ರಹ ತಪಾಸಣೆಗೆ ಮುಂದಾಗದವರ ಮೇಲೆ ಎಚ್ಚರ
ಇದಷ್ಟೇ ಅಲ್ಲ. ಸುಶಾಂತ್​ ಅವರ ಹಲವಾರು ಖಾತೆಗಳಲ್ಲಿ ಇದ್ದ ಹಣವನ್ನು ಭಾರಿ ಪ್ರಮಾಣದಲ್ಲಿ ಹಿಂಪಡೆದಿರುವುದು, ಅವುಗಳಿಗೆ ಸಮರ್ಪಕವಾದ ವಿವರಣೆಗಳನ್ನು ಒದಗಿಸದೇ ಇರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮುನ್ನ ಬಿಹಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​, ನನ್ನ ಪುತ್ರನ ಬ್ಯಾಂಕ್​ ಅಕೌಂಟ್​ನಲ್ಲಿ 17 ಕೋಟಿ ರೂ. ನಗದು ಇತ್ತು ಎಂಬುದು ಆ ಬ್ಯಾಂಕ್ ಸ್ಟೇಟ್​ಮೆಂಟ್​ನಿಂದ ತಿಳಿದುಬರುತ್ತದೆ. ಆದರೆ, ಕಳೆದೊಂದು ಸಾಲಿನಲ್ಲಿ ಈ ಖಾತೆಯಿಂದ ಒಟ್ಟು 15 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಹಣ ವರ್ಗಾವಣೆಗೊಂಡಿರುವ ಬ್ಯಾಂಕ್​ ಖಾತೆಗಳಿಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ನನ್ನ ಪುತ್ರನಿಗೆ ಸಂಬಂಧಿಸಿದ ಎಲ್ಲ ಬ್ಯಾಂಕ್​ ಖಾತೆಗಳ ವಹಿವಾಟಿನಲ್ಲಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ, ರಿಯಾ ಅವರು ನನ್ನ ಪುತ್ರನ ಬ್ಯಾಂಕ್​ ಖಾತೆಗಳಿಂದ ಹಾಗೂ ಆತನ ಕ್ರೆಡಿಟ್​ ಕಾರ್ಡ್​ಗಳಿಂದ ಎಷ್ಟೆಲ್ಲ ಹಣವನ್ನು ಹೇರಾಪೇರಿ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 3 =
Remember me
