ಹೈದರಾಬಾದ್​:ಡೇಟಿಂಗ್​ ಆ್ಯಪ್​ ಮೂಲಕ ಅವಿವಾಹಿತ ಪುರುಷರನ್ನು ಟಾರ್ಗೆಟ್​ ಮಾಡಿ ಮದುವೆ ಹಾಗೂ ಡೇಟಿಂಗ್​ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಖತರ್ನಾಕ್​ ದಂಪತಿಯನ್ನು ಹೈದರಾಬಾದ್​ನ ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬನಿಗೆ 21 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಕಂಪಾ ಹರಿದಯಾನಂದ (30) ಮತ್ತು ಅನುಷಾ ಅಲಿಯಾಸ್​ ಹರಿಕಾ (20) ಎಂದು ಗುರುತಿಸಲಾಗಿದೆ. ಇಬ್ಬರು ಸಹ ವಿಜಯವಾಡ ಮೂಲದವರು. 2017ರಲ್ಲಿ ಮದುವೆಯಾಗಿದ್ದಾರೆ. ಇದಕ್ಕೂ ಮುನ್ನವೇ ಅನುಷಾ ಮದುವೆಯಾಗಿ ಡಿವೋರ್ಸ್​ ಪಡೆದುಕೊಂಡಿದ್ದಳು. ಎರಡನೇ ಬಾರಿಗೆ ಹರಿದಯಾನಂದನನ್ನು ಮದುವೆಯಾಗಿದ್ದಾಳೆ.
ಇದನ್ನೂ ಓದಿ:54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​
ಹರಿದಯಾನಂದ್​ ಆರೋಗ್ಯ ಹದಗೆಡುತ್ತಿರುವುದರಿಂದ ಕುಟುಂಬ ಸಂಕಷ್ಟಕ್ಕೀಡಾಗಿರುವ ಸಮಯದಲ್ಲೇ ಅನುಷಾಗೆ ಹೈದರಾಬಾದ್​ನ ಡಯಾಗ್ನೋಸ್ಟಿಕ್​ ಕೇಂದ್ರದಲ್ಲಿ ಕೆಲಸಕ್ಕೆ ಸಿಕ್ಕಿತ್ತು. ಆದರೂ ಸಂಬಳ ಸಾಕಾಗದೇ ಹೆಚ್ಚಿನ ಆದಾಯಕ್ಕಾಗಿ ಬೇರೆ ದಾರಿಯನ್ನು ದಂಪತಿ ಹುಡುಕುತ್ತಿದ್ದರು. ಹೀಗಿರುವಾಗ ದಂಪತಿಯ ತಲೆಗೆ ಖತರ್ನಾಕ್​ ಐಡಿಯಾ ಒಂದು ಹೊಳೆದಿದೆ. ತಕ್ಷಣ ಡೇಟಿಂಗ್​ ಆ್ಯಪ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಿವಾಹಿತ ಪುರುಷರನ್ನು ಟಾರ್ಗೆಟ್​ ಮಾಡಲು ಆರಂಭಿಸಿದರು.
ಅಂದಹಾಗೆ ದಂಪತಿ ಹರಿಕಾ ಹರಿಯಾನಂದ್​ ಹೆಸರಿನಲ್ಲಿ ಇಂಡಿಯನ್​ಡೇಟಿಂಗ್​.ಕಾಮ್​ (IndianDating.com) ಆ್ಯಪ್​ನಲ್ಲಿ ನಕಲಿ ಖಾತೆ ತೆರೆದಿದ್ದರು. ಅಂತರ್ಜಾಲದಲ್ಲಿ ಬ್ಯೂಟಿಫುಲ್​ ಹುಡುಗಿಯ ಫೋಟೋ ಡೌನ್​ಲೋಡ್​ ಮಾಡಿಕೊಂಡು ಪ್ರೋಫೈಲ್​ಗೆ ಅಪ್​ಲೋಡ್​ ಮಾಡಿದ್ದರು. ಹುಡುಗಿ ಫೋಟೋ ನೋಡಿ ಮರುಳಾಗಿ ಮಸೇಜ್​ ಮಾಡುತ್ತಿದ್ದ ಅವಿವಾಹಿತ ಪುರುಷರ ಜತೆ ಹರಿಯಾನಂದ್​ ಹೆಣ್ಣಿನ ಹೆಸರಲ್ಲಿ ಚಾಟ್​ ಮಾಡುತ್ತಿದ್ದ. ಅದರಲ್ಲೂ ಶ್ರೀಮಂತರು ಮತ್ತು ಮಹಿಳೆಯರ ಮೋಹವಿರುವ ಪುರುಷರೇ ಅವರ ಟಾರ್ಗೆಟ್​ ಆಗಿದ್ದರು.
ಇದನ್ನೂ ಓದಿ:ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರೈತ: ಡೆತ್​ನೋಟ್​ನಲ್ಲಿದೆ ನೋವಿನ ಮಾತು!
ಹೀಗಿರುವಾಗ ಹೈದರಾಬಾದ್​ನ ನಾರದಪೇಟ್​ ಮೂಲದ ವ್ಯಕ್ತಿಯೊಬ್ಬ ಡೇಟಿಂಗ್​ ಆ್ಯಪ್​ನಲ್ಲಿ ಪರಿಚಿತನಾಗುತ್ತಾನೆ. ರೋಸಾರಿಯೋ ಹೆಸರಿನಲ್ಲಿ ಚಾಟ್​ ಮಾಡುತ್ತಿದ್ದ ಹರಿಯಾನಂದ ಬೆಣ್ಣೆಯಂತಹ ಮಾತುಗಳನ್ನಾಡಿ ಹುಡುಗಿ ಒಳ್ಳೆಯವಳು ಎಂದು ನಂಬುವಂತೆ ಮಾಡುತ್ತಾನೆ. ಇಬ್ಬರ ನಡುವಿನ ಸ್ನೇಹ ನಂಬಿಕೆಗೆ ತಿರುಗಿದಾಗ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಹೃಯದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಪರೇಷನ್​ ಮಾಡಿಸಬೇಕೆಂದು ಹೇಳಿ ಹಣದ ನೆರವು ಕೇಳುತ್ತಾನೆ. ಅದನ್ನು ನಂಬಿ ಡೊನಾಲ್ಡ್​ ಹಣವನ್ನು ಕಳುಹಿಸುತ್ತಾನೆ.
ಬಳಿಕ ತನ್ನ ತಾಯಿ ತೀರಿ ಹೋದಳು ಎಂದು ಹೇಳಿ ಮತ್ತಷ್ಟು ಹಣವನ್ನು ಕೇಳಿ ಪಡೆದುಕೊಳ್ಳುತ್ತಾರೆ. ಹೀಗೆ ಸುಮಾರು 21 ಲಕ್ಷ ರೂ. ಹಣವನ್ನು ಡೊನಾಲ್ಡ್​ ಎಂಬುವರಿಂದ ಖತರ್ನಾಕ್​ ದಂಪತಿ ಪಡೆದುಕೊಂಡಿರುತ್ತಾರೆ. ಇದರ ನಡುವೆ ಹಣ ನೀಡಿದ ವ್ಯಕ್ತಿ ಮದುವೆ ಬಗ್ಗೆ ಅನೇಕ ಬಾರಿ ಪ್ರಸ್ತಾಪ ಮಾಡಿದಾಗಲೆಲ್ಲ ನಡುವೆ ಏನಾದರೂ ಬೇರೆ ವಿಚಾರ ಮಾತನಾಡಿ ವಿಷಯಾಂತರ ಮಾಡುತ್ತಿದ್ದರು.
ಇದನ್ನೂ ಓದಿ:ಹೊಸ ವರ್ಷಾಚರಣೆ ವೇಳೆ ತೋಳದ ಮಾಸ್ಕ್​ ಧರಿಸಿ ಬೀದಿಯಲ್ಲಿ ಅಡ್ಡಾಡ್ತಿದ್ದ ವ್ಯಕ್ತಿ ಅರೆಸ್ಟ್​!
ಮದುವೆಯನ್ನು ಮುಂದೂಡುತ್ತಾ ಹಣದ ನೆರವು ಕೇಳುವುದನ್ನು ಮುಂದುವರಿಸುವುದನ್ನು ನೋಡಿ ಅನುಮಾನಗೊಂಡ ಡೊನಾಲ್ಡ್​, ರಾಚಕೊಂಡ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಬಳಿಕ ಪ್ರಕರಣ ಬೆನ್ನತ್ತಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಡೊನಾಲ್ಡ್​ ದೂರು ನೀಡಿರುವುದನ್ನು ತಿಳಿದು ದಂಪತಿ ಹೈದರಾಬಾದ್​ನಿಂದ ವಿಜಯವಾಡಕ್ಕೆ ಪರಾರಿಯಾಗಿದ್ದರು. ಸದ್ಯ ಬಂಧಿಯಾಗಿರುವ ದಂಪತಿ ಪೊಲೀಸ್​ ವಿಚಾರಣೆ ಎದುರಿಸುತ್ತಿದ್ದಾರೆ.(ಏಜೆನ್ಸೀಸ್​)
ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

ಫ್ರೆಂಡ್​ಶಿಪ್​ ನಿರಾಕರಿಸಿದ ಮಹಿಳೆಗೆ ಕೆಟ್ಟ ಹೆಸರು ತರಲು ಖತರ್ನಾಕ್​ ಐಡಿಯಾ ಮಾಡಿದ ಕಿರಾತಕ!

ಐರೋಪ್ಯ ಒಕ್ಕೂಟದಿಂದ ಕೊನೆಗೂ ಹೊರಬಂದ ಬ್ರಿಟನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 20 =
Remember me
