ನವದೆಹಲಿ :ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು ಸಾವಿರಾರು ಜನರು ವೆಬ್​ಸೈಟ್​ ತೊಂದರೆಗಳ ಮಧ್ಯೆ ರಿಟರ್ನ್​ ಫೈಲ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಈ ಸಮಯದಲ್ಲಿ ತೆರಿಗೆ ಇಲಾಖೆಯು ನಿಯಮಿತವಾಗಿ ರಿಟರ್ನ್​ ಸಲ್ಲಿಸಿರುವ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ.
2020 ರ ಏಪ್ರಿಲ್ 1 ನೇ ತಾರೀಕಿನಿಂದ 2021 ರ ಮಾರ್ಚ್ 29 ರ ನಡುವೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್​ ಟ್ಯಾಕ್ಸಸ್, ಒಟ್ಟು 2,24,829 ಕೋಟಿ ರೂಪಾಯಿಗಳ ಟ್ಯಾಕ್ಸ್ ರೀಫಂಡ್ ಮಾಡಿದೆಯಂತೆ. ಕಳೆದ ವರ್ಷಗಳಲ್ಲಿ ತೆರಿಗೆ ವಿನಾಯಿತಿಯ ಅರ್ಹತೆ ಪಡೆದಿರುವ 2.37 ಕೋಟಿ ತೆರಿಗೆದಾರರಿಗೆ ರೀಫಂಡ್ ನೀಡಲಾಗಿದೆ ಎಂದು ಇಲಾಖೆ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಐಎಎಸ್​ ಅಧಿಕಾರಿಗಳ ವರ್ಗಾವಣೆ: ಬಿಬಿಎಂಪಿ ಹೊಣೆ ರಾಕೇಶ್ ಸಿಂಗ್‌ಗೆ, ಕಂದಾಯಕ್ಕೆ ಮಂಜುನಾಥ್ ಪ್ರಸಾದ್
ಮುಖ್ಯವಾಗಿ ಟಿಡಿಎಸ್​ನಲ್ಲಿ ಕಡಿತವಾಗಿರುವ ಟ್ಯಾಕ್ಸ್​ ಮೊತ್ತವನ್ನು, ವಿನಾಯಿತಿಗೆ ಅರ್ಹರಾದ 2,33,78,418 ವೈಯಕ್ತಿಕ ಪಾವತಿದಾರರಿಗೆ 85,012 ಕೋಟಿ ರೂಪಾಯಿ ಆದಾಯ ತೆರಿಗೆ ರೀಫಂಡ್ ಮಾಡಲಾಗಿದೆ. ಮತ್ತು 1,39,817 ಕೋಟಿ ರೂಪಾಯಿ ಕಾರ್ಪೊರೇಟ್ ಟ್ಯಾಕ್ಸ್ಅನ್ನು 2,85,438 ಪ್ರಕರಣಗಳಲ್ಲಿ ರೀಫಂಡ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ರೀಫಂಡ್​ ಸ್ಟೇಟಸ್ :ಅರ್ಹತೆ ಹೊಂದಿದ್ದೂ ಇನ್ನೂ ರೀಫಂಡ್ ಸಿಗದ ತೆರಿಗೆ ಪಾವತಿದಾರರು ತಮಗೆ ರೀಫಂಡ್ ಆಗಿದೆಯಾ ಎಂದು ಪರಿಶೀಲಿಸಲು ನೇರ ಲಿಂಕ್​ ಆದ tin.tin.nsdl.com/oltas/refund-status-pan.html ಗೆ ಭೇಟಿ ನೀಡಬಹುದು. ಟ್ಯಾಕ್ಸ್ ರೀಫಂಡ್ಅನ್ನು ರೀಫಂಡ್ ಬ್ಯಾಂಕರ್​ಗೆ ಕಳುಹಿಸಿದ 10 ದಿನಗಳ ನಂತರ ಈ ಬಗ್ಗೆ ಮಾಹಿತಿ ದೊರಕಲಿದೆ. ಪಾನ್ ಸಂಖ್ಯೆ ಮತ್ತು ಅಸೆಸ್​​ಮೆಂಟ್ ಇಯರ್​ಗಳ ಮಾಹಿತಿ ತುಂಬಿ ರೀಫಂಡ್ ಸ್ಟೇಟಸ್ ಅರಿಯಬಹುದಾಗಿದೆ. ಆದಾಗ್ಯೂ ರೀಫಂಡ್ ಆಗಿರದಿದ್ದಲ್ಲಿ ಇಲಾಖೆಯ ಅಧಿಕೃತ ವೆಬ್​ಸೈಟ್ ಮೂಲಕ ದೂರು ಸಲ್ಲಿಸಬಹುದಾಗಿದೆ.(ಏಜೆನ್ಸೀಸ್)
VIDEO | ಭಾರತಕ್ಕೆ ಹಾರಿದ ರಫೇಲ್ ಫೈಟರ್ ಜೆಟ್​ಗಳು

ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

ನಾಳೆಯಿಂದ 45 ತುಂಬಿದ ಎಲ್ಲರಿಗೂ ಲಸಿಕೆ : ಸಮರ್ಪಕ ಕಾರ್ಯಾಚರಣೆಗೆ ಕೇಂದ್ರದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
